

ಮುಂಬೈ: ಬಾಲಿವುಡ್ನ ಬಹಳಷ್ಟು ಮಂದಿ ತಾವು ತೊಡುವ ಬಟ್ಟೆಯ ಮೂಲಕವೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಒಮ್ಮೊಮ್ಮೆ ಪ್ರಶಂಸೆ ಗಿಟ್ಟಿಸಿಕೊಂಡರೆ ಕೆಲವೊಮ್ಮೆ ಭಾರೀ ಟೀಕೆಗೊಳಗಾಗುವುದು ಸಾಮಾನ್ಯ. ಕೆಲವೊಮ್ಮೆ ಅತಿರೇಕದ ವರ್ತನೆಯಿಂದ ತಮ್ಮ ಅಭಿಮಾನಿಗಳಿಂದಲೇ ವಿರೋಧಕ್ಕೊಳಗಾಗುತ್ತಾರೆ.
ಸದ್ಯ ಬಾಲಿವುಡ್ನಲ್ಲೇ ಅತಿ ಹೆಚ್ಚು ಟೀಕೆಗೊಳಗಾಗುವ ನಟಿ ಮಲೈಕಾ ಅರೋರಾ ಈ ಬಾರಿ ಹಿಂದೆಂದಿಗಿಂತಲೂ ಅತಿ ಬಿಗಿಯಾದ ಬಟ್ಟೆ ಧರಿಸಿ ಟ್ರೋಲ್ಗೊಳಗಾಗಿದ್ದಾರೆ.
ತನಗಿಂತ ಕಿರಿಯ ವಯಸ್ಸಿನ ಜತೆ ಸಂಬಂಧದಲ್ಲಿರುವ ನಟಿ ಮಲೈಕಾ ಆಗ್ಗಾಗ್ಗೆ ತನ್ನ ಬಾಯ್ಫ್ರೆಂಡ್ ಜತೆಗೆ ಕಾಣಿಸಿಕೊಳ್ಳುತ್ತಿರುತ್ತಾರೆ. ಇದಷ್ಟೇ ಅಲ್ಲದೇ ಈ ಬಾರಿ ಜಿಮ್ಗೆ ತೆರಳಿದ ವೇಳೆ ಹಾಕಿಕೊಂಡಿದ್ದ ಬಟ್ಟೆ ನೋಡಿದವರು ನಿಜಕ್ಕೂ ಶಾಕ್ ಆಗಿದ್ದಾರೆ.
ಕೆಲವರು ನೀವು ನಿಜಕ್ಕೂ ಬಟ್ಟೆ ತೊಟ್ಟಿದ್ದೀರಾ? ಅತೀ ಕಳಪೆ ಹಾಗೂ ನಿಮ್ಮ ಚೀಪ್ ಮೆಂಟಾಲಿಟಿಯನ್ನು ಪ್ರದರ್ಶಿಸಬೇಡಿ ಎಂದು ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. (ಏಜೆನ್ಸೀಸ್)