More

    404 ರಿಂದ 24 ರೂಪಾಯಿಗೆ ಕುಸಿದ ಷೇರು: 100 ರೂಪಾಯಿ ತಲುಪುತ್ತದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು

    ಮುಂಬೈ: ಯೆಸ್ ಬ್ಯಾಂಕ್ ಷೇರುಗಳು ಈ ದಿನಗಳಲ್ಲಿ ಹೆಚ್ಚು ಗಮನಸೆಳೆಯುತ್ತಿವೆ. ಈ ಕಂಪನಿಯ ಷೇರುಗಳು ಕಳೆದ ಹಲವಾರು ಸೆಷನ್‌ಗಳಿಂದ ಭಾರಿ ಏರಿಳಿತಗಳನ್ನು ಕಂಡಿವೆ. ಸೋಮವಾರ ಈ ಷೇರು ಬೆಲೆ ಶೇ. 2ರಷ್ಟು ಕುಸಿದು 24.80 ರೂಪಾಯಿ ತಲುಪಿದೆ.

    ಪ್ರಸ್ತುತ ಈ ಸ್ಟಾಕ್ ತನ್ನ 52 ವಾರದ ಗರಿಷ್ಠ ಬೆಲೆಯಾದ 32.81 ರಿಂದ 24% ನಷ್ಟು ಕಡಿಮೆಯಾಗಿದೆ. ಆದರೂ, ಈ ಸ್ಟಾಕ್ ಬೆಲೆ ವರ್ಷದ ಆರಂಭದಿಂದ ಇದುವರೆಗೆ 9.71% ಹೆಚ್ಚಾಗಿದೆ.

    ಅಚ್ಚರಿಯ ಸಂಗತಿಯೆಂದರೆ, 2018 ರಲ್ಲಿ ಯೆಸ್ ಬ್ಯಾಂಕ್ ಷೇರು ಬೆಲೆ 380 ರೂಪಾಯಿ ಇತ್ತು. ಈ ಷೇರಿನ ಸಾರ್ವಕಾಲಿಕ ಗರಿಷ್ಠ ಬೆಲೆ 404 ರೂಪಾಯಿ ಹಾಗೂ ಕನಿಷ್ಠ ಬೆಲೆ 5.65 ರೂಪಾಯಿ.

    ಯೆಸ್ ಬ್ಯಾಂಕ್ ಷೇರುಗಳು ರೂ 29 ನಲ್ಲಿ ಬ್ರೇಕೌಟ್ ಆಗುವ ಅಗತ್ಯವಿದೆ ಎಂದು ಹೇಳಿದರು. ಇದಲ್ಲದೆ, ಈ ಷೇರು ರೂ 30 ದಾಟಿದರೆ, ಮತ್ತೊಮ್ಮೆ ಅದರಲ್ಲಿ ಹೊಸ ಏರಿಕೆಯನ್ನು ಕಾಣಬಹುದು. ಈ ಸ್ಟಾಕ್‌ನ ಚಾರ್ಟ್‌ನಲ್ಲಿ ರೂಪುಗೊಂಡ ಮಾದರಿಯ ಪ್ರಕಾರ, ಮುಂದಿನ ಐದು ವರ್ಷಗಳಲ್ಲಿ ಈ ಸ್ಟಾಕ್ 100 ರೂಪಾಯಿ ಹೋಗಬಹುದು ಎಂದು ಮಾರುಕಟ್ಟೆ ಪರಿಣಿತ ಪ್ರಕಾಶ್ ಗಾಬಾ ಹೇಳಿದ್ದಾರೆ. ಪ್ರಕಾಶ್​ ಗಾಬಾ ಅವರು ಸೆಬಿ (SEBI) ನೋಂದಾಯಿತ ಸಂಶೋಧನಾ ವಿಶ್ಲೇಷಕರಾಗಿದ್ದಾರೆ.

    ಕಳೆದ ಕೆಲವು ತಿಂಗಳುಗಳಲ್ಲಿ ಯೆಸ್ ಬ್ಯಾಂಕ್ ಷೇರುಗಳು ಉತ್ತಮ ಏರಿಕೆ ಕಂಡಿವೆ. ಕಳೆದ 6 ತಿಂಗಳಲ್ಲಿ ಯೆಸ್ ಬ್ಯಾಂಕ್ ಷೇರುಗಳ ಬೆಲೆ 36.91% ಕ್ಕಿಂತ ಹೆಚ್ಚು ಏರಿಕೆಯಾಗಿದೆ. ಈ ಷೇರು ಒಂದು ವರ್ಷದಲ್ಲಿ 47.04% ಏರಿಕೆಯಾಗಿದೆ. ಡಿಸೆಂಬರ್ 2023ಕ್ಕೆ ಕೊನೆಗೊಳ್ಳುವ ತ್ರೈಮಾಸಿಕದಲ್ಲಿ ಯೆಸ್ ಬ್ಯಾಂಕ್ ರೂ. 231 ಕೋಟಿ ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಯೆಸ್ ಬ್ಯಾಂಕ್ 51 ಕೋಟಿ ರೂ. ಲಾಭ ಗಳಿಸಿತ್ತು.

    ಶಾಸಕರು/ ಸಂಸದರ ವಿರುದ್ಧ ಕಾನೂನು ಕ್ರಮಕ್ಕೆ ವಿನಾಯಿತಿ ರದ್ದು: ಸುಪ್ರೀಂ ಕೋರ್ಟ್​ನ ಐತಿಹಾಸಿಕ ತೀರ್ಪಿನ ಮಹತ್ವವೇನು? ಇಲ್ಲಿದೆ ವಿವರವಾದ ವಿಶ್ಲೇಷಣೆ…

    ಸತತ 4ನೇ ದಿನ ಗೂಳಿಯ ಗುಟುರು: ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿ ದಾಖಲೆ ಬರೆದ ಷೇರು ಸೂಚ್ಯಂಕ

    ಸೋಮವಾರ ಒಂದೇ ದಿನದಲ್ಲಿ 20% ಏರಿಕೆ ಕಂಡ ಸ್ಟಾಕ್‌ಗಳು: ಟ್ರೇಡಿಂಗ್​ ಸೆಟಪ್ ನೋಡಿದರೆ ಮಂಗಳವಾರವೂ ಇವುಗಳಿಗೆ ಬೇಡಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts