ನವದೆಹಲಿ: ಪ್ರಸ್ತುತ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS)ದಲ್ಲಿರುವ ಭಾರತೀಯ ಮೂಲದ ಅಮೆರಿಕ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಬಚ್ ವಿಲ್ಮೋರ್ ಶೀಘ್ರದಲ್ಲೇ ಭೂಮಿಗೆ ಮರಳಲಿದ್ದಾರೆ ಎಂದು ನಾಸಾ ತಿಳಿಸಿದೆ.
ಈ ಇಬ್ಬರೂ ಗಗನಯಾತ್ರಿಗಳು ಯಾವಾಗ ಭಾರತಕ್ಕೆ ಆಗಮಿಸುತ್ತಾರೆ ಎಂಬ ಬಗ್ಗೆ ನಾಸಾ ಅಪ್ಡೇಟ್ ನೀಡಿದ್ದು, ಇನ್ನೂ ಕೆಲವು ದಿನಗಳ ಕಾಲ ಅನಿಶ್ಚಿತತೆಯಲ್ಲಿಯೇ ಈ ಗಗನ ಯಾತ್ರಿಗಳು ಕಾಲಕಳೆಯಬೇಕಾಗುತ್ತದೆ ಎಂದು ತಿಳಿಸಿದೆ.
ಮುಂದಿನ ವರ್ಷ ಅಂದರೆ, 2025ರ ಫೆಬ್ರವರಿಯಲ್ಲಿ ಬೋಯಿಂಗ್ ಸ್ಟಾರ್ಲೈನರ್ (Boeing’s Starliner) ಬದಲಾಗಿ ಸ್ಪೇಸ್ಎಕ್ಸ್ ಕ್ರ್ಯೂ ಡ್ರ್ಯಾಗನ್ (SpaceX’s Crew Dragon) ಸ್ಪೇಸ್ ಕ್ಯಾಪ್ಸುಲ್ನಲ್ಲಿ ಭೂಮಿಗೆ ಹಿಂತಿರುಗಲಿದ್ದಾರೆ ಎಂದು ನಾಸಾ (NASA)ತಿಳಿಸಿದೆ. ಕಳೆದ ಜೂನ್ 05ರಂದು ಬೋಯಿಂಗ್ ಸ್ಟಾರ್ಲೈನರ್ ಕ್ಯಾಪ್ಸುಲ್ ಮೂಲಕ ಇಬ್ಬರು ಗಗನಯಾತ್ರಿಗಳನ್ನು ಐಎಸ್ಎಸ್ಗೆ ಕಳುಹಿಸಲಾಯಿತು. ಇದು ಬೋಯಿಂಗ್ ಸ್ಟಾರ್‌ಲೈನರ್‌ನ ಮೊದಲ ಸಿಬ್ಬಂದಿ ಕಾರ್ಯಾಚರಣೆಯಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ನಾಸಾ ತಜ್ಞರಿಂದ ಪರಿಶೀಲಿಸಿದ ನಂತರ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆ ಅಥವಾ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಕ್ಯಾಪ್ಸುಲ್‌ನೊಂದಿಗೆ ಸಿಬ್ಬಂದಿ ಹಿಂತಿರುಗುತ್ತಾರೆ. ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಮತ್ತು ಸುನಿತಾ ವಿಲಿಯಮ್ಸ್ ಮುಂದಿನ ವರ್ಷ ಫೆಬ್ರವರಿಯಲ್ಲಿ ಭೂಮಿಗೆ ಮರಳಲಿದ್ದಾರೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
After extensive review by experts across the agency, NASA's @BoeingSpace Crew Flight Test will return with an uncrewed #Starliner. Astronauts Butch Wilmore and Suni Williams are scheduled to return to Earth next spring aboard #Crew9: https://t.co/bfjenUU1Jf pic.twitter.com/c4NzZVJcvw
— NASA (@NASA) August 24, 2024
ಇದನ್ನೂ ಓದಿ: KSRTC ಬಸ್ ಟಿಕೆಟ್ ದರ ಹೆಚ್ಚಳ ಸುಳಿವು ನೀಡಿದ ಸಚಿವ ರಾಮಲಿಂಗಾ ರೆಡ್ಡಿ; ಬಿಜೆಪಿ ನಾಯಕರಿಗೆ ಹೇಳಿದ್ದಿಷ್ಟು
ಆರಂಭದಲ್ಲಿ ಗಗನಯಾತ್ರಿಗಳ ಕಾರ್ಯಾಚರಣೆ ಕೇವಲ 8 ದಿನಗಳವರೆಗೆ ಮಾತ್ರ ಇರಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಸ್ಟಾರ್ಲೈನರ್ನಲ್ಲಿರುವ ಪ್ರೊಪಲ್ಶನ್ ಸಿಸ್ಟಮ್ನಲ್ಲಿನ ತೊಂದರೆಯ ಕಾರಣದಿಂದಾಗಿ ಕಾರ್ಯಾಚರಣೆ ಅವಧಿಯನ್ನು ವಿಸ್ತರಿಸಲಾಯಿತು. ಕ್ಯಾಪ್ಸುಲ್ನಲ್ಲಿ ಸಮಸ್ಯೆಗಳು ಕಾಣಿಸಿಕೊಂಡ ಬಳಿಕ ಮೊದಲೇ ಪ್ಲಾನ್ ಮಾಡಿದಂತೆ ಗಗನಯಾತ್ರಿಗಳನ್ನು ಸುರಕ್ಷಿತವಾಗಿ ಭೂಮಿಗೆ ಹಿಂದಿರುಗಿಸುವ ಬಾಹ್ಯಾಕಾಶ ನೌಕೆಯ ಸಾಮರ್ಥ್ಯದ ಬಗ್ಗೆ ಇದೀಗ ಕಳವಳವನ್ನು ಹೆಚ್ಚಿಸಿವೆ.
ಥಸ್ಟರ್ ವಿಫಲ ಮತ್ತು ಹೀಲಿಯಂ ಸೋರಿಕೆಯಂತಹ ಸಮಸ್ಯೆಗಳನ್ನು ಒಳಗೊಂಡಂತೆ ಸದ್ಯಕ್ಕೆ ಕ್ಯಾಪ್ಸುಲ್ನಲ್ಲಿ ಕಾಣಿಸಿಕೊಂಡಿರುವ ತೊಂದರೆಗಳನ್ನು ನಿವಾರಿಸಲು ಬೋಯಿಂಗ್ ನಿರಂತರವಾಗಿ ಪರಿಶೀಲನೆ ನಡೆಸುತ್ತಿದೆ. ಇತ್ತೀಚಿಗೆ ಬಂದ ಪರೀಕ್ಷೆಯ ಡೇಟಾ ಪ್ರಕಾರ ಕ್ಯಾಪ್ಸುಲ್ನಲ್ಲಿನ ಥ್ರಸ್ಟರ್‌ಗಳ ಮಿತಿಮೀರಿದ ಶಾಖವು ಟೆಫ್ಲಾನ್ ಸೀಲ್‌ಗಳ ತಿರುಚಿಗೆ ಕಾರಣವಾಗಿದೆ ಮತ್ತು ಪ್ರೊಪೆಲ್ಲಂಟ್ ಹರಿವನ್ನು ನಿರ್ಬಂಧಿಸಿದ್ದು, ಒತ್ತಡವನ್ನು ದುರ್ಬಲಗೊಳಿಸುತ್ತಿದೆ. ಹೀಗಾಗಿ ಸ್ಟಾರ್‌ಲೈನರ್ ಕ್ಯಾಪ್ಸುಲ್ ಹಿಂದಿರುಗುವಿಕೆಯಿಂದಾಗುವ ಅಪಾಯಗಳನ್ನು ಒಪ್ಪಿಕೊಳ್ಳಬೇಕೆ ಅಥವಾ ಅದರ ಬದಲು ಕ್ರ್ಯೂ ಡ್ರ್ಯಾಗನ್ ಕ್ಯಾಪ್ಸುಲ್ನಂತಹ ಸುರಕ್ಷಿತ ಪರ್ಯಾಯವನ್ನು ಆರಿಸಿಕೊಳ್ಳಬೇಕೆ ಎಂಬುದರ ಕುರಿತು ನಾಸಾದಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳಿಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ.
ಒಂದು ವೇಳೆ ನಾಸಾ, ಸ್ಟಾರ್‌ಲೈನರ್‌ನ ಕಾರ್ಯಾಚರಣೆಯನ್ನು ಬದಲಾಯಿಸಲು ನಿರ್ಧರಿಸಿದರೆ, ಬೋಯಿಂಗ್ ಕ್ಯಾಪ್ಸುಲ್ ಅನ್ನು ಸಿಬ್ಬಂದಿಯಿಲ್ಲದೆ ವಾಪಸ್ ಭೂಮಿ ಕರೆತರಲು ಕಾನ್ಫಿಗರ್ ಮಾಡಲಿದೆ. ಅಲ್ಲದೆ, ಇದು ಬೋಯಿಂಗ್‌ಗೆ ಹಿನ್ನಡೆಯಾಗಲಿದೆ. ನಿರ್ವಹಣೆಯ ಸಮಸ್ಯೆಗಳು ಮತ್ತು ಇಂಜಿನಿಯರಿಂಗ್ ಸಮಸ್ಯೆಗಳನ್ನು ಒಳಗೊಂಡಂತೆ ಸ್ಟಾರ್ಲೈನರ್ ಅನ್ನು ಅಭಿವೃದ್ಧಿಪಡಿಸುವಲ್ಲಿ ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಸ್ಟಾರ್‌ಲೈನರ್ ಕ್ಯಾಪ್ಸುಲ್ ಅಭಿವೃದ್ಧಿ ಪಡಿಸಲು ಪ್ರಸ್ತುತ ಪರೀಕ್ಷಾ ಕಾರ್ಯಾಚರಣೆಗಾಗಿ 125 ಮಿಲಿಯನ್ ಡಾಲರ್ ಸೇರಿದಂತೆ ಬೋಯಿಂಗ್‌ಗೆ 2016 ರಿಂದ 1.6 ಶತಕೋಟಿ ಡಾಲರ್ ವೆಚ್ಚವಾಗಿದೆ.