

ನವದೆಹಲಿ: ಜನನಿಬಿಡ ಪ್ರದೇಶ ಒಂದರಲ್ಲಿ ಹಾಕಲಾಗಿದ್ದ ಡಿಜಿಟಲ್ ಜಾಹೀರಾತು ಫಲಕದಲ್ಲಿ ಸೆಕ್ಸ್ ವಿಡಿಯೋ ಪ್ರಸಾರವಾಗಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯ ಕನ್ನಾಟ್ ಪ್ಲೇಸ್ನಲ್ಲಿ ನಡೆದಿದೆ. ಘಟನೆ ಸಂಬಂಧ ಪೊಲೀಸರು FIR ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ಮಾರುಕಟ್ಟೆಯ ಹೆಚ್-ಬ್ಲಾಕ್ನಲ್ಲಿ ಈ ಘಟನೆ ನಡೆದಿದ್ದು, ಕ್ತಿಯೊಬ್ಬ ಜಾಹೀರಾತು ಫಲಕವನ್ನು ವೀಡಿಯೋ ಮಾಡಿಕೊಂಡು ಪೋಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಕೆಲವು ಸೆಕೆಂಡುಗಳ ಕಾಲ ಪ್ಲೇ ಆಗಿದ್ದ ಕ್ಲಿಪ್ನ್ನು ನವದೆಹಲಿ ಮುನ್ಸಿಪಲ್ ಅಧಿಕಾರಿಗಳ ಸಹಾಯದಿಂದ ತೆಗೆದುಹಾಕಲಾಗಿದ್ದು, ಸ್ಕ್ರೀನ್ ಹ್ಯಾಕ್ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಘಟನೆ ಸಂಬಂಧ ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಕನ್ನಟ್ ಪ್ಲೇಸ್ನಲ್ಲಿ ಹಾಕಲಾಗಿದ್ದ ಡಿಜಿಟಲ್ ಜಾಹೀರಾತು ಫಲಕದಲ್ಲಿ ಅಶ್ಲೀಲ ವಿಡಿಯೋ ಹಾಕಲಾಗಿದ್ದು, ಸುಧಾರಿತ ತಂತ್ರಜ್ಞಾನವನ್ನು ಬಳಸಿಕೊಂಡು ಸ್ಕ್ರೀನ್ಅನ್ನು ಹ್ಯಾಕ್ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ದಾರಿಹೋಕರೊಬ್ಬರು ಇದನ್ನು ಗಮನಿಸಿ ವಿಡಿಯೋ ಮಾಡಿಕೊಂಡು ಕೂಡಲೇ ನಮಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ತೆರಳಿ ಸರಿಪಡಿಸಲಾಗಿದೆ. ಈ ಸಂಬಂಧ FIR ದಾಖಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.