VIDEO | ವೇದಿಕೆ ಮೇಲೆ ಪುತ್ರ ಅಬ್ರಾಮ್ ಕಂಡು ನಟ ಶಾರುಖ್ ಖಾನ್ ಕಣ್ಣೀರು! ಕಾರಣ ಹೀಗಿದೆ

ವಿಜಯವಾಣಿ (68)
Published on

ಮುಂಬೈ: ಪ್ರತಿಬಾರಿ ಸಿನಿಮಾದ ಮೂಲಕ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಸುದ್ದಿಯಾಗುವ ಬಾಲಿವುಡ್​ನ ಕಿಂಗ್ ಖಾನ್, ನಟ ಶಾರುಖ್ ಖಾನ್​, ಈ ಬಾರಿ ತಮ್ಮ ಕಿರಿಯ ಪುತ್ರ ಅಬ್​ರಮ್​ ಖಾನ್​ ತನ್ನಂತೆ ನಟಿಸಿದ ದೃಶ್ಯ ಕಂಡು ವೇದಿಕೆಯಲ್ಲಿ ಭಾವುಕರಾಗಿ ಚಪ್ಪಾಳೆ ತಟ್ಟಿದ್ದಾರೆ. ಈ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಬಾಲಿವುಡ್‌ನಲ್ಲಿ ತಮ್ಮದೇ ವಿಶೇಷ ಛಾಪು ಮೂಡಿಸಿರುವ ನಟ ಶಾರುಖ್, ಹಲವು ಸಿನಿಮಾಗಳಲ್ಲಿ ತಮ್ಮ ಎರಡು ಕೈಗಳನ್ನು ಬಿಚ್ಚಿ ನಿಂತುಕೊಳ್ಳುತ್ತಾರೆ. ಇದು ಅವರ ಸಿಗ್ನೇಚರ್ ಸ್ಟೆಪ್ ಎಂದು ಕೂಡ ಕರೆಯಲಾಗುತ್ತದೆ. ಅವರ ಅಪಾರ ಸಂಖ್ಯೆಯ ಫ್ಯಾನ್ಸ್​ ಇದನ್ನು ಅನುಕರಣೆ ಮಾಡುವ ಮೂಲಕ ತಮ್ಮ ನೆಚ್ಚಿನ ನಟನ ಮೇಲಿರುವ ಅಭಿಮಾನಿವನ್ನು ಪ್ರದರ್ಶಿಸುತ್ತಾರೆ. ಸದ್ಯ ಅದೇ ರೀತಿ ಅವರ ಕಿರಿಯ ಪುತ್ರ ಅಬ್​ರಾಮ್ ಕೂಡ​ ವಾರ್ಷಿಕ ಕಾರ್ಯಕ್ರಮದ ವೇದಿಕೆಯಲ್ಲಿ ಅನುಕರಿಸಿದ ರೀತಿ ಕಂಡು ಶಾರುಖ್ ಭಾವುಕರಾಗಿದ್ದಾರೆ.

ಈ ದೃಶ್ಯವನ್ನು ನೋಡಿದ ಅನೇಕರು ಅಬ್​ರಾಮ್ ತಂದೆಯಿಂದ ಸ್ಫೂರ್ತಿ ಪಡೆಯುತ್ತಿದ್ದಾರೆ ಎಂಬುದು ಖಚಿತ. ತಮ್ಮಂತೆಯೇ ಸಿಗ್ನೇಚರ್​ ಸ್ಟೆಪ್ ಹಾಕಿದ ಪುತ್ರನನ್ನು ಕಂಡ ಶಾರುಖ್​, ಪತ್ನಿ ಮತ್ತು ಮಕ್ಕಳೊಡನೆ ಕುಳಿತು ಚಪ್ಪಾಳೆ ತಟ್ಟಿದ್ದಾರೆ. ಶಾಲೆಯ ವಾರ್ಷಿಕ ಕಾರ್ಯಕ್ರಮದಲ್ಲಿ ಕಿರುನಾಟಕದ ಪ್ರದರ್ಶನದ ವೇಳೆ ಈ ದೃಶ್ಯ ಸೆರೆಯಾಗಿದೆ. ವಿಡಿಯೋದಲ್ಲಿ ಶಾರುಖ್ ತಮ್ಮ ಮಗ ಅಬ್​ರಾಮ್​ ನೋಡುತ ಕೈಬೀಸಿ, ಹುರಿದುಂಬಿಸುತ್ತಿರುವುದು ನೋಡುಗರ ಕಣ್ಣಂಚಲಿ ನೀರು ತಂದಿದೆ.

ಡಿಸೆಂಬರ್ 21 ರಂದು ಅವರ 'ಡುಂಕಿ' ಚಿತ್ರ ಬಿಡುಗಡೆಯಾಗುವ ಮೊದಲು ಶಾರುಖ್ ಖಾನ್ ಅವರು ತಮ್ಮ ಮಗಳು ಸುಹಾನಾ ಖಾನ್ ಅವರೊಂದಿಗೆ ಶಿರಡಿಯ ಸಾಯಿಬಾಬಾ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಇತ್ತೀಚೆಗೆ ಕಾಣಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net