ಅಧಿಕಾರ ಪರ್ವಕ್ಕೆ ಹಸಿರು ನಿಶಾನೆ : ಕಾಪು ಪುರಸಭೆ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಗೆ ಮೀಸಲು ಪ್ರಕಟ

purasoudha

ಹೇಮನಾಥ್ ಪಡುಬಿದ್ರಿ

ಚುನಾವಣೆ ನಡೆದು 2 ವರ್ಷ 8 ತಿಂಗಳ ಬಳಿಕ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಮೀಸಲು ಪ್ರಕಟವಾಗುವ ಮೂಲಕ ಕಾಪು ಪುರಸಭೆಯಲ್ಲಿ ಚುನಾಯಿತ ಸದಸ್ಯರ ಅಧಿಕಾರ ಪರ್ವಕ್ಕೆ ಹಸಿರು ನಿಶಾನೆ ಸಿಕ್ಕಂತಾಗಿದೆ.

ಕಾಪು ಪುರಸಭೆಗೆ 2021ರ ಡಿಸೆಂಬರ್‌ನಲ್ಲಿ ಚುನಾವಣೆ ನಡೆದಿತ್ತು. ರಾಜ್ಯದಲ್ಲಿನ ಪುರಸಭೆ ಹಾಗೂ ತಾಲೂಕು ಮತ್ತು ಜಿಪಂಗಳ ಮೀಸಲು ಗೊಂದಲ ನ್ಯಾಯಾಲಯ ಮೆಟ್ಟಿಲೇರಿದ ಪರಿಣಾಮ ಅದೆಷ್ಟೋ ವರ್ಷಗಳೇ ಉರುಳಿದರೂ, ಪ್ರಕರಣ ಇತ್ಯರ್ಥವಾಗದೆ, ಮೀಸಲು ಘೋಷಣೆಯಾಗದೆ ಇಲ್ಲಿನ ಚುನಾಯಿತ ಸದಸ್ಯರು ಅಧಿಕಾರ ವಂಚಿತರಾಗಿದ್ದರು. 23 ಸದಸ್ಯ ಬಲದ ಪುರಸಭೆಯಲ್ಲಿ 12 ಸ್ಥಾನ ಗೆದ್ದಿರುವ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದ್ದು, ಹಿಂದಿನ ಅವಧಿಯಲ್ಲಿ 12 ಸ್ಥಾನ ಗೆದ್ದಿದ್ದ ಕಾಂಗ್ರೆಸ್ 7 ಸ್ಥಾನಗಳನ್ನು ಹೊಂದಿದೆ. ಮೊದಲ ಬಾರಿಗೆ ಜಾತ್ಯತೀತ ಜನತಾದಳ 1 ಹಾಗೂ ಎಸ್‌ಡಿಪಿಐನಿಂದ 3ಮಂದಿ ಗೆದ್ದು ಸದಸ್ಯರಾಗಿದ್ದಾರೆ.

6 ವರ್ಷಗಳನ್ನು ಕಂಡ ಮೊದಲ ಅವಧಿ

2015ರಲ್ಲಿ ರಾಜಕೀಯ ಪಕ್ಷಗಳ ಕೆಸರೆರಚಾಟದ ನಡುವೆ ಕಾಪು ಪುರಸಭೆ ಘೋಷಣೆಯಾಗಿ 2016ರಲ್ಲಿ ಪ್ರಥಮ ಸಾರ್ವತ್ರಿಕ ಚುನಾವಣೆ ನಡೆದು ಐದು ವರ್ಷಗಳಲ್ಲಿ ಪೂರ್ಣವಾಗಬೇಕಿದ್ದ ಜನಪ್ರತಿನಿಧಿ ಆಡಳಿತ 6 ವರ್ಷ ತನಕ ಮುಂದುವರೆದಿತ್ತು. ಅಂದು ಮೊದಲ 30 ತಿಂಗಳ ಅವಧಿಗೆ ಪರಿಶಿಷ್ಟ ಜಾತಿ ಮಹಿಳೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗೆ ಸಾಮಾನ್ಯ ಮೀಸಲು ನಿಗದಿಯಾಗಿತ್ತು. ಅದರಂತೆ ಬಹುಮತ ಪಡೆದಿದ್ದ ಕಾಂಗ್ರೆಸ್‌ನ ಪ್ರಥಮ ಅವಧಿ ಅಧಿಕಾರ 2018 ಡಿಸೆಂಬರ್ 3ಕ್ಕೆ ಕೊನೆಗೊಂಡಿತ್ತು. ಬಳಿಕ ಮೀಸಲು ವಿವಾದ ಕಾಡಿ, 22 ತಿಂಗಳ ನಂತರ 2020 ಅಕ್ಟೋಬರ್ 28ರಂದು ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆದು ಅಧ್ಯಕ್ಷರಾಗಿ ಪ್ರವರ್ಗ ಎ ಮೀಸಲಾತಿಯಿಂದ ಬಿಜೆಪಿ ಸದಸ್ಯ ಅಧ್ಯಕ್ಷ ಗಾದಿಗೇರಿದರೆ, ಪರಿಶಿಷ್ಟ ಜಾತಿ ಮೀಸಲಿನಂತೆ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನ ಅಲಂಕರಿಸಿ 2021 ಜೂನ್ 6ರವರೆಗೆ ಅಧಿಕಾರ ನಡೆಸಿತ್ತು.

ಮೈತ್ರಿಕೂಟಕ್ಕೆ ಅಧ್ಯಕ್ಷ ಗಾದಿ, ಉಪಾಧ್ಯಕ್ಷತೆಗೆ ಪೈಪೋಟಿ

ಶಾಸಕರು ಹಾಗೂ ಸಂಸದರ ಬೆಂಬಲ ಇಲ್ಲದೆಯೇ ಪುರಸಭೆಯಲ್ಲಿ 12 ಸದಸ್ಯರನ್ನು ಹೊಂದಿರುವ ಬಿಜೆಪಿ ರಾಜ್ಯದಲ್ಲಿನ ಜೆಡಿಎಸ್ ಜತೆಗಿನ ಮೈತ್ರಿಯಂದಾಗಿ ಓರ್ವ ಜೆಡಿಎಸ್ ಸದಸ್ಯ ಸೇರಿ ಸಂಖ್ಯಾಬಲ 13ಕ್ಕೆ ಹೆಚ್ಚಿಸಿಕೊಂಡಿದೆ. ಅಧ್ಯಕ್ಷ ಹುದ್ದೆಗೆ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷಸ್ಥಾನ ಪರಿಶಿಷ್ಟ ಜಾತಿಗೆ ಮೀಸಲು ನಿಗದಿಯಾಗಿದೆ. ಅದರಂತೆ ಮೈತ್ರಿಕೂಟ ಅಭ್ಯರ್ಥಿ ಅನಾಯಾಸವಾಗಿ ಅಧ್ಯಕ್ಷ ಸ್ಥಾನ ಪಡೆದರೆ, ಉಪಾಧ್ಯಕ್ಷ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿ ಇಲ್ಲದೆ ಕಾಂಗ್ರೆಸ್ ಹಾಗೂ ಎಸ್‌ಡಿಪಿಐ ನಡುವೆ ಪೈಪೋಟಿ ನಡೆಯುವ ಲಕ್ಷಣ ಕಾಣಿಸುತ್ತಿದೆ.

ಅಧ್ಯಕ್ಷ ಸ್ಥಾನಕ್ಕೆ 4 ಮಂದಿ ಅರ್ಹರು

ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಲ್ಲಿ ನಾಲ್ಕು ಮಂದಿ ಅರ್ಹರಿದ್ದು, ಹಿರಿಯ ಸದಸ್ಯೆ ಮೋಹಿನಿ ಶೆಟ್ಟಿ ಸಹಿತ ಹರಿಣಾಕ್ಷಿ ದೇವಾಡಿಗ, ಸರಿತಾ ಪೂಜಾರಿ, ಲತಾ ವಿ ದೇವಾಡಿಗ ರೇಸ್‌ನಲ್ಲಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಲ್ಲಿ ಸೂಕ್ತ ಅಭ್ಯರ್ಥಿಯಿಲ್ಲ. ಕಾಂಗ್ರೆಸ್‌ನ ವಿದ್ಯಾಲತಾ ಹಾಗೂ ಎಸ್‌ಡಿಪಿಐ ಸರಿತಾ ಶಿವಾನಂದ ಈ ಸ್ಥಾನಕ್ಕೆ ಅರ್ಹರಾಗಿದ್ದಾರೆ. ಇಬ್ಬರೂ ಸ್ಪರ್ಧಿಸಿದಲ್ಲಿ ಅಡ್ಡ ಮತದಾನ ನಡೆಯುವುದರಲ್ಲಿ ಸಂಶಯವಿಲ್ಲ.

ಸಾಮಾನ್ಯ ಮಹಿಳೆ ಮೀಸಲಿನಂತೆ ಕಾಪು ಪುರಸಭೆ ಅಧ್ಯಕ್ಷ ಗಾದಿಗೇರಲು ಪಕ್ಷದ 4 ಮಹಿಳಾ ಸದಸ್ಯರೂ ಅರ್ಹರೇ ಆಗಿದ್ದಾರೆ. ಇಲ್ಲಿಯೂ ಮೈತ್ರಿ ಮುಂದುವರೆಯಲಿದ್ದು, ಆಯ್ಕೆಯಾಗಿರುವ ಏಕ ಮಾತ್ರ ಜೆಡಿಎಸ್ ಸದಸ್ಯರೂ ನಮ್ಮೊಡನಿದ್ದಾರೆ. ಉಪಾಧ್ಯಕ್ಷತೆಗೆ ನಮ್ಮಲ್ಲಿ ಅಭ್ಯರ್ಥಿಗಳಿಲ್ಲ. ಶನಿವಾರ ಪಕ್ಷದ ಸಭೆ ಕರೆದು ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಬಗ್ಗೆ ಚರ್ಚಿಸಲಾಗುವುದು.
-ಜಿತೇಂದ್ರ ಶೆಟ್ಟಿ, ಅಧ್ಯಕ್ಷರು ಬಿಜೆಪಿ ಕಾಪು ಮಂಡಲ

ಕಾಪು ಪುರಸಭೆ ಅಧ್ಯಕ್ಷ ಚುನಾವಣೆಯಲ್ಲಿಯೂ ಮೈತ್ರಿ ಮುಂದುವರೆಯಲಿದ್ದು, ಎನ್‌ಡಿಎ ಒಕ್ಕೂಟ ಅಭ್ಯರ್ಥಿ ಅಧ್ಯಕ್ಷರಾಗಲಿದ್ದಾರೆ. ಕಾಪು ವಿಧಾನಸಭಾ ಕ್ಷೇತ್ರದ ರಾಜಧಾನಿಯಂತಿರುವ ಕಾಪು ಪುರಸಭೆ ಅಡಳಿತ ವಹಿಸಿಕೊಂಡವರು ದೂರದೃಷ್ಟಿಯಿಟ್ಟು ಕೆಲಸ ಮಾಡಬೇಕು.
-ಯೋಗೀಶ್ ಶೆಟ್ಟಿ ಬಾಲಾಜಿ, ಜಿಲ್ಲಾಧ್ಯಕ್ಷರು, ಜೆಡಿಎಸ್ ಉಡುಪಿ ಜಿಲ್ಲೆ

Share This Article

Kurukshetra | ಕುರುಕ್ಷೇತ್ರ ಯುದ್ಧದ ಕೊನೆಯಲ್ಲಿ ರಣಭೂಮಿಗೆ ದ್ರೌಪದಿಯನ್ನು ಶ್ರೀಕೃಷ್ಣ ಕರೆತಂದಿದ್ದೇಕೆ; ಪರಮಾತ್ಮ ಹೇಳಿದ್ದೇನು?

ಕುರುಕ್ಷೇತ್ರ(Kurukshetra) ಯುದ್ಧದಲ್ಲಿ ಎಲ್ಲಾರೂ ಮರಣ ಹೊಂದಲು ಕಾರಣ ಪಾಂಡವರಲ್ಲ ದ್ರೌಪದಿಯ ಕಣ್ಣೀರು. ಕುರುಕ್ಷೇತ್ರ ಯುದ್ಧ ಮುಗಿದ…

ನಿಮ್ಮ ಮಕ್ಕಳಿಗೆ ಪ್ರತಿನಿತ್ಯ ಟೀ ಕೊಡ್ತಿದ್ದೀರಾ? ಹೌದು ಎಂದಾದರೆ ಈ ವಿಚಾರಗಳು ನಿಮಗೆ ತಿಳಿದಿರಲೇಬೇಕು! Tea

Tea : ಜಗತ್ತಿನ ಬಹುತೇಕ ಜನರ ದಿನ ಆರಂಭವಾಗುವುದೇ ಟೀ ಅಥವಾ ಕಾಫಿಯಿಂದ. ದಿನಕ್ಕೆ ಒಂದು…

ನಿಮಗೆ ದೃಷ್ಟಿ ದೋಷವಾಗಿದ್ರೆ..ನಿಂಬೆ ಹಣ್ಣಿನಿಂದ ಹೀಗೆ ಮಾಡಿದರೆ ಸಾಕು! Drishti Dosha

Drishti Dosha: ಸಾಮಾನ್ಯವಾಗಿ ಕೆಟ್ಟ ದೃಷ್ಟಿ ಬಿದ್ದಿದೆ ಎಂಬ ಪದವನ್ನು ನಾವು ಸಾಮಾನ್ಯವಾಗಿ ಕೇಳುತ್ತಿರುತ್ತೇವೆ. ಮನೆ ವ್ಯವಹಾರ,…