ಮಲಾರ್ ಕೋಡಿ ರಸ್ತೆ ಅಭಿವೃದ್ಧಿಗೆ ಬೇಡಿಕೆ : ಮುಸ್ತಫಾ ಹರೇಕಳ ಹೇಳಿಕೆ

New Project (36)
Published on

ಉಳ್ಳಾಲ: ಹರೇಕಳ ಗ್ರಾಮದ ಮಲಾರ್ ಕೋಡಿಯಲ್ಲಿ ನಿವೇಶನ, ಆರೋಗ್ಯ ಕೇಂದ್ರ ಸಹಿತ ಅಭಿವೃದ್ಧಿ ಆಗುವುದರಿಂದ ರಸ್ತೆಗೆ ಅಭಿವೃದ್ಧಿಗೆ ಬೇಡಿಕೆ ಸಲ್ಲಿಸಲಾಗಿದ್ದು, ಸ್ಪೀಕರ್ ಅನುದಾನದ ಭರವಸೆ ನೀಡಿದ್ದಾರೆ. ಇಲ್ಲಿ ತಳಅಂತಸ್ತಿನಲ್ಲಿ ಆಸ್ಪತ್ರೆ ಹಾಗೂ ಮೊದಲ ಅಂತಸ್ತಿನಲ್ಲಿ ಮನೆ ನಿರ್ಮಾಣ ಆಗಲಿದೆ ಎಂದು ಮಂಗಳೂರು ತಾಪಂ ಮಾಜಿ ಸದಸ್ಯ ಮುಸ್ತಫಾ ಹರೇಕಳ ಹೇಳಿದರು.

ದ.ಕ.ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿ ಕಚೇರಿ, ಬೋಳಿಯಾರ್ ಆರೋಗ್ಯ ಕೇಂದ್ರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಂಜಿನಿಯರಿಂಗ್ ಘಟಕದ 15ನೇ ಹಣಕಾಸು ಯೋಜನೆಯಡಿ ಹರೇಕಳ ಗ್ರಾಮದ ಮಲಾರ್‌ನಲ್ಲಿ ನಿರ್ಮಾಣಗೊಳ್ಳಲಿರುವ ಆಯುಷ್ಮಾನ್ ಆರೋಗ್ಯ ಕೇಂದ್ರ ಕಟ್ಟಡಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹರೇಕಳ ಗ್ರಾಪಂ ಅಧ್ಯಕ್ಷೆ ಗುಲಾಬಿ ಗುದ್ದಲಿಪೂಜೆ ನೆರವೇರಿಸಿದರು. ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್, ಗ್ರಾಪಂ ಉಪಾಧ್ಯಕ್ಷ ಎಂ.ಪಿ.ಅಬ್ದುಲ್ ಮಜೀದ್, ಸದಸ್ಯರಾದ ಅಬ್ದುಲ್ ಸತ್ತಾರ್ ನ್ಯೂಪಡ್ಪು, ಎಸ್.ಎಂ.ಬಶೀರ್, ಅಬೂಬಕ್ಕರ್ ಸಿದ್ದೀಕ್, ಅನಿತಾ ಡಿಸೋಜ, ಪಾವೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುನಿತಾ, ಪಜೀರ್ ಗ್ರಾಪಂ ಮಾಜಿ ಅಧ್ಯಕ್ಷ ಭರತ್‌ರಾಜ್ ಶೆಟ್ಟಿ ಪಜೀರುಗುತ್ತು, ಕೊಣಾಜೆ ಗ್ರಾಪಂ ಮಾಜಿ ಅಧ್ಯಕ್ಷ ನಝರ್ ಷಾ ಪಟ್ಟೋರಿ, ಆಶಾ ಕಾರ್ಯಕರ್ತೆ ಲವಿಟಾ, ಸಮುದಾಯ ಆರೋಗ್ಯ ಅಧಿಕಾರಿ ಸ್ನೇಹಾ, ಸುರಕ್ಷಾ ಅಧಿಕಾರಿ ವತ್ಸಲಾ, ಮುಖಂಡರಾದ ಅನ್ವರ್ ಮಲಾರ್, ಝಕರಿಯಾ ಮಲಾರ್, ಅನ್ವರ್ ಕೋಡಿ, ಇಬ್ರಾಹಿಂ ಮಲಾರ್ ಉಪಸ್ಥಿತರಿದ್ದರು. ಗ್ರಾಪಂ ಮಾಜಿ ಅಧ್ಯಕ್ಷ ಬದ್ರುದ್ದೀನ್ ಫರೀದ್ ನಗರ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net