More

    715ರಿಂದ 8 ರೂಪಾಯಿಗೆ ಕುಸಿದ ಷೇರು: ಈಗ ಬೇಡಿಕೆ ಪಡೆದುಕೊಂಡು ಅಪ್ಪರ್ ಸರ್ಕ್ಯೂಟ್ ಹಿಟ್ ಆಗಿದ್ದೇಕೆ?

    ಮುಂಬೈ: ಫ್ಯೂಚರ್ ಗ್ರೂಪ್​ನ ದೈತ್ಯ ಕಂಪನಿ ಫ್ಯೂಚರ್ ಸಪ್ಲೈ ಚೈನ್ ಸೊಲ್ಯೂಷನ್ಸ್ (Future Supply Chain Solutions Ltd.) ಷೇರುಗಳ ಮೇಲೆ ಹೂಡಿಕೆದಾರರು ಸೋಮವಾರ ಮುಗಿಬಿದ್ದರು. ಈ ಸ್ಟಾಕ್ ವಾರದ ಮೊದಲ ವಹಿವಾಟಿನ ದಿನವಾದ ಸೋಮವಾರದಂದು 5 ಶೇಕಡಾ ಅಪ್ಪರ್ ಸರ್ಕ್ಯೂಟ್ ಹಿಟ್ ಆಯಿತು.

    ಈಗ ಈ ಷೇರಿನ ಬೆಲೆ 8.50 ರೂಪಾಯಿಗೆ ತಲುಪಿದೆ. ಈ ಷೇರಿನ 52 ವಾರಗಳ ಕನಿಷ್ಠ ಬೆಲೆ 8 ರೂಪಾಯಿ ಆಗಿದೆ. ಕಳೆದ ವರ್ಷ ಮಾರ್ಚ್‌ನಲ್ಲಿ ಈ ಷೇರು 18.45 ರೂ ಆಗಿದ್ದು, ಇದು 52 ವಾರಗಳ ಗರಿಷ್ಠ ಬೆಲೆಯಾಗಿದೆ.

    ಕಿಶೋರ್ ಬಿಯಾನಿಯವರ ಫ್ಯೂಚರ್ ಗ್ರೂಪ್‌ನ ಈ ಕಂಪನಿಯ ಸಾಲದಾತರು ಬಿಡ್‌ಗಳನ್ನು ಪರಿಗಣಿಸಲು ಸಮಯವನ್ನು ಪಡೆದಿದ್ದಾರೆ. ಎನ್‌ಸಿಎಲ್‌ಟಿ (National Company Law Tribunal- ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ) 45 ದಿನಗಳ ಕಾಲಾವಕಾಶ ನೀಡಿದೆ. ವಾಸ್ತವವಾಗಿ, ಪರಿಹಾರ ವೃತ್ತಿಪರ ರಾಜನ್ ರಾವತ್ ಅವರು ತಮ್ಮ ವಕೀಲರ ಮೂಲಕ ಎನ್‌ಸಿಎಲ್‌ಟಿಯಿಂದ 45 ದಿನಗಳ ವಿಸ್ತರಣೆಯನ್ನು ಕೋರಿದ್ದರು. ರಿಲಯನ್ಸ್ ರಿಟೇಲ್ ವೆಂಚರ್ಸ್ ಹೊರತುಪಡಿಸಿ, ತತ್ಕಾಲ್ ಲೋನ್ ಇಂಡಿಯಾ ಕೂಡ ಬಿಡ್ ಮಾಡಿದೆ. ಇದೇ ಸಮಯದಲ್ಲಿ, ಒನ್ ಸಿಟಿ ಇನ್ಫ್ರಾಸ್ಟ್ರಕ್ಚರ್, ಗ್ಲೋಬ್ ಇಕಾಲಜಿ, ಟ್ರಕ್ಸ್ ಲಾಜಿಸ್ಟಿಕ್ಸ್ ಸೊಲ್ಯೂಷನ್ಸ್ ಮತ್ತು ಸುಗಾನಾ ಮೆಟಲ್ಸ್ ಕೂಡ ದಿವಾಳಿತನ ಪ್ರಕ್ರಿಯೆಯ ಮೂಲಕ ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳಲು ಆಸಕ್ತಿಯನ್ನು ವ್ಯಕ್ತಪಡಿಸಿವೆ.

    ಫ್ಯೂಚರ್ ಸಪ್ಲೈ ಚೈನ್ ಸೊಲ್ಯೂಷನ್ಸ್‌ನ ಸಾಲದಾತ DHL ಇ-ಕಾಮರ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಜನವರಿ ತಿಂಗಳಲ್ಲಿ ದಿವಾಳಿತನ ಪ್ರಕ್ರಿಯೆಯನ್ನು ಪ್ರಾರಂಭಿಸಲು ಅರ್ಜಿಯನ್ನು ಸಲ್ಲಿಸಿದೆ. ಕಂಪನಿಯು ಅಂದಾಜು 7.26 ಕೋಟಿ ರೂಪಾಯಿ ಮನ್ನಾ ಮಾಡಿತ್ತು.

    ದಿವಾಳಿಯಾದ ಕಂಪನಿಯ ಪ್ರಮುಖ ಸಾಲದಾತರಲ್ಲಿ ಡಿಎಫ್‌ಸಿ ಫಸ್ಟ್ ಬ್ಯಾಂಕ್ (ರೂ. 158 ಕೋಟಿ), ಜೆಸಿ ಫ್ಲವರ್ಸ್ ಅಸೆಟ್ ರೀಕನ್‌ಸ್ಟ್ರಕ್ಷನ್ (ರೂ. 63 ಕೋಟಿ), ಅಜೀಂ ಪ್ರೇಮ್‌ಜಿ ಟ್ರಸ್ಟ್ (ರೂ. 274 ಕೋಟಿ) ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ರೂ. 45 ಕೋಟಿ) ಇವೆ.

    2018 ರಲ್ಲಿ, ಫ್ಯೂಚರ್ ಸಪ್ಲೈ ಚೈನ್ ಸೊಲ್ಯೂಷನ್ಸ್ ಷೇರಿನ ಬೆಲೆ 715 ರೂ ಇತ್ತು. ಅಲ್ಲಿಂದ ಇಲ್ಲಿಯವರೆಗೆ ಈ ಷೇರಿನ ಬೆಲೆ ಇದುವರೆಗೆ ಶೇ. 99ರಷ್ಟು ಕುಸಿದಿದೆ. ಈ ಕಂಪನಿಯು ಲಾಜಿಸ್ಟಿಕ್ಸ್ ವ್ಯವಹಾರದಲ್ಲಿ ಸಕ್ರಿಯವಾಗಿದೆ.

    404 ರಿಂದ 24 ರೂಪಾಯಿಗೆ ಕುಸಿದ ಷೇರು: 100 ರೂಪಾಯಿ ತಲುಪುತ್ತದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು

    ಶಾಸಕರು/ ಸಂಸದರ ವಿರುದ್ಧ ಕಾನೂನು ಕ್ರಮಕ್ಕೆ ವಿನಾಯಿತಿ ರದ್ದು: ಸುಪ್ರೀಂ ಕೋರ್ಟ್​ನ ಐತಿಹಾಸಿಕ ತೀರ್ಪಿನ ಮಹತ್ವವೇನು? ಇಲ್ಲಿದೆ ವಿವರವಾದ ವಿಶ್ಲೇಷಣೆ…

    ಸತತ 4ನೇ ದಿನ ಗೂಳಿಯ ಗುಟುರು: ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿ ದಾಖಲೆ ಬರೆದ ಷೇರು ಸೂಚ್ಯಂಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts