ಬಾಲಿವುಡ್​​​ನ ಈ ನಟರು ಶಕ್ತಿಮಾನ್​ ಪಾತ್ರಕ್ಕೆ ಯೋಗ್ಯರಲ್ಲ ಅದಕ್ಕೆ ಕಾರಣ..; Mukesh Khanna

blank
blank

ಮುಂಬೈ: ಶಕ್ತಿಮಾನ್​​ ಪಾತ್ರದಲ್ಲಿ ಬಾಲಿವುಡ್​ನ ಈ ನಟ ಅಭಿನಯಿಸಲಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದ್ದಂತೆ ಕಳೆದ ಕೆಲವು ದಿನಗಳಿಂದ ಮುಖೇಶ್ ಖನ್ನಾ(Mukesh Khanna) ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಶಕ್ತಿಮಾನ್​ ಪಾತ್ರದಲ್ಲಿ ನಟಿಸಿ ಮಕ್ಕಳ ನೆಚ್ಚಿನ ಸೂಪರ್​ ಹೀರೋ ಆಗಿದ್ದ ನಟ ವ್ಯಂಗ್ಯವಾಗಿ ಮಾತನಾಡಿದ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿತ್ತು. ಆದರೆ ಸ್ವಲ್ಪ ಸಮಯದ ನಂತರ ಅದನ್ನು ಡಿಲೀಟ್​ ಮಾಡಲಾಗಿದೆ.

ಇದನ್ನು ಓಧಿ: ನಮ್ಮ ನಡುವೆ ಪ್ರೀತಿಯೇ ಇರಲಿಲ್ಲ; ರಿಸ್ಕ್​ ಇದ್ದರೂ ಮದುವೆಯಾದೆ ಎಂದಿದ್ದೇಕೆ ರೇಖಾ | Actress Rekha

ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಮುಖೇಶ್​ ಖನ್ನಾ, ಚಿತ್ರದ ಕಾಸ್ಟಿಂಗ್​​ ಕುರಿತು ಸಾಮಾಜಿಕ ಜಾಲತಾಣದಲ್ಲಿ ವದಂತಿಗಳು ಹರಿದಾಡುತ್ತಿರುವುದು ಇದೇ ಮೊದಲಲ್ಲ. ರಣವೀರ್ ಹೆಸರಿಗೂ ಮುನ್ನು ಶಾರೂಖ್​​​ಖಾನ್​​ ಮುಖ್ಯ ಪಾತ್ರದಲ್ಲಿ ನಟಿಸಬಹುದು ಎಂಬ ವದಂತಿಯೂ ಇತ್ತು. ಸದ್ಯದ ಊಹಾಪೋಹಗಳ ಬಗ್ಗೆ ಪ್ರತಿಕ್ರಿಯಿಸಲು ಇಷ್ಟಪಡುವುದಿಲ್ಲ. ಆದರೆ ಫಿಕ್ಸ್ ಇಮೇಜ್ ಹೊಂದಿರುವ ಯಾವುದೇ ಸ್ಟಾರ್ ಶಕ್ತಿಮಾನ್​​ ಪಾತ್ರಕ್ಕೆ ಸೂಕ್ತವಲ್ಲ ಎಂದು ಹೇಳಿದ್ದಾರೆ.

ಶಾರೂಖ್​ ಖಾನ್​, ಅಜಯ್ ದೇವಗನ್, ಅಕ್ಷಯ್ ಕುಮಾರ್​​ ಅಥವಾ ಟೈಗರ್ ಶ್ರಾಫ್ ಶಕ್ತಿಮಾನ್ ಆಗಲು ಸಾಧ್ಯವಿಲ್ಲ. ಯಾಕೆಂದರೆ ಶಕ್ತಿಮಾನ್​​ಗೆ ಬೇಕಾದ ಮುಖ ಇವರಲ್ಲಿ ಇಲ್ಲ. ಏಕೆಂದರೆ ಶಕ್ತಿಮಾನ್​ಗೆ ಒಂದು ನಿರ್ದಿಷ್ಟ ಚಿತ್ರಣವಿದೆ. ಸೂಪರ್ ಹೀರೋ ಪಾತ್ರಕ್ಕೆ ಬೇಕಾದ ಮುಗ್ಧತೆ ಮತ್ತು ಪ್ರಾಮಾಣಿಕತೆ ಇಂದಿನ ದಿನಗಳಲ್ಲಿ ನಟರಲ್ಲಿ ಕಾಣೆಯಾಗಿದೆ. ನನ್ನ ಪ್ರಕಾರ ಶಕ್ತಿಮಾನ್​​ ಪಾತ್ರಕ್ಕೆ ಹೊಸ ನಟನನ್ನು ಆಯ್ಕೆ ಮಾಡಬೇಕು ಎಂದು ಮುಖೇಶ್ ಹೇಳಿದ್ದಾರೆ.

ಮಕ್ಕಳಿಗೆ ಕಲಿಸುವ ಶಕ್ತಿಮಾನ್ ಬೇಕು. ನೀವು ನನ್ನನ್ನು ಕೇಳಿದರೆ, ಹೊಸ ಹುಡುಗ ಇರಬೇಕು ಎಂದು ನಾನು ಭಾವಿಸುತ್ತೇನೆ. ಈ ಪಾತ್ರವನ್ನು ಆಧರಿಸಿದ ಮತ್ತೊಂದು ಕಾರ್ಯಕ್ರಮಕ್ಕಾಗಿ ಮಾತುಕತೆ ನಡೆಸುತ್ತಿದ್ದೇನೆ. ಈ ಬಗ್ಗೆ ಅಪ್‌ಡೇಟ್‌ ಹಂಚಿಕೊಂಡಿರುವ ಅವರು, ಚಿತ್ರದ ಕಥೆಯ ಕೆಲಸ ಇನ್ನೂ ಬಾಕಿ ಇದೆ. ಸಿನಿಮಾ ಮಾಡಿದರೆ ಕಥೆ ಏನಾಗುತ್ತೆ ಅಂತ ಇನ್ನೂ ಗೊತ್ತಾಗಲ್ಲ. ಹಕ್ಕುಗಳ ಮಾತುಗಳು ಇನ್ನೂ ನಡೆಯುತ್ತಲೇ ಇವೆ ಎಂದರು.

ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಮಾರ್ಚ್ 18 ರಂದು ಮುಖೇಶ್​ ಖನ್ನಾ ರಣವೀರ್ ಸಿಂಗ್ ಅವರಿಗೆ ಈಗಾಗಲೇ ಇಮೇಜ್ ಇರುವ ಕಾರಣ, ಈ ನಟ ‘ಶಕ್ತಿಮಾನ್’ ಪಾತ್ರವನ್ನು ನಿರ್ವಹಿಸುವುದು ನನಗೆ ಇಷ್ಟವಿಲ್ಲ ಎಂದು ಹೇಳಿದ್ದರು. ಇಷ್ಟು ದಿನ ಈ ಬಗ್ಗೆ ಇದ್ದಂತಹ ವದ್ದಂತಿ ಕೇಳಿಯೂ ನಾನು ಮೌನವಾಗಿದ್ದೆ, ಆದರೆ ರಣವೀರ್ ಚಿತ್ರಕ್ಕೆ ಸಹಿ ಹಾಕಿದ್ದಾರೆ ಎಂದು ಬಂದ ಸುದ್ದಿ ನೋಡಿ ನನಗೆ ಶಾಕ್​ ಆಯಿತು. ಇಂತಹ ಇಮೇಜ್ ಇರುವ ನಟ ಎಷ್ಟೇ ದೊಡ್ಡವರಾದರೂ ಶಕ್ತಿಮಾನ್ ಪಾತ್ರದಲ್ಲಿ ನಟಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. (ಏಜೆನ್ಸೀಸ್​​​​​​)

ತಾಯಂದಿರಿಗೆ ಮಕ್ಕಳನ್ನು ಬೆಳೆಸಲು ಯಾವುದೇ ಬುಕ್​ ಇರುವುದಿಲ್ಲ; ಐಶ್ವರ್ಯಾ ರೈ ಹೀಗಿಳಿದ್ದೇಕೆ? IIFA

Share This Article

ವಿದುರ ನೀತಿ: ಇಂತಹ ಜನರಿಂದ ದೂರ ಇರಿ.. ಇಲ್ಲವಾದ್ರೆ ಅಪಾಯಕ್ಕೆ ಸಿಲುಕುತ್ತೀರಿ! | Vidura Niti

Vidura Niti: ಮಹಾಭಾರತದಲ್ಲಿ ಪ್ರಮುಖರಲ್ಲಿ ವಿದುರ ಕೂಡ ಒಬ್ಬರು. ಬರೀ ಕೌರವ ಮತ್ತು ಪಾಂಡವರಿಗೆ ಮಾತ್ರ…

ಹುರಿದ ಜೋಳ ಅಥವಾ ಬೇಯಿಸಿದ ಜೋಳ ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಬೆಸ್ಟ್​? ಇಲ್ಲಿದೆ ಮಾಹಿತಿ.. | Corn,

Corn: ಸಾಮಾನ್ಯವಾಗಿ ರಸ್ತೆಗಳ ಬದಿಯಲ್ಲಿ ಹುರಿದ ಜೋಳ ಮಾರಾಟ ಮಾಡುವುದನ್ನು ಅಧಿಕ ಗಮನಿಸಿರುತ್ತೀರಾ ಅಲ್ವಾ.. ಹಾಗೇ…