ನವದೆಹಲಿ: ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬ್ಯುಸಿಯಾಗಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಶಾಹೀನ್ ಶಾ ಪತ್ನಿ ಅನ್ಶಾ ಅಫ್ರಿದಿ ಶನಿವಾರ (ಆಗಸ್ಟ್ 24) ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ವೇಗಿ ಶಾಹೀನ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.
ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿದ್ದ ಟೆಸ್ಟ್ ಪಂದ್ಯದ ವೇಳೆ ಅವರ ಪತ್ನಿ ಮಗುವಿಗೆ ಜನ್ಮ ನೀಡಿದ್ದು, ಶಾಹೀನ್ ಈ ವಿಚಾರವನ್ನು ಮೈದಾನದಲ್ಲಿ ವಿಭಿನ್ನವಾಗಿ ಹೇಳುವ ಮೂಲಕ ಆಟಗಾರರಿಗೆ ವಿಚಾರವನ್ನು ತಿಳಿಸಿದ್ದಾರೆ. ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯ ಭಾನುವಾರ ಮುಗಿಯಲಿದ್ದು, ಆ ನಂತರ ಅವರು ಕುಟುಂಬವನ್ನು ಕೂಡಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
That Celebration 👶@iShaheenAfridi’s first wicket after the birth of his son! 😍#PAKvBAN | #TestOnHai pic.twitter.com/3x0jwtOHw3
— Pakistan Cricket (@TheRealPCB) August 24, 2024
ಇದನ್ನೂ ಓದಿ: 8 ದಿನಗಳಿಂದ ಎಂಟು ತಿಂಗಳವರೆಗೆ… ಗಗನಯಾತ್ರಿಗಳ ಬಗ್ಗೆ ನಾಸಾದಿಂದ ಹೊರಬಿತ್ತು ಮೇಜರ್ ಅಪ್ಡೇಟ್
ಶಾಹೀನ್ ಮತ್ತು ಅವರ ಪತ್ನಿ ಅನ್ಶಾ ಅಫ್ರಿದಿ ತಮ್ಮ ಮೊದಲ ಮಗುವಿಗೆ ಅಲಿ ಯಾರ್ ಎಂದು ನಾಮಕರಣ ಮಾಡಿದ್ದಾರೆ. ಮೊದಲ ಮಗುವಿಗೆ ತಂದೆಯಾಗಿರುವ ಶಾಹೀನ್ಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದ್ದು, ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ತಾತನಾದ ಸಂಭ್ರಮದಲ್ಲಿದ್ದಾರೆ.
ಇನ್ನು ಮೊದಲ ಮಗುವಿನ ಆಗಮನದ ಸಂತಸದಲ್ಲಿದ್ದ ಶಾಹೀನ್ ಆಫ್ರಿದಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ನ ಎರಡನೇ ದಿನದಂದು ಹಸನ್ ಮಹಮೂದ್ ಅವರ ವಿಕೆಟ್ ಅನ್ನು ತಮ್ಮ ಮಗನಿಗೆ ಅರ್ಪಿಸಿದರು. ಹಸನ್ ಅವರ ವಿಕೆಟ್ ಪಡೆದ ಕೂಡಲೇ ಆಫ್ರಿದಿ ಶಾಹೀನ್ ತನ್ನ ಕೈಗಳಿಂದ ಮಗುವನ್ನು ತೂಗುವ ಸನ್ನೆ ಮಾಡಿ ಸಂಭ್ರಮಿಸಿದರು. ಈ ವಿಡಿಯೋ ವೈರಲ್ ಆಗಿದೆ.