ಗುರಿಕಾರರಿಗೆ ಗೌರವಧನ ವಿತರಣೆ

mogaveera
ಕೋಟ ಕರಾವಳಿ ಮೊಗವೀರ ಮಹಾಜನ ಸಂಘ ಪದಾಧಿಕಾರಿಗಳ ಪದಪ್ರದಾನ ಜರುಗಿತು.
Published on

ಕೋಟ: ಕೋಟ ಕರಾವಳಿ ಮೊಗವೀರ ಮಹಾಜನ ಸಂಘ ಪದಾಧಿಕಾರಿಗಳ ಪದಪ್ರದಾನ, ವಿದ್ಯಾರ್ಥಿವೇತನ, ಗುರಿಕಾರರಿಗೆ ಗೌರವಧನ ವಿತರಣೆ ಭಾನುವಾರ ಸಾಲಿಗ್ರಾಮದಲ್ಲಿ ನೆರವೇರಿತು.

ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ.ಜಿ ಶಂಕರ್ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಆನಂದ ಸಿ. ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಕೃಷ್ಣಮೂರ್ತಿ ಮರಕಾಲ ಅವರನ್ನು ಅಭಿನಂದಿಸಲಾಯಿತು. ಎಂಬಿಬಿಎಸ್ ವಿದ್ಯಾರ್ಥಿನಿ ನಾಗಶ್ರೀ ಡಾ.ಕೃಷ್ಣ ಕಾಂಚನ್, ಕೃಷ್ಣಮೂರ್ತಿ ಮರಕಾಲ, ಕೋಟತಟ್ಟು ಗ್ರಾಪಂ ಅಧ್ಯಕ್ಷ ಸತೀಶ್ ಕುಂದರ್ ಸನ್ಮಾನಿಸಲಾಯಿತು.

ಮೊಗವೀರ ಮಹಾಜನ ಸಂಘ ಉಚ್ಚಿಲ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಬಾರ್ಕೂರು ಮೊಗವೀರ ಸಂಯುಕ್ತ ಸಭಾ ಅಧ್ಯಕ್ಷ ಸತೀಶ್ ಅಮೀನ್, ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲಾಧ್ಯಕ್ಷ ಜಯಂತ್ ಅಮೀನ್ ಕೋಡಿ, ಕೋಟ ಸಹಕಾರಿ ವ್ಯವಸಾಯಕ ಸಂಘ ಅಧ್ಯಕ್ಷ ಡಾ.ಕೃಷ್ಣ ಕಾಂಚನ್, ಮನೋವೈದ್ಯ ಡಾ.ಪ್ರಕಾಶ್ ತೋಳಾರ್, ಸಿಎ ಪದ್ಮನಾಭ ಕಾಂಚನ್, ಮೊಗವೀರ ಯುವ ಸಂಘಟನೆ ಸಾಲಿಗ್ರಾಮ ಘಟಕ ಅಧ್ಯಕ್ಷ ಕಿರಣ್ ಕುಂದರ್, ಕೋಟ ಘಟಕ ಅಧ್ಯಕ್ಷ ರಂಜಿತ್ ಕುಮಾರ್ ಉಪಸ್ಥಿತರಿದ್ದರು. ಮಹಾಜನ ಸಂಘ ಕಾರ್ಯದರ್ಶಿ ಕೃಷ್ಣಮೂರ್ತಿ ಮರಕಾಲ ಪ್ರಸ್ತಾವನೆ ಸಲ್ಲಿಸಿದರು. ನಿಯೋಜಿತ ಕಾರ್ಯದರ್ಶಿ ಚಂದ್ರ ಬಂಗೇರ ಸ್ವಾಗತಿಸಿದರು. ಶಿವರಾಮ್ ಕೆ.ಎಂ ನಿರೂಪಿಸಿದರು. ಕೃಷ್ಣ ಶ್ರೀಯಾನ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net