

ಕಾಸರಗೋಡು: ಅಶ್ಲೀಲ ವಿಡಿಯೋ ತೋರಿಸಿ, ಬಾಲಕಿಗೆ ಕಿರುಕುಳ ನೀಡಿದ ಅಪರಾಧಿ, ಮುಳಿಯಾರು ಮಲ್ಲ ನಿವಾಸಿ ಸುಕುಮಾರನ್(45) ಎಂಬಾತನಿಗೆ ನ್ಯಾಯಾಲಯ 77 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 2.09 ಲಕ್ಷ ರೂ. ದಂಡ ವಿಧಿಸಿದೆ. ದಂಡ ಪಾವತಿಸದಿದ್ದಲ್ಲಿ ಆರೋಪಿ 2 ವರ್ಷ ಏಳು ತಿಂಗಳ ಹೆಚ್ಚಿನ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ. 2023ರ ಜೂನ್ 25ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಲಕಿಯನ್ನು ಮನೆಯೊಳಗೆ ಕರೆಸಿಕೊಂಡು, ಅಶ್ಲೀಲ ವಿಡಿಯೋ ತೋರಿಸಿ ಕಿರುಕುಳ ನೀಡಿದ್ದಾನೆ. ಮಾಹಿತಿ ಬಹಿರಂಗಪಡಿಸಿದರೆ ಕೊಲೆಗೈಯುವುದಾಗಿ ಬೆದರಿಕೆಯೊಡ್ಡಿರುವ ಬಗ್ಗೆ ಆದೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದರು.