ಸುಶಾಂತ್​ ಪ್ರಕರಣ ಮುಗಿಯುವವರೆಗೂ ಮುಂಬೈ ಕಮಿಷನರ್​ಗೆ ರಜೆ ನೀಡಿ; ಮಹಾ ಸರ್ಕಾರಕ್ಕೆ ಬಿಜೆಪಿ ಪತ್ರ

123
Published on

ಮುಂಬೈನಲ್ಲೀಗ ಒಂದೆಡೆ ಕರೊನಾ ಮತ್ತೊಂದೆಡೆ ನೆರೆಹಾವಳಿ ಇದರ ಜತೆಗೆ ಸುಶಾಂತ್​ ಆತ್ಮಹತ್ಯೆ ಪ್ರಕರಣ ಸದ್ದು ಮಾಡುತ್ತಿದೆ. ಸಿಬಿಐ ತನಿಖೆಗೆ ವಹಿಸಲಾಗುತ್ತಿದ್ದಂತೆ, ಮತ್ತಷ್ಟು ತಿರುವು ಪಡೆದುಕೊಳ್ಳುತ್ತಿದೆ. ಈ ನಡುವೆ, ಪ್ರಕರಣದ ಸಾಕ್ಷ್ಯಗಳನ್ನು ಮುಂಬೈ ಪೊಲೀಸ್​ ನಾಶಪಡಿಸುತ್ತಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬರುತ್ತಿದೆ. ಇದೆಲ್ಲವನ್ನು ಅರಿತ ಮಹಾರಾಷ್ಟ್ರ ಬಿಜೆಪಿ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರಿಗೆ ಪತ್ರ ಬರೆದಿದೆ.

ಬಿಹಾರದ ಪಾಟ್ನಾದಲ್ಲಿ ಸುಶಾಂತ್​ ಸಾವಿನಲ್ಲಿ ರಿಯಾ ಚಕ್ರವರ್ತಿ ಕೈವಾಡವಿದೆ ಎಂದು ಆರೋಪಿಸಿ ತಂದೆ ಕೆಕೆ ಸಿಂಗ್​ ದೂರು ನೀಡಿದ್ದರು. ಆ ಬೆನ್ನಲ್ಲೇ ಬಿಹಾರದ ಪೊಲೀಸ್​​ ತಂಡ ಮುಂಬೈ ತಲುಪಿತ್ತು. ಆದರೆ, ಹಾಗೆ ಬಂದ ಪೊಲೀಸರಿಗೆ ವಿಚಾರಣೆಗೆ ಸಹಕಾರ ನೀಡದೆ ಮುಂಬೈ ಪೊಲೀಸ್​ ಉದ್ಧಟತನ ಮೆರೆದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಮುಂಬೈನ ಪೂರ್ವ ಕಾಂದಿವಿಲಿ ವಿಧಾನಸಭಾ ಕ್ಷೇತ್ರದ ಶಾಸಕ ಅತುಕ್​ ಭಟ್ಕಾಳ್ಕರ್​ ಸಿಎಂ ಉದ್ಧವ್​ ಠಾಕ್ರೆಗೆ ಪತ್ರ ಬರೆದು, ನಗರ ಪೊಲೀಸ್​ ಕಮಿಷನರ್ ಅವರನ್ನು ರಜೆ ಮೇಲೆ ಕಳುಹಿಸುವಂತೆ ಒತ್ತಾಯಿಸಿದ್ದಾರೆ.

ಪ್ರಕರಣ ಇತ್ಯರ್ಥವಾಗುವರೆಗೂ ಸುದೀರ್ಘ ರಜೆ ಮೇಲೆ ಪರಮ್​ ಬೀರ್ ಸಿಂಗ್​ ಅವರನ್ನು ಕಳುಹಿಸಬೇಕು. ಪ್ರಕರಣದ ಹಾದಿ ತಪ್ಪಿಸುತ್ತಿದ್ದಾರೆ. ಬಿಹಾರ ಪೊಲೀಸ್​ ತನಿಖೆಗೂ ತೊಡಕಾಗುತ್ತಿದ್ದಾರೆ. ಹಾಗಾಗಿ ತತಕ್ಷಣ ಆದೇಶ ಹೊರಡಿಸಬೇಕು ಎಂದು ಪತ್ರದ ಮೂಲಕ ಅತುಲ್​ ಭಟ್ಕಾಳ್ಕರ್​ ಕೋರಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net