More

    ಆನ್‌ಲೈನ್ ಬೆಟ್ಟಿಂಗ್ ಚಟ: ಪತ್ನಿ, ಇಬ್ಬರು ಮಕ್ಕಳನ್ನು ಕೊಂದು ಪ್ರಾಣ ಬಿಟ್ಟ ಕಾನ್​ಸ್ಟೇಬಲ್​

    ಹೈದರಾಬಾದ್: ಸಿದ್ದಿಪೇಟೆ ಜಿಲ್ಲಾಧಿಕಾರಿಯ ಭದ್ರತಾ ಸಿಬ್ಬಂದಿಯೊಬ್ಬರು ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಗುಂಡಿಕ್ಕಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯ ಚಿನ್ನಕೋಡೂರ್ ಮಂಡಲದ ರಾಮುನಿಪಟ್ಟ ಗ್ರಾಮದಲ್ಲಿ ಶುಕ್ರವಾರ ಈ ಆಘಾತಕಾರಿ ಘಟನೆ ನಡೆದಿದೆ.

    ಪೊಲೀಸರ ಪ್ರಕಾರ, ಜಿಲ್ಲಾಧಿಕಾರಿ ಪ್ರಶಾಂತ್ ಜೀವನ್ ಪಾಟೀಲ್ ಅವರ ಗನ್‌ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಪೇದೆ ಅಕುಲಾ ನರೇಶ್ (35) ಪಿಸ್ತೂಲ್‌ನಿಂದ ಗುಂಡು ಹಾರಿಸಿ ಅವರ ಪತ್ನಿ ಚೈತನ್ಯ (30), ಮಗ ರೇವಂತ್ (6) ಮತ್ತು ಮಗಳು ಹಿಮಶ್ರೀ (5) ಅವರನ್ನು ಕೊಂದರು. ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಇದನ್ನೂ ಓದಿ: ಈ ಪ್ರೀತಿಗೆ ಏನ್‌ ಹೇಳಬೇಕು ಅಂತ ಗೊತ್ತಾಗ್ತಿಲ್ಲ…ನಿಮ್ಮ ಆಜ್ಞೆಯಂತೆಯೇ ನಡೀಬೇಕೆಂದು ಕೈ ಮುಗಿದ ಶ್ರೀಮುರಳಿ

    ನರೇಶ್ ಶುಕ್ರವಾರ ಡ್ಯೂಟಿಗೆ ಹೋಗದೆ ಮನೆಯಲ್ಲೇ ಇದ್ದ. ಗುಂಡಿನ ಸದ್ದು ಕೇಳಿದ ನೆರೆಹೊರೆಯವರು ನಾಲ್ವರೂ ಸತ್ತು ಬಿದ್ದಿರುವುದನ್ನು ನೋಡಲು ಧಾವಿಸಿದರು. ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

    ಹಣಕಾಸಿನ ಸಮಸ್ಯೆಯೇ ಘಟನೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಸ್ಥಳೀಯರ ಪ್ರಕಾರ ನರೇಶ್ ಆನ್‌ಲೈನ್ ಬೆಟ್ಟಿಂಗ್ ಚಟ ಹೊಂದಿದ್ದು, ಇತರರಿಂದ ಸಾಲ ಪಡೆದಿದ್ದ. ಆದರೆ, ಪ್ರಕರಣವನ್ನು ಎಲ್ಲಾ ಕೋನಗಳಿಂದ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಒಂದು ದಿನ ಪೊಲೀಸ್; ಕ್ಯಾನ್ಸರ್​​ನಿಂದ ಬಳಲುತ್ತಿರುವ ಬಾಲಕನ ಆಸೆ ಈಡೇರಿಸಿದ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts