ಮಹಾರಾಷ್ಟ್ರ 'ಕೈ' ಅಭ್ಯರ್ಥಿ ಪರ ನಕಲಿ ಶಾರುಖ್ ಖಾನ್ ಪ್ರಚಾರ; ಇದೊಂದು 'ಸ್ಕ್ಯಾಮ್' ಎಂದ ಬಿಜೆಪಿ

WhatsApp Image 2024-04-19 at 7.06.23 PM
Published on

ಮಹಾರಾಷ್ಟ್ರ: ಲೋಕಸಭಾ ಚುನಾವಣೆ ಸಮೀಪದಲ್ಲಿರುವ ಹಿನ್ನೆಲೆ ಬಿರುಸಿನ ಪ್ರಚಾರದಲ್ಲಿ ತೊಡಗಿರುವ ಕಾಂಗ್ರೆಸ್ ಅಭ್ಯರ್ಥಿ ಪ್ರಣಿತಿ ಶಿಂಧೆ ಪರ ಬಾಲಿವುಡ್​ನ ದಿಗ್ಗಜ ನಟ ಶಾರುಖ್ ಖಾನ್​ ಅವರಂತೆಯೇ ಹೋಲುವ ಮತ್ತೊಬ್ಬ ವ್ಯಕ್ತಿ ಪ್ರಚಾರಕ್ಕಿಳಿದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದನ್ನು ಗಮನಿಸಿದ ಬಿಜೆಪಿ ಇದೊಂದು ಸ್ಕ್ಯಾಮ್ ಬಿಟ್ಟರೆ ಬೇರೇನೂ ಅಲ್ಲ ಎಂದು ಆರೋಪಿಸಿದೆ.

ನಕಲಿ ಶಾರುಖ್ ಖಾನ್ ಅನ್ನು ಇಬ್ರಾಹಿಂ ಕದರಿ ಎಂದು ಹೇಳಲಾಗಿದ್ದು, ಕಾಂಗ್ರೆಸ್ ಕಾರ್ಯಕರ್ತ ಫಿರ್ದೌಸ್ ಪಟೇಲ್ ಜತೆಗೆ ಸೋಲಾಪುರ ನಗರದಲ್ಲಿ ಭವ್ಯವಾದ ರೋಡ್‌ಶೋನಲ್ಲಿ ಪಾಲ್ಗೊಂಡಿದ್ದಾರೆ. ಈ ಮೂಲಕ ಜನರ ಮತಗಳನ್ನು ತಮ್ಮತ್ತ ಸೆಳೆಯಲು ವಿಭಿನ್ನ ಪ್ರಯತ್ನಗಳತ್ತ ಕಾಂಗ್ರೆಸ್ ಮುಂದಾಗಿರುವುದು ವಿಡಿಯೋ ಮೂಲಕ ತಿಳಿದುಬಂದಿದೆ.

ನಗರದ ಪ್ರಮುಖ ಕ್ರಾಸ್‌ರೋಡ್‌ನಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮವು ಮಹಾವಿಕಾಸ್ ಅಘಾಡಿ ಬ್ಯಾನರ್ ಅಡಿಯಲ್ಲಿ ಶಿಂಧೆ ಅವರ ಉಮೇದುವಾರಿಕೆಗೆ ಬೆಂಬಲ ಸೂಚಿಸುವ ಗುರಿಯನ್ನು ಹೊಂದಿತ್ತು ಎನ್ನಲಾಗಿದೆ. ಬಾಲಿವುಡ್ ತಾರೆ ಶಾರುಖ್ ಖಾನ್ ಅವರ ಹೋಲಿಕೆಗೆ ಹೆಸರುವಾಸಿಯಾದ ಇಬ್ರಾಹಿಂ ಕದರಿ ಈ ರ್ಯಾಲಿಯಲ್ಲಿ ಪಾಲ್ಗೊಂಡು, ಸೊಲ್ಲಾಪುರದ ಜನತೆಯ ಬಳಿ ಪ್ರಣಿತಿಗೆ ಮತ ನೀಡುವಂತೆ ಕೋರಿದ್ದಾರೆ. ಸದ್ಯ ಈ ವಿಡಿಯೋ ವಿರುದ್ಧ ಬಿಜೆಪಿ ಕೆಂಡಕಾರಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net