

ಮುಂಬೈ: ಸಿನಿ ಸೆಲೆಬ್ರಿಟಿಗಳು ವೈಯಕ್ತಿಕ ಜೀವನದಲ್ಲಿ ತಮ್ಮ ಕೋಸ್ಟಾರ್ಗಳೊಂದಿಗೆ ಎಷ್ಟೇ ಸ್ನೇಹಿತರಾಗಿದ್ದರೂ ಅವರ ಅಭಿಮಾನಿಗಳ ನಡುವೆ ಒಂದಲ್ಲ ಒಂದು ಕಾರಣಕ್ಕೆ ಜಗಳ ಆಗುತ್ತಲ್ಲೇ ಇರುತ್ತದೆ. ಸದ್ಯ ಬಾಲಿವುಡ್ ಕಿಂಗ್ ಶಾರೂಖ್ ಖಾನ್ ಮತ್ತು ಭಾಯಿ ಜಾನ್ ಸಲ್ಮಾನ್ ಖಾನ್ ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣದಲ್ಲಿ ಫೈಟ್ ನಡೆಯುತ್ತಿದೆ. ಸದ್ಯ ಶಾರೂಖ್ ಖಾನ್(Shah Rukh Khan) ಅಭಿಮಾನಿಗಳು ಸಲ್ಮಾನ್ ಖಾನ್ ಅಭಿಮಾನಿಯನ್ನು ಟ್ರೋಲ್ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ಸಲ್ಮಾನ್ ಖಾನ್ ಅಭಿಮಾನಿ ಮಾಡಿರುವ ಒಂದು ಪೋಸ್ಟ್ ಕಾರಣವಾಗಿದೆ.
ಸುರ್ಜಿತ್ ಎಂಬ ವ್ಯಕ್ತಿ ತಮ್ಮ ಬಯೋದಲ್ಲಿ ಸಲ್ಮಾನ್ ಖಾನ್ ಅವರ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ. ಆತ ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ IIFA 2024ರ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಶಾರೂಖ್ ಖಾನ್ ಅವರು IIFA 2024 ಅನ್ನು ಹೋಸ್ಟ್ ಮಾಡುವಾಗ ಟೆಲಿಪ್ರೊಂಪ್ಟರ್ ಅನ್ನು ಬಳಸುತ್ತಿದ್ದಾರೆ. ಈ ಟೆಲಿಪ್ರಾಂಪ್ಟರ್ ಅನ್ನು ಪ್ರೇಕ್ಷಕರ ಹಿಂದೆ ಇರಿಸಲಾಗಿದೆ ಮತ್ತು IIFA 2024ರ ಸ್ಕ್ರಿಪ್ಟ್ ಅನ್ನು ದೊಡ್ಡ ಅಕ್ಷರಗಳಲ್ಲಿ ಬರೆಯಲಾಗಿದೆ, ಇದನ್ನು ಶಾರೂಖ್ ವೇದಿಕೆಯ ಮೇಲೆ ನಿಂತು ಓದುತ್ತಿದ್ದಾರೆ.
ಸಲ್ಮಾನ್ ಖಾನ್ ಅವರ ಅಭಿಮಾನಿ (ಸುರ್ಜಿತ್) ಈ ವಿಡಿಯೋವನ್ನು ಹಂಚಿಕೊಳ್ಳುವಾಗ ಶಾರೂಖ್ ಖಾನ್ IIFA 2024 ಪ್ರಶಸ್ತಿ ಕಾರ್ಯಕ್ರಮವನ್ನು ಹೋಸ್ಟ್ ಮಾಡುವಾಗ ಟೆಲಿಪ್ರೊಂಪ್ಟರ್ ಬಳಸಿದ್ದಾರೆ ಎಂದು ಬರೆದಿದ್ದಾರೆ. ಇದು ಶಾರೂಖ್ ಅಭಿಮಾನಿಗಳಿಗೆ ಇಷ್ಟವಾಗದೆ, ತಮ್ಮ ನೆಚ್ಚಿನ ನಟನನ್ನು ಸಮರ್ಥಿಸಿಕೊಂಡು ಸುರ್ಜೀತ್ ಅವರನ್ನು ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ.
ವಿಡಿಯೋ ನೋಡಿ ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ. ದೊಡ್ಡ ವಿಷಯವಿಲ್ಲ, ಅಂದರೆ ಈ ದಿನಗಳಲ್ಲಿ ಟೆಲಿಪ್ರೊಂಪ್ಟರ್ ಅನ್ನು ಯಾರು ಬಳಸುವುದಿಲ್ಲ? ಶೋಗಳನ್ನು ಹೋಸ್ಟಿಂಗ್ ಮಾಡುವ ಅನುಭವವನ್ನು ಹೊಂದಿರುವವರು ಸಹ ಟೆಲಿಪ್ರೊಂಪ್ಟರ್ಗಳನ್ನು ಬಳಸುತ್ತಾರೆ. ನಿಮ್ಮ ಸಲ್ಮಾನ್ ಖಾನ್ ಕೂಡ ಟೆಲಿಪ್ರಾಂಪ್ಟರ್ ಬಳಸುತ್ತಾರೆ. ಏನು ಸಮಸ್ಯೆ? 30 ನಿಮಿಷಗಳ ಪ್ರದರ್ಶನದ ಸ್ಕ್ರಿಪ್ಟ್ ಅನ್ನು ಯಾರಾದರೂ ನೆನಪಿಟ್ಟುಕೊಳ್ಳಲು ಸಾಧ್ಯವಾಗುತ್ತದೆ ಎಂದು ನೀವು ಭಾವಿಸುತ್ತೀರಾ? ಇದು ಪ್ರಶಸ್ತಿ ಕಾರ್ಯಕ್ರಮ ಪ್ರತಿಯೊಂದಕ್ಕೂ ಸ್ಕ್ರಿಪ್ಟ್ ಇದೆ. ಈ ಜನರು 2000 ರಿಂದ ಟೆಲಿಪ್ರೊಂಪ್ಟರ್ಗಳನ್ನು ಬಳಸುತ್ತಿದ್ದಾರೆ ಇವತ್ತು ಗೊತ್ತಾಯಿತೇ? ಎಂದು ಕಾಮೆಂಟ್ ಮಾಡುತ್ತಿದ್ದಾರೆ.(ಏಜೆನ್ಸೀಸ್)