ಈ ಯುವತಿಗಿರುವ 7 ಮಂದಿ ಬಾಯ್​ಫ್ರೆಂಡ್ಸ್​ ಕೂಡ ವೃದ್ಧರೇ! ಆಕೆ ಕೊಟ್ಟ ಕಾರಣ ಕೇಳಿದ್ರೆ ಹೌಹಾರ್ತೀರಿ!

Colombian Young woman
Published on

ಬೋಗೊಟಾ: ಭಾರಿ ವಯಸ್ಸಿನ ಅಂತರ ಇರುವ ಸಂಬಂಧಗಳ ಬಗ್ಗೆ ನಾವು ಕೇಳಿದ್ದೇವೆ. ಯುವತಿಯು ವೃದ್ಧನನ್ನು ಅಥವಾ ಯುವಕ ವೃದ್ಧೆಯನ್ನು ಲವ್​ ಮಾಡುವುದನ್ನು ಅನೇಕ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಇಲ್ಲೊಂದು ಪ್ರಕರಣ ಇದೆಲ್ಲದಕ್ಕಿಂತ ತುಂಬಾ ವಿಚಿತ್ರವಾಗಿದೆ. ಏಕೆಂದರೆ, ಈ ಮಹಿಳೆಗೆ ಬರೋಬ್ಬರಿ 7 ಮಂದಿ ಬಾಯ್​ಫ್ರೆಂಡ್​ಗಳಿದ್ದಾರೆ. ಅಚ್ಚರಿಯ ಸಂಗತಿ ಏನೆಂದರೆ, 7 ಬಾಯ್​ಫ್ರೆಂಡ್​ಗಳು ಕೂಡ ವೃದ್ಧರು.

ಕೊಲಂಬಿಯಾದ ಬ್ಯಾರನ್‌ಕ್ವಿಲ್ಲಾ ಮೂಲದ ಯುವತಿ ಲೀನಾ ಅವರಿಗೆ ಸಂಬಂಧಿಸಿದ ವಿಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ತನ್ನ ಲವ್​ ಫೇಲ್ಯೂರ್ ಆದ​ ನಂತರ ವಯಸ್ಸಾದ ಪುರುಷರೊಂದಿಗೆ ಡೇಟಿಂಗ್ ಮಾಡಲು ಪ್ರಾರಂಭಿಸಿರುವುದಾಗಿ ಯುವತಿ ಹೇಳಿದ್ದಾಳೆ. ಇದು ತನ್ನ ಆರ್ಥಿಕ ಸಮಸ್ಯೆಗಳನ್ನು ಸಹ ಪರಿಹರಿಸುತ್ತದೆ ಎಂದಿದ್ದಾರೆ.

ಸದ್ಯ ಲೀನಾ, ವೃದ್ಧರನ್ನು ಡೇಟಿಂಗ್‌ಗಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಲೀನಾ ಮಾತನಾಡಿದ್ದು, ಒಂದು ದಿನ ನೆರೆಹೊರೆಯಲ್ಲಿ ಒಬ್ಬ ಮುದುಕ ತನ್ನೊಂದಿಗೆ ಫ್ಲರ್ಟಿಂಗ್ ಮಾಡುತ್ತಿದ್ದ. ಆ ಬಳಿಕ ವೃದ್ಧರೊಂದಿಗೆ ಸಂಬಂಧ ಬೆಳೆಸಲು ಬಯಸಿ, ಮುದುಕರೊಂದಿಗೆ ಬಾಂಧವ್ಯವನ್ನು ಬೆಳೆಸಿಕೊಂಡೆ. ಬಿಡುವಿನ ವೇಳೆಯಲ್ಲಿ ವೃದ್ಧರೊಂದಿಗೆ ಸುತ್ತಾಡಲು ಆರಂಭಿಸಿದೆ. ಈ ಮುದುಕರ ಬಳಿ ಏನನ್ನೂ ಕೇಳುವ ಅಗತ್ಯವಿಲ್ಲ. ಏಕೆಂದರೆ, ನನಗೆ ಬೇಕಾದುದನ್ನು ಅವರೇ ಮಾಡುತ್ತಾರೆ ಎಂದು ಲೀನಾ ಹೇಳಿದರು.

ಲೀನಾ ಅವರ ಎಲ್ಲ ಗೆಳೆಯರು ಒಬ್ಬರಿಗೊಬ್ಬರು ಚೆನ್ನಾಗಿ ತಿಳಿದಿದ್ದಾರೆ. ಆಕೆಯ ಜೀವನದ ಎಲ್ಲ ಖರ್ಚುಗಳನ್ನು ಅವರು ಭರಿಸುತ್ತಾರೆ. ಈ ಮುದುಕರು ಅವಳಿಗಾಗಿ ಮನೆಗೆಲಸ, ಬಟ್ಟೆ ಒಗೆಯುವುದು ಮತ್ತು ಅಡುಗೆ ಮಾಡಲು ಸಹಾಯ ಮಾಡುತ್ತಾರೆ. ಯೂಟ್ಯೂಬ್ ಚಾನೆಲ್ 'ಅಲ್ಟಿಮಾ ಹೋರಾ ವಲ್ಲೆ'ಗೆ ನೀಡಿದ ಸಂದರ್ಶನದಲ್ಲಿ ಯುವತಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net