

ನವದೆಹಲಿ: ಸಾಂಪ್ರದಾಯಿಕ ಮೈತ್ರಿಗೆ ವಾಪಸ್ಸಾಗಿ, ಎನ್ಸಿಪಿ ಮೈತ್ರಿಯಿಂದ ಹೊರಬನ್ನಿ ಎಂದು ಹಲವು ಬಾರಿ ಉದ್ಧವ್ ಠಾಕ್ರೆ ಅವರಿಗೆ ಮನವಿ ಮಾಡಿದ್ದರೂ ಕೇಳಿರಲಿಲ್ಲ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.
ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಈ ಹಿಂದಿನ ಸರ್ಕಾರ ಸರ್ಕಾರ ಮುರಿದು ಬೀಳಲು ಕಾರಣವನ್ನು ಬಹಿರಂಗಪಡಿಸಿದ ಶಿಂಧೆ, ಅಘಾಡಿ ಸರ್ಕಾರದಿಂದ ಯಾವೊಬ್ಬ ಶಾಸಕರೂ ಹಾಗೂ ಸಚಿವರಿಗೂ ಇಷ್ಟವಿರಲಿಲ್ಲ ಹಾಗಾಗಿ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಳ್ಳಿ ಎಂದು ಕೇಳಿಕೊಂಡರೂ ಉದ್ಧವ್ ಕೇಳಿರಲಿಲ್ಲ ಎಂದಿದ್ದಾರೆ.
ಎನ್ಸಿಪಿ ಜತೆಗೆ ಸರ್ಕಾರ ರಚನೆಯಾದಾಗಿನಿಂದ ಮೂರ್ನಾಲ್ಕು ಬಾರಿ ಎಲ್ಲಾ ಶಾಸಕರೂ ಒಟ್ಟಿಗೆ ಸೇರಿ ಅವರಲ್ಲಿ ಮನವಿ ಮಾಡಿಕೊಂಡಿದ್ದೆವು. ಆದರೂ ಇದಕ್ಕೆ ಒಪ್ಪದಿರುವುದರಿಂದ ಅವರ ಸರ್ಕಾರ ಬೀಳಲು ಕಾರಣವಾಗಿದೆ ಎಂದು ಹೇಳಿದರು.
ಸಚಿವ ಸಂಪುಟ ವಿಸ್ತರಣೆ ಕುರಿತು ಡಿಸಿಎಂ ದೇವೇಂದ್ರ ಫಡ್ನವಿಸ್ ಜತೆ ದೆಹಲಿ ಪ್ರವಾಸ ಕೈಗೊಂಡಿರುವ ಶಿಂಧೆ ಅವರು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಈ ಬಳಿಕ ಮಾಧ್ಯಮಗಳಿಗೆ ಅಘಾಡಿ ಸರ್ಕಾರದ ಕುರಿತು ಈ ರೀತಿ ಪ್ರತಿಕ್ರಿಯಿಸಿದ್ದಾರೆ. (ಏಜೆನ್ಸೀಸ್)