More

    ದಾಖಲೆ ಬರೆದ ರಿಲಯನ್ಸ್​ ಷೇರು ಬೆಲೆ: ಮತ್ತಷ್ಟು ಹೆಚ್ಚಳವಾಗಲಿದೆ ಎನ್ನುತ್ತಾರೆ ತಜ್ಞರು; ವಿವಿಧ ಬ್ರೋಕರೇಜ್​ ಸಂಸ್ಥೆಗಳ ಟಾರ್ಗೆಟ್​ ಪ್ರೈಸ್​ ಹೀಗಿದೆ…

    ಮುಂಬೈ: ಉದ್ಯಮಿ ಮುಖೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ (Reliance Industries Ltd) ಕಂಪನಿಯ ಷೇರುಗಳ ಬೆಲೆ ಸೋಮವಾರ ದಾಖಲೆ ಸೃಷ್ಟಿಸಿದೆ. ಸೋಮವಾರದ ವಹಿವಾಟಿನಲ್ಲಿ ಕಂಪನಿಯ ಷೇರುಗಳ ಬೆಲೆ ಮೊದಲ ಬಾರಿಗೆ 3,000 ರೂಪಾಯಿ ದಾಟಿತು. 2% ರಷ್ಟು ಏರಿಕೆ ಕಂಡು ಸಾರ್ವಕಾಲಿಕ ದಾಖಲೆಯ ಗರಿಷ್ಠ ಬೆಲೆಯಾದ 3024.90 ರೂಪಾಯಿ ತಲುಪಿತು.

    ಬ್ರೋಕರೇಜ್ ಸಂಸ್ಥೆಗಳ ಪ್ರಕಾರ, ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳ ಬೆಲೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಈ ಷೇರುಗಳ ಬೆಲೆ ಈ ವರ್ಷದಿಂದ ಆರಂಭದಿಂದ ಇದುವರೆಗೆ 16% ಮತ್ತು ಕಳೆದ ಒಂದು ವರ್ಷದಲ್ಲಿ 36.52% ರಷ್ಟು ಹೆಚ್ಚಾಗಿದೆ.

    ಗುರಿ ಬೆಲೆ (ಟಾರ್ಗೆಟ್​ ಪ್ರೈಸ್​) ಎಷ್ಟು?:

    ಮೋತಿಲಾಲ್ ಓಸ್ವಾಲ್ ಬ್ರೋಕರೇಜ್ ಸಂಸ್ಥೆಯು ಈ ಲಾರ್ಜ್‌ ಕ್ಯಾಪ್ ಸ್ಟಾಕ್‌ಗೆ ರೂ 3210 ಗುರಿ ಬೆಲೆಯನ್ನು ನೀಡಿದೆ. ಇನ್ನೊಂದು ಬ್ರೋಕರೇಜ್​ ಸಂಸ್ಥೆಯಾದ ಜೆಫರೀಸ್ ಇಂಡಿಯಾ, ಈ ಸ್ಟಾಕ್ ಬೆಲೆಯ ಗುರಿಯನ್ನು ಶೇಕಡಾ 7 ರಿಂದ 3,140 ರೂಪಾಯಿ ಏರಿಸಿದೆ. ಮತ್ತೊಂದು ಬ್ರೋಕರೇಜ್​ ಸಂಸ್ಥೆಯಾದ ಎಲಾರಾ ಸೆಕ್ಯುರಿಟೀಸ್, ಈ ಷೇರಿನ ಗುರಿ ಬೆಲೆಯನ್ನು 3,354 ರೂ.ಗೆ ನಿಗದಿಪಡಿಸಿದೆ.

    ಪೆಟ್ರೋಲಿಯಂ ಉತ್ಪನ್ನಗಳು, ಪಾಲಿಯೆಸ್ಟರ್ ಉತ್ಪನ್ನಗಳು, ಪ್ಲಾಸ್ಟಿಕ್‌ಗಳು, ಪಾಲಿಮರ್, ರಾಸಾಯನಿಕಗಳು, ಸಿಂಥೆಟಿಕ್ ಜವಳಿ ಮತ್ತು ಬಟ್ಟೆಗಳ ತಯಾರಿಕೆಯಲ್ಲಿ ಈ ಕಂಪನಿ ತೊಡಗಿದೆ. ತೈಲ ಮತ್ತು ಅನಿಲದ ಪರಿಶೋಧನೆ ಮತ್ತು ಉತ್ಪಾದನೆಯಲ್ಲೂ ಈ ಕಂಪನಿ ಕಾರ್ಯನಿರ್ವಹಿಸುತ್ತದೆ.

    715ರಿಂದ 8 ರೂಪಾಯಿಗೆ ಕುಸಿದ ಷೇರು: ಈಗ ಬೇಡಿಕೆ ಪಡೆದುಕೊಂಡು ಅಪ್ಪರ್ ಸರ್ಕ್ಯೂಟ್ ಹಿಟ್ ಆಗಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts