ಮುಂಬೈ: ಸಿನಿಪ್ರಿಯರಿಗೆ ಹೀರೋ ಮತ್ತು ಹೀರೋಯಿನ್ಗಳ ವೈಯಕ್ತಿಕ ಮಾಹಿತಿ ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಅವರು ಬಳಸುವ ಕಾರುಗಳು, ದಿನನಿತ್ಯ ಜೀವನದಲ್ಲಿ ಅವರ ಹವ್ಯಾಸಗಳು, ಧರಿಸುವ ಬಟ್ಟೆ, ಮೊಬೈಲ್ ಹಾಗೂ ವಾಚ್ ಬೆಲೆ ಎಷ್ಟು? ವಾಸಿಸುವ ಮನೆ ಎಷ್ಟು ಬೆಲೆ ಬಾಳುತ್ತದೆ? ಮತ್ತು ಯಾವ ಯಾವ ವಸ್ತುಗಳನ್ನು ಆಗಾಗ ಬಳಕೆ ಮಾಡುತ್ತಾರೆ? ಎಷ್ಟು ಓದಿದ್ದಾರೆ? ಎಷ್ಟು ಅಂಕಗಳನ್ನು ಪಡೆದಿದ್ದಾರೆ ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಇದೀಗ ಬಾಲಿವುಡ್ ಬಾದ್ಷಾ ಶಾರುಖ್ ಖಾನ್ ಅವರು ಪಿಯುಸಿ ಅಂಕಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆದಿದೆ.
ಅಂದಹಾಗೆ ಶಾರುಖ್ ಖಾನ್ ಬಗ್ಗೆ ವಿಶೇಷವಾಗಿ ಹೇಳುವ ಅವಶ್ಯಕತೆ ಇಲ್ಲ. ಬಾಲಿವುಡ್ ಚಿತ್ರರಂಗದ ಬಾದ್ಷಾ ಎಂದೇ ಖ್ಯಾತಿ ಪಡೆದಿರುವ ಶಾರುಖ್, ವಿಶ್ವದ ಶ್ರೀಮಂತ ನಟರಲ್ಲಿ ಒಬ್ಬರು. ಐಪಿಎಲ್ನಲ್ಲಿ ತಮ್ಮದೇಯಾದ ತಂಡವನ್ನು ಹೊಂದಿದ್ದಾರೆ. ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ತಂಡದ ಮಾಲೀಕ ಎಂಬುದು ಎಲ್ಲರಿಗೂ ತಿಳಿದಿದೆ. ತಮ್ಮ ನಟನೆಯಿಂದ ಇಡೀ ಭಾರತದಲ್ಲೇ ಅತಿದೊಡ್ಡ ಅಭಿಮಾನಿ ಬಳಗವನ್ನೇ ಶಾರುಖ್ ಹೊಂದಿದ್ದಾರೆ. ಸಿನಿ ವೃತ್ತಿಯಲ್ಲಿ ಯಶಸ್ಸಿನ ಉತ್ತುಂಗದಲ್ಲಿರುವ ಶಾರುಖ್ ಪಿಯುಸಿಯಲ್ಲಿ ಗಳಿಸಿದ ಅಂಕಗಳೆಷ್ಟು ಎಂಬುದನ್ನು ತಿಳಿದರೆ ನಿಜಕ್ಕೂ ಅಚ್ಚರಿಪಡುತ್ತೀರಿ. ಇಂಗ್ಲಿಷ್ ಅನ್ನು ಹರಳು ಹುರಿದಂತೆ ಮಾತನಾಡೋ ಶಾರುಖ್ ಪಿಯುಸಿಯಲ್ಲಿ ಇಂಗ್ಲಿಷ್‌ನಲ್ಲಿ ಪಡೆದಿರುವ ಅಂಕ ನಿಮ್ಮ ಹುಬ್ಬೇರಿಸುತ್ತದೆ.
ಸದ್ಯ ಶಾರುಖ್ ಖಾನ್ಗೆ ಸಂಬಂಧಿಸಿದ ಫೋಟೋವೊಂದು ಜಾಲತಾಣದಲ್ಲಿ ಮತ್ತೆ ವೈರಲ್ ಆಗುತ್ತಿದೆ. ವೈರಲ್ ಫೋಟೋ ಶಾರುಖ್ ಅವರು ಸಿನಿಮಾಗೆ ಸಂಬಂಧಿಸಿದ್ದಲ್ಲ ಅದು ಅವರ ಶಿಕ್ಷಣಕ್ಕೆ ಸಂಬಂಧಿಸಿದ್ದಾಗಿದೆ. ಓದುವ ದಿನಗಳಲ್ಲಿ ಪಿಯುಸಿ ಮುಗಿಸಿ ದೆಹಲಿ ವಿಶ್ವವಿದ್ಯಾನಿಲಯಕ್ಕೆ ಪ್ರವೇಶ ಮಾಡುವಾಗ ಭರ್ತಿ ಮಾಡಿದ ಅರ್ಜಿಯ ನಮೂನೆಯಾಗಿದೆ. ಅರ್ಜಿಯ ಬಲ ಮೂಲೆಯಲ್ಲಿ ಶಾರುಖ್ ಖಾನ್ ಅವರ ಪಾಸ್‌ಪೋರ್ಟ್ ಗಾತ್ರದ ಫೋಟೋ ಮತ್ತು ಬಿಎ ಅರ್ಥಶಾಸ್ತ್ರದ ಪದವಿಗಾಗಿ ಅರ್ಜಿಯನ್ನು ಸಲ್ಲಿಸುತ್ತಿರುವುದು ಫೋಟೋದಲ್ಲಿ ಸ್ಪಷ್ಟವಾಗಿ ತೋರಿಸುತ್ತದೆ.
ಇದೇ ಅರ್ಜಿಯಲ್ಲಿ ಶಾರುಖ್ ಖಾನ್ ಅವರ ಪಿಯುಸಿ ಅಂಕಗಳನ್ನು ನಮೂದಿಸಲಾಗಿದೆ. ಅದ್ಭುತ ವಾಗ್ಮಿ ಎನಿಸಿಕೊಂಡಿರುವ ಶಾರುಖ್ ಖಾನ್, ಇಂಗ್ಲಿಷ್‌ನಲ್ಲಿ ಕೇವಲ 51 ಅಂಕಗಳನ್ನು ಗಳಿಸಿದ್ದರು. ಆದಾಗ್ಯೂ ಎಲೆಕ್ಟ್ರಾನಿಕ್ಸ್, ಗಣಿತ ಮತ್ತು ಭೌತಶಾಸ್ತ್ರದಲ್ಲಿ ಕ್ರಮವಾಗಿ 92, 78 ಹಾಗೂ 78 ಅಂಕಗಳೊಂದಿಗೆ ಹೆಚ್ಚಿನ ಅಂಕಗಳನ್ನು ಗಳಿಸಿದ್ದರು. ಎಸ್‌ಆರ್‌ಕೆ ಐಸಿಎಸ್‌ಇ ಶಾಲೆಯಾಗಿರುವ ಸೇಂಟ್ ಕೊಲಂಬಾಸ್ ಹೈಸ್ಕೂಲ್‌ನಲ್ಲಿ ಪಿಯುಸಿ 1985ರಲ್ಲಿ ಮುಗಿಸಿದರು.
ಇಂದು ಶಾರುಖ್ ಮಾಡಿರುವ ಸಾಧನೆ ಮತ್ತು ಅವರು ಇಂಗ್ಲಿಷ್ ಮಾತನಾಡುವ ರೀತಿಯನ್ನು ನೋಡಿದರೆ ಅಂಕಗಳನ್ನು ಯಶಸ್ಸು ನಿರ್ಧರಿಸುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ. (ಏಜೆನ್ಸೀಸ್)
ವರ್ಷಾ ಕಾವೇರಿಗೆ ಇಷ್ಟೊಂದು ಕೆಟ್ಟದಾಗಿ ಮೆಸೇಜ್ ಮಾಡಿದ್ರಾ ವರುಣ್ ಆರಾಧ್ಯ? ಬಯಲಾಯ್ತು ಚಾಟಿಂಗ್ ರಹಸ್ಯ!
ಮದ್ವೆ ಏನೋ ತುಂಬಾ ಸರಳವಾಗಿತ್ತು ಆದ್ರೆ ಸಿದ್ಧಾರ್ಥ್ ಧರಿಸಿದ್ದ ವಾಚ್ ಬೆಲೆ ಕೇಳಿದ್ರೆ ನೀವು ದಂಗಾಗ್ತೀರಾ!
ಭಿಕ್ಷುಕರು ಮನಸ್ಸು ಮಾಡಿದ್ರೆ ಕೋಟಿ ರೂ. ದುಡಿಯಬಹುದೆಂದು ತೋರಿಸಿಕೊಟ್ಟ ಚಂದ್ರ ಮಿಶ್ರಾ! ಇಲ್ಲಿದೆ ಸ್ಫೂರ್ತಿಯ ಕತೆ