ಗಂಗೊಳ್ಳಿ: ಇಲ್ಲಿನ ಶ್ರೀ ಶಾರದೋತ್ಸವ ಸಮಿತಿಯ ಸುವರ್ಣ ಮಹೋತ್ಸವ ಅಂಗವಾಗಿ ಲೋಕಕಲ್ಯಾಣಾರ್ಥ ಸಂಕಲ್ಪದೊಂದಿಗೆ ಆಯೋಜಿಸಿದ ಶಾರದಾ ದೇವಿಯ ಕೋಟಿ ಸ್ತುತಿ ಪಠಣಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಪುರೋಹಿತ ಜಿ.ರಾಘವೇಂದ್ರ ಆಚಾರ್ಯ ಧಾರ್ಮಿಕ ವಿಧಿವಿಧಾನ ನೆರವೇರಿಸಿ ಚಾಲನೆ ನೀಡಿದರು. ಸಮಿತಿ ಅಧ್ಯಕ್ಷ ಸತೀಶ ಜಿ, ಮಹಿಳಾ ಸಮಿತಿ ಅಧ್ಯಕ್ಷೆ ಸವಿತಾ ಯು.ದೇವಾಡಿಗ, ಕಾರ್ಯದರ್ಶಿ ಸುಜಾತಾ ಬಾಬು ಖಾರ್ವಿ, ರವೀಂದ್ರ ಪಟೇಲ್, ಸೌಪರ್ಣಿಕಾ ಬಸವ ಖಾರ್ವಿ, ಶಕುಂತಲಾ ಬಿ.ಖಾರ್ವಿ, ಸುರೇಶ್ ಜಿಎಫ್‌ಸಿಎಸ್, ಸುವರ್ಣ ಮಹೋತ್ಸವ ಸಮಿತಿ ಸದಸ್ಯರು, ಮಹಿಳಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.