

ನವದೆಹಲಿ: ಚೀನಿ ಆ್ಯಪ್ಗಳನ್ನು ನಿಷೇಧ ಮಾಡಿದ ಬೆನ್ನಲ್ಲೇ ಭಾರತೀಯ ಅದರಲ್ಲೂ ಪ್ರಾದೇಶಿಕ ಭಾಷೆಗಳಲ್ಲಿ ಸೇವೆ ನೀಡುವ ಆ್ಯಪ್ಗಳಲಿಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ.
ಅಂತೆಯೇ, ದೇಶೀಯ ಸಾಮಾಜಿಕ ಜಾಲ ತಾಣದ ಆ್ಯಪ್ ಶೇರ್ ಚಾಟ್ ಅನ್ನು ಕೇವಲ 36 ಗಂಟೆಗಳಲ್ಲಿ 1.50 ಕೋಟಿ ಜನರು ಡೌನ್ಲೋಡ್ ಮಾಡಿಕೊಂಡಿದ್ದಾರೆ ಎಂದು ಆ್ಯಪ್ ರೂಪಿಸಿದ ಕಂಪನಿ ಮಾಹಿತಿ ನೀಡಿದೆ. ಇದರರ್ಥ ಪ್ರತಿ ಗಂಟೆಗೆ ಐದು ಲಕ್ಷ ಜನರು ಇದನ್ನು ಬಳಕೆ ಇನ್ಸ್ಟಾಲ್ ಮಾಡಿಕೊಂಡಿದ್ದಾರೆ.
ಇದಲ್ಲದೇ, ಹಲವು ವಿಶೇಷತೆಗಳನ್ನು ಪಟ್ಟಿ ಮಾಡಿದೆ. ಚೀನಾ ಆ್ಯಪ್ಗಳನ್ನು ಬ್ಯಾನ್ ಮಾಡಿರುವ ಕೇಂದ್ರ ಸರ್ಕಾರದ ನಿಧಾ್ರವನ್ನು ಬೆಂಬಲಿಸಿ ಒಂದು ಲಕ್ಷಕ್ಕೂ ಅಧಿಕ ಪೋಸ್ಟ್ಗಳು ದಾಖಲಾಗಿವೆ ಎಂದು ಕಂಪನಿ ತಿಳಿಸಿದೆ.
ಜನರ ಪ್ರತಿಕ್ರಿಯೆಯಿಂದ ಭಾರಿ ಸಂತಸವಾಗಿದೆ. ಇದು ಇನ್ನೊಂದು ಯಶಸ್ಸಿಗೆ ಅಡಿಪಾಯವಾಗಲಿದೆ ಎಂದು ಕಂಪನಿ ಸಹ- ಸಂಸ್ಥಾಪಕ ಫರೀದ್ ಅಹ್ಸಾನ್ ಹೇಳಿದ್ದಾರೆ.
ಕನ್ನಡವೂ ಸೇರಿ 15 ಭಾರತೀಯ ಭಾಷೆಗಳಲ್ಲಿ ಈ ಆ್ಯಪ್ ಲಭ್ಯವಿದೆ. 1.50 ಕೋಟಿ ನೋಂದಾಯಿತ ಬಳಕೆದಾರರು ಹಾಗೂ ಮಾಸಿಕ 60 ಲಕ್ಷ ಸಕ್ರಿಯ ಬಳಕೆದಾರರನ್ನು ಹೊಂದಿರುವುದಾಗಿ ಕಂಪನಿ ತಿಳಿಸಿದೆ.
ಎಲ್ಲಕ್ಕೂ ಮುಖ್ಯ ಸಂಗತಿ ಎಂದರೆ ಇದು ಬೆಂಗಳೂರಿನ ಆ್ಯಪ್. ಈ ಸ್ಟಾರ್ಟಪ್ ಕಂಪನಿಯಲ್ಲಿ ಟ್ವಿಟರ್ ಕೂಡ ಹೂಡಿಕೆ ಮಾಡಿದೆ. ಕಳೆದ ವರ್ಷ ಈ ಕಂಪನಿ 700 ಕೋಟಿ ರೂ. ಹೂಡಿಕೆ ಗಳಿಸಿತ್ತು.