

ಹೆಬ್ರಿ: ಬಂಟರ ಯಾನೆ ನಾಡವರ ಸಂಘ ಹೆಬ್ರಿ ಅಜೆಕಾರ್ ವಲಯ ಆಶ್ರಯದಲ್ಲಿ ಹೆಬ್ರಿ ಗಾಂಧಿನಗರ ಮೆಸ್ಕಾಂ ಆಫೀಸ್ ಮುಂಭಾಗದ ಕೃಷಿ ಗದ್ದೆಯಲ್ಲಿ ಭಾನುವಾರ ಕೆಸರ್ಡೊಂಜಿ ಬಂಟ ಕೂಟ ಕಾರ್ಯಕ್ರಮವನ್ನು ಉದ್ಯಮಿ ಪಿ.ಸುಧಾಕರ ಶೆಟ್ಟಿ ಉದ್ಘಾಟಿಸಿದರು.
ಬಂಟ ಸಮುದಾಯದವರಿಗೆ ಹಲವು ಸ್ಪರ್ಧೆಗಳು ನಡೆಯಿತು. ಸಮುದಾಯದ ಪ್ರಮುಖರಾದ ಭಾನು ಪಿ.ಬಳ್ಳಾಲ್, ಪ್ರವೀಣ್ ಬಲ್ಲಾಳ್, ಮುನಿಯಾಲು ಉದಯ್ ಶೆಟ್ಟಿ, ಅಮರನಾಥ ಹೆಗಡೆ, ಸೀತಾನದಿ ವಿಠ್ಠಲ್ ಶೆಟ್ಟಿ, ದಿನೇಶ್ ಶೆಟ್ಟಿ ಹುತ್ತುರ್ಕೆ, ವಾದಿರಾಜ ಶೆಟ್ಟಿ, ಹರ್ಷ ಶೆಟ್ಟಿ, ದಯಾನಂದ ಶೆಟ್ಟಿ ಉಪಸ್ಥಿರಿದರು. ಸಮರೋಪದಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಿಸಲಾಯಿತು. ಉದ್ಯಮಿ ಹರೀಶ್ ಶೆಟ್ಟಿ ಬಾದ್ಲು, ಪ್ರಮುಖರಾದ ಪ್ರಕಾಶ್ ಶೆಟ್ಟಿ, ಸಂದೀಪ್ ಶೆಟ್ಟಿ ಅಜೆಕಾರ್, ಭಾಸ್ಕರ ಶೆಟ್ಟಿ ಕುಂಟಿನಿ, ರವೀಂದ್ರನಾಥ ಶೆಟ್ಟಿ ಉಪಸ್ಥಿತರಿದ್ದರು.