More

    ಮೂರೂವರೆ ವರ್ಷದ ಮಗುವನ್ನೂ ಬಿಡದ ದುರುಳ; ನಿತ್ಯ ಶಾಲೆಗೆ ಕರೆದೊಯ್ಯುತ್ತಿದ್ದವನಿಂದಲೇ ದುಷ್ಕೃತ್ಯ

    ಮಂಡ್ಯ: ನಿತ್ಯ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದವನಿಂದಲೇ ಪೈಶಾಚಿಕ ಕೃತ್ಯವೊಂದು ನಡೆದಿದೆ. ಈತ ಮೂರೂವರೆ ವರ್ಷದ ಹೆಣ್ಣು ಮಗುವಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಮಂಡ್ಯದ ಬಡಾವಣೆಯೊಂದರಲ್ಲಿ ಈ ಪ್ರಕರಣ ನಡೆದಿದೆ.

    ಪ್ರತಿನಿತ್ಯ ಆಟೋದಲ್ಲಿ ಈ ಮಗುವನ್ನು ಶಾಲೆಗೆ ಕರೆದೊಯ್ಯುತ್ತಿದ್ದ ವ್ಯಕ್ತಿಯೇ ಲೈಂಗಿಕ ಕಿರುಕುಳ ನೀಡಿದ್ದಾನೆ. ಜುಲೈ 17ರಂದು ಶಾಲೆಯಿಂದ ಮನೆಗೆ ಕರೆದುಕೊಂಡು ಬರುವಾಗ ಈ ಆಟೋಚಾಲಕ ದುಷ್ಕೃತ್ಯವೆಸಗಿದ್ದಾನೆ. ಆಟೋದಲ್ಲಿದ್ದ ಉಳಿದೆಲ್ಲ ಮಕ್ಕಳನ್ನು ಮನೆಗೆ ಬಿಟ್ಟ ಬಳಿಕ ಈ ಮಗುವಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.

    ಇದನ್ನೂ ಓದಿ: ಬೆಂಗಳೂರಲ್ಲಿ ಇದೇ ಭಾನುವಾರ ಕುಂದಾಪ್ರ ಕನ್ನಡ ಹಬ್ಬ: ಸಿಎಂ ಉಪಸ್ಥಿತಿ, ಸಂಭ್ರಮಕ್ಕೆ ಸ್ಟಾರ್ ಕಳೆ

    ಈಗ ಮಗುವಿನ ಖಾಸಗಿ ಅಂಗಾಂಗಕ್ಕೆ ಗಾಯ ಮಾಡಿದ್ದರಿಂದ ಮಗು ಜೋರಾಗಿ ಕಿರುಚಿಕೊಂಡಿದೆ. ಆ ನಂತರ ಮಗುವನ್ನು ಮನೆಗೆ ಬಿಟ್ಟು ಬಂದಿದ್ದಾನೆ. ಈ ಮಗು ಆಟೋಚಾಲಕನ ನೀಚಕೃತ್ಯದ ಕುರಿತು ಮನೆಯವರಲ್ಲಿ ತಿಳಿಸಿದೆ. ಪಾಲಕರು ಬಳಿಕ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆರೋಪಿ ಆಟೋಚಾಲಕನನ್ನು ಬಂಧಿಸಿರುವ ಪೊಲೀಸರು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

    ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts