ಎಸ್‌ಡಿಎಂ ಪಾಲಿಟೆಕ್ನಿಕ್‌ನಲ್ಲಿ ರೋಬೊ ರೇಸ್

New Project (12)
Published on

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಇಲೆಕ್ಟ್ರಾನಿಕ್ಸ್ ಕಮ್ಯುನಿಕೇಷನ್ ವಿಭಾಗ ವತಿಯಿಂದ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ರೋಬೊ ರೇಸ್-2025 ತಾಂತ್ರಿಕ ಸ್ಪರ್ಧೆ ನಡೆಯಿತು.

ಪ್ರಾಂಶುಪಾಲ ಸಂತೋಷ್ ರೋಬೋ ರೇಸ್ ಕಾರನ್ನು ಚಾಲನೆ ಮಾಡಿ ಉದ್ಘಾಟಿಸಿದರು. ಕಾಲೇಜಿನ 25 ತಂಡಗಳು ಭಾಗವಹಿಸಿದ್ದು, ವಿದ್ಯಾರ್ಥಿಗಳೇ 100 ಮೀ. ಉದ್ದದ ಟ್ರಾೃಕ್ ತಯಾರಿಸಿದ್ದರು. 10 ವಿವಿಧ ಅಡೆತಡೆಗಳನ್ನು ಹೊಂದಿದ್ದ ಟ್ರಾೃಕ್‌ನಲ್ಲಿ ಮಣ್ಣು, ಮರಳು, ಕಲ್ಲು, ಏರಿಳಿತ, ನೇತಾಡುವ ಸೇತುವೆ, ಎಣ್ಣೆಯನ್ನು ಬಳಸಿ ಜಾರುವ ರೀತಿಯ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು. ಕಾಲೇಜಿನ ಒಟ್ಟು 25 ತಂಡಗಳು ಭಾಗವಹಿಸಿದ್ದರು.

ಕಾಲೇಜಿನ ವ್ಯವಸ್ಥಾಪಕ ಚಂದ್ರನಾಥ್ ಜೈನ್, ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗ ಮುಖ್ಯಸ್ಥೆ ಮೇರಿ ಸ್ಮಿತಾ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net