ಕೋಟ: ಪಾಂಡೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಆಚರಣೆ ಬಗ್ಗೆ ಪೂರ್ವಭಾವಿ ಸಭೆ ಇತ್ತೀಚೆಗೆ ಶಾಲಾ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭ ಶತಮಾನೋತ್ಸವ ಸಮಿತಿ ರಚಿಸಲಾಗಿದ್ದು, ನೂತನ ಅಧ್ಯಕ್ಷರಾಗಿ ಉದ್ಯಮಿ ಎಂ.ಸಿ. ಚಂದ್ರಶೇಖರ್‌ಆಯ್ಕೆಯಾದರು.
ಗೌರವಾಧ್ಯಕ್ಷರಾಗಿಸುನಿಲ್ ಡಿಸಿಲ್ವ , ಗೌರವ ಸಲಹೆಗಾರರಾಗಿ ಎ.ಪಿ ಮದ್ಯಸ್ಥ, ರಮೇಶ್, ಶೇಖರ್ ಪೂಜಾರಿ, ಸುಶೀಲಾ ಪೂಜಾರಿ, ಉಪಾಧ್ಯಕ್ಷರಾಗಿ ನಾರಾಯಣ ಆಚಾರ್, ಲೀಲಾವತಿ ಗಂಗಾಧರ ಪೂಜಾರಿ ಆಯ್ಕೆಯಾಗಿದ್ದಾರೆ. ಜತೆ ಪ್ರಧಾನ ಕಾರ್ಯದರ್ಶಿಯಾಗಿ ದಿನಕರ್, ಜತೆ ಕಾರ್ಯದರ್ಶಿಯಾಗಿ ರಾಜೇಂದ್ರ ಪೂಜಾರಿ, ಕೋಶಾಧಿಕಾರಿಯಾಗಿ ವಿಶ್ವನಾಥ್ ಆಚಾರ್ ಆಯ್ಕೆಯಾದರು. ಉಳಿದ ಉಪ ಸಮಿತಿಗಳನ್ನು ಆಗಸ್ಟ್ ಅಂತ್ಯದೊಳಗೆ ರಚಿಸುವ ಕುರಿತು ತೀರ್ಮಾನಿಸಲಾಯಿತು. ಕೃಷ್ಣ ಸ್ವಾಗತಿಸಿದರು. ಆಲ್ವಿನ್ ಅಂದ್ರದೆ ಕಾರ್ಯಕ್ರಮ ನಿರೂಪಿಸಿದರು.