More

    ಬಾಲಿವುಡ್​ನಲ್ಲಿ ತಯಾರಾದ ಕರುನಾಡ ಸಾಧಕಿಯ ಈ ಸಿನಿಮಾ ಶೀಘ್ರ ಅಮೆಜಾನ್​ನಲ್ಲಿ!

    ಓಟಿಟಿ ವೇದಿಕೆಯಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಒಂದಾದ ಮೇಲೊಂದರಂತೆ ಸಾಕಷ್ಟು ಬಾಲಿವುಡ್​ ಸಿನಿಮಾಗಳು ಆನ್​ಲೈನ್ ವೇದಿಕೆ ಏರುತ್ತಿವೆ. ಚಿತ್ರಮಂದಿರ ಬಿಟ್ಟು ನೇರವಾಗಿ ಫೋನ್​ನಲ್ಲಿಯೇ ಸಿನಿಮಾ ಬಿಡುಗಡೆ ಮಾಡಿಕೊಳ್ಳುತ್ತಿವೆ. ಕೆಲವೇ ಗಂಟೆಗಳ ಹಿಂದಷ್ಟೇ ಪವರ್​ಸ್ಟಾರ್ ಪುನೀತ್​ ನಿರ್ಮಾಣದ ಎರಡು ಸಿನಿಮಾಗಳು ಅಮೆಜಾನ್​ನಲ್ಲಿ ಬಿತ್ತರಗೊಳ್ಳಲಿವೆ ಎಂಬ ಮುನ್ಸೂಚನೆಯನ್ನೂ ಅವರು ನೀಡಿದ್ದರು. ಇದೀಗ ಬಾಲಿವುಡ್​ನಲ್ಲಿ ಸಿದ್ಧವಾಗಿರುವ ಕರುನಾಡ ಸಾಧಕಿಯ ಚಿತ್ರ ನೇರವಾಗಿ ಓಟಿಟಿಯಲ್ಲಿ ಬಿಡುಗಡೆ ಆಗಲು ಸಜ್ಜಾಗಿದೆ.

    ಇದನ್ನೂ ಓದಿ: ‘ಓಂ’ ಸಿಲ್ವರ್ ಜ್ಯೂಬಿಲಿಗೆ ಶಿವಣ್ಣ ಅಭಿಮಾನಿಗಳ ಭರ್ಜರಿ ಪ್ಲಾನ್!

    ಹಾಗಾದರೆ ಯಾವುದಾ ಸಿನಿಮಾ? ಹೌದು, ಮಾನವ ಕಂಪ್ಯೂಟರ್​ ಎಂದೇ ಖ್ಯಾತರಾದ ಶಕುಂತಲಾ ದೇವಿ ಕುರಿತ ಬಯೋಪಿಕ್​ ಬಾಲಿವುಡ್​ನಲ್ಲಿ ನಿರ್ಮಾಣವಾಗಿದೆ. ಶಕುಂತಲಾ ದೇವಿಯಾಗಿ ನಟಿ ವಿದ್ಯಾ ಬಾಲನ್​ ಪಾತ್ರಪೋಷಣೆ ಮಾಡಿದ್ದಾರೆ. ಅಮೆಜಾನ್​ಗೆ ಬರುವ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಹೇಳಿಕೊಂಡಿದ್ದು, ಯಾವಾಗ ಆಗಮನ ಎಂಬುದನ್ನು ಸದ್ಯಕ್ಕೆ ಗೌಪ್ಯವಾಗಿಟ್ಟಿದೆ.

    ಬಾಲಿವುಡ್​ನಲ್ಲಿ ತಯಾರಾದ ಕರುನಾಡ ಸಾಧಕಿಯ ಈ ಸಿನಿಮಾ ಶೀಘ್ರ ಅಮೆಜಾನ್​ನಲ್ಲಿ!

    ಇದನ್ನೂ ಓದಿ: ‘ಗಾಳಿಪಟ 2’ ತಂಡದೊಂದಿಗೆ ಕಾಣಿಸಿಕೊಂಡ ಜಗ್ಗೇಶ್ … ಯಾಕಿರಬಹುದು?

    ಮಾನವ ಕಂಪ್ಯೂಟರ್​ ಎಂದೇ ಕರೆಸಿಕೊಂಡಿರುವ ಶಕುಂತಲಾ ದೇವಿ ಮೂಲತಃ ಬೆಂಗಳೂರಿನವರು. 1929ರಲ್ಲಿ ಜನಿಸಿದ ಶಕುಂತಲಾ, ಚಿಕ್ಕಂದಿನಿಂದಲೂ ಬುದ್ಧಿವಂತೆ. ಅದರಲ್ಲೂ ಗಣಿತದಲ್ಲಿ ಅವರನ್ನು ಮೀರಿಸುವವರೇ ಇಲ್ಲ. ಅಂತ ಪ್ರತಿಭಾನ್ವಿತೆಗೆ 1982ರಲ್ಲಿ ಗಿನ್ನಿಸ್​ ಬುಕ್​ ಆಫ್​ ರೆಕಾರ್ಡ್​ನಲ್ಲಿ ಹೆಸರು ಸೇರ್ಪಡೆಯಾಯಿತು. ಸಾಕಷ್ಟು ಪುಸ್ತಕಗಳನ್ನೂ ಅವರು ಬರೆದಿದ್ದಾರೆ. ರಾಜಕೀಯದಲ್ಲೂ ಶಕುಂತಲಾ ಗುರುತಿಸಿಕೊಂಡು, ಲೋಕಸಭಾ ಚುನಾವಣೆಯಲ್ಲೂ ಸ್ಪರ್ಧಿಸಿದ್ದರು. ಹೀಗೆ ಒಂದು ಸಿನಿಮಾಕ್ಕೆ ಬೇಕಾದ ಎಲ್ಲ ಸರಕುಗಳು ಶಕುಂತಲಾ ಜೀವನದಲ್ಲಿ ಕಂಡಿದ್ದರಿಂದ, ನಿರ್ದೇಶಕಿ ಅನು ಮೆನನ್​ ಅವರ ಜೀವನವನ್ನೇ ಆಧರಿಸಿ ಸಿನಿಮಾ ಮಾಡಿದ್ದಾರೆ. ಆ ಚಿತ್ರ ಇನ್ನು ಕೆಲ ದಿನಗಳಲ್ಲಿ ಪ್ರೈಮ್​ನಲ್ಲಿ ಬಿಡುಗಡೆ ಆಗಲಿದೆ. (ಏಜೆನ್ಸೀಸ್​)

    ಸ್ವಿಗ್ಗಿ ಬಾಯ್ಸ್​ಗೆ ದರ್ಶನ್​ ಅಭಿಮಾನಿಗಳ ಕಡೆಯಿಂದ ಸ್ಮಾಲ್​ ಟ್ರೀಟ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts