More

    ಶಾರುಖ್​ ಜನ್ಮದಿನಕ್ಕೆ ವಿಶ್ವದಾದ್ಯಂತ ಪಾರ್ಟಿ ಆಯೋಜನೆ ಮಾಡಿದ ಫ್ಯಾನ್​ ಕ್ಲಬ್​

    ಬಾಲಿವುಡ್​ ಬಾದ್ಶಾ ಸಿನಿಮಾ ಮಾಡದೆ ಎರಡು ವರ್ಷಗಳಾದವು. ಜೀರೋ ಸಿನಿಮಾ ಪ್ಲಾಪ್​ ಆದ ಬಳಿಕ ಬೇರಾವ ಚಿತ್ರ ಒಪ್ಪಿಕೊಳ್ಳದೆ, ಸುದೀರ್ಘ ಎರಡು ವರ್ಷ ನಟನೆಯಿಂದ ಹಿಂದೆ ಸರಿದಿದ್ದರು. ನಿರ್ಮಾಣ ಸೇರಿ ಹಲವು ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಇಷ್ಟೆಲ್ಲ ಆದರೂ ಅಭಿಮಾನಿಗಳು ಮಾತ್ರ, ಶಾರುಖ್​ ಸಿನಿಮಾ ಘೋಷಣೆಗಾಗಿ ಕಾಯುತ್ತಿದ್ದಾರೆ. ಇನ್ನೇನು ನ. 2ರಂದು ಶಾರುಖ್​ ಜನ್ಮದಿನ ಬಂದೇ ಬಿಟ್ಟಿದೆ. ಹಬ್ಬದಂತೆ ಹುಟ್ಟುಹಬ್ಬ ಆಚರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

    ಇದನ್ನೂ ಓದಿ: ಐಎಎಸ್ ಅಧಿಕಾರಿ ಶ್ರದ್ಧಾ; ಮೋಹನ್​ ಲಾಲ್​ ಚಿತ್ರಕ್ಕೆ ನಾಯಕಿ…

    ಸೋಮವಾರ ಶಾರುಖ್​ 55ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಅವರ ಆ ಸಂಭ್ರಮದ ಕ್ಷಣಕ್ಕೆ ಅವರ ಅಭಿಮಾನಿಗಳು ವಿಶೇಷ ಪಾರ್ಟಿಯೊಂದನ್ನು ಆಯೋಜನೆ ಮಾಡಿದ್ದಾರೆ. ಇಲ್ಲಿಯವರೆಗೂ ಶಾರುಖ್​ ಜನ್ಮದಿನ ಅಂದ ಬಳಿಕ ಬಾಂದ್ರಾದಲ್ಲಿನ ಮನ್ನತ್​ ಮನೆಯ ಬಾಲ್ಕನಿ ಮೇಲೆ ನಿಂತು ಸಾವಿರಾರು ಅಭಿಮಾನಿಗಳಿಗೆ ಕೈ ಬೀಸಿ ದರ್ಶನ ಕೊಡುತ್ತಿದ್ದರು. ಇದೀಗ ಕರೊನಾ ಹಿನ್ನೆಲೆಯಲ್ಲಿ ಆ ಸಂಭ್ರಮವನ್ನು ವರ್ಚುವಲ್​ ಮೂಲಕ ಆಚರಿಸಲು ಫ್ಯಾನ್ಸ್ ನಿರ್ಧರಿಸಿದ್ದಾರೆ.

    ಸದ್ಯ ಶಾರುಖ್​ ಕುಟುಂಬದ ಜತೆ ದುಬೈನಲ್ಲಿದ್ದಾರೆ. ಬರ್ತಡೇ ನಿಮಿತ್ತ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದ ಅವರು, ‘ಈ ಸಲದ ನಿಮ್ಮ ಪ್ರೀತಿಯನ್ನು ಕೊಂಚ ದೂರದಿಂದಲೇ ಸ್ವೀಕರಿಸಲಿದ್ದೇನೆ’ ಎಂದಿದ್ದಾರೆ. ಅಷ್ಟೇ ಅಲ್ಲ ಕೇಕ್​ ಕಟಿಂಗ್​ ಆಚರಣೆಯನ್ನು ವಿಶ್ವದಾದ್ಯಂತ ಎಲ್ಲೆಂದರಲ್ಲಿ ಕಣ್ತುಂಬಿಕೊಳ್ಳಬಹುದು. ನಿಮ್ಮ ಮನೆಯಲ್ಲಿ ನೀವೇ ಕೇಕ್​ ಕಟ್​ ಮಾಡಿ ಬಾದ್ಶಾ ಜನ್ಮದಿನವನ್ನು ಆಚರಿಸಿಕೊಳ್ಳಬಹುದು. ಇದೆಲ್ಲವನ್ನು ಲೈಚವ್​ ಸ್ಟ್ರೀಮಿಂಗ್​ ಮಾಡಲು ಅಭಿಮಾನಿ ಬಳಗ ಜವಾಬ್ದಾರಿ ವಹಿಸಿಕೊಂಡಿದೆ.

    ಇದನ್ನೂ ಓದಿ: ಗೌತಮ್​ ಜತೆಗೆ ಸಪ್ತಪದಿ ತುಳಿದ ಕಾಜಲ್​ ಅಗರ್​ವಾಲ್​ …

    ಇದರ ಜತೆಗೆ ಶಾರುಖ್​ ಫ್ಯಾನ್​ ಕ್ಲಬ್​ ವತಿಯಿಂದ 5555 ಮಾಸ್ಕ್​, ಸ್ಯಾನಿಟೈಸರ್​, ಮತ್ತು ಅನಾತಾಶ್ರಮಗಳಿಗೆ, ವೃದ್ಧಾಶ್ರಮಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಇನ್ನೊಂದೆಡೆ ಶಾರುಖ್​ ಸದ್ಯ ಹಲವು ಸಿನಿಮಾ ಒಪ್ಪಿಕೊಂಡಿದ್ದು, ಆ ಸಿನಿಮಾ ತಂಡಗಳಿಂದಲೂ ಸಿನಿಮಾ ಪೋಸ್ಟರ್ ಬರುವ ಸಾಧ್ಯತೆ ಇದೆ. (ಏಜೆನ್ಸೀಸ್​)

    ವಾರ ಮೂರು; ಜನರೂ ಇಲ್ಲ.. ಹೊಸ ಚಿತ್ರಗಳೂ ಇಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts