'ಭಗವಂತ ಕೇಸರಿ' ಚಿತ್ರತಂಡದಿಂದ ಹೊರಬಿತ್ತು ಹೊಸ ಅಪ್ಡೇಟ್​!

Untitled design - 2023-10-01T131604.579
Published on

ಆಂಧ್ರಪ್ರದೇಶ: ತೆಲುಗು ಚಿತ್ರರಂಗದ ಹಿರಿಯ ನಟ, ಬಾಲಯ್ಯ ಎಂದೇ ಖ್ಯಾತರಾದ ನಂದಮೂರಿ ಬಾಲಕೃಷ್ಣ ಅಭಿನಯದ ಬಹುನಿರೀಕ್ಷಿತ 'ಭಗವಂತ ಕೇಸರಿ' ಚಿತ್ರದ ಕುರಿತು ಇದೀಗ ಹೊಸ ಮಾಹಿತಿಯೊಂದು ಪ್ರಕಟವಾಗಿದೆ.

ಬಾಲಯ್ಯ ಮತ್ತು ನಟಿ ಕಾಜಲ್ ಅಗರ್​ವಾಲ್​ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರವು ಇದೇ ಅಕ್ಟೋಬರ್ 19 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಗೊಳ್ಳಲು ಸಿದ್ಧವಾಗಿದೆ. ಸದ್ಯ ಹಲವು ದಿನಗಳ ನಂತರ ಇದೀಗ ಚಿತ್ರತಂಡ ಹೊಸ ಅಪ್ಡೇಟ್​ವೊಂದನ್ನು ಘೋಷಿಸಿದೆ.

ಅನಿಲ್ ರವಿಪುಡಿ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರಕ್ಕೆ ಥಮನ್ ಸಂಗೀತ ಸಂಯೋಜಿಸಿದ್ದು, ಸಿನಿಮಾದ ಎರಡನೇ ಸಿಂಗಲ್ 'ಉಯ್ಯಾಲೋ ಉಯ್ಯಾಲಾ' ಇದೇ ಅಕ್ಟೋಬರ್ 4 ರಂದು ಬಿಡುಗಡೆಯಾಗಲಿದೆ ಎಂದು ಚಿತ್ರ ತಯಾರಕರು ಅಧಿಕೃತವಾಗಿ ಘೋಷಿಸಿದರು.

ಚಿತ್ರದಲ್ಲಿ ಶ್ರೀಲೀಲಾ, ಅರ್ಜುನ್​ ರಾಂಪಾಲ್, ಆರ್​. ಶರತ್​ಕುಮಾರ್​, ಟಿ.ಎನ್. ಬಾಲಕೃಷ್ಣ, ಶ್ರೀರಾಮ್​ ರೆಡ್ಡಿ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net