ಸದಸ್ಯರಿಗೆ ಸಹಕಾರ ಸಂಜೀವಿನಿ, ಸಿಬ್ಬಂದಿಗೆ ಆರೋಗ್ಯ ವಿಮೆ : ಆರ್ಯಾಪು ಸಹಕಾರಿ ಸಂಘ ಮಹಾಸಭೆ: ಅಧ್ಯಕ್ಷ ಮಹಮ್ಮದ್ ಆಲಿ ಘೋಷಣೆ

New Project (8)
Published on

ಪುತ್ತೂರು ಗ್ರಾಮಾಂತರ: ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರಿಗೆ ಸಹಕಾರ ಸಂಜೀವಿನಿ ವಿಮೆ ಹಾಗೂ ಸಿಬ್ಬಂದಿಗೆ ಆರೋಗ್ಯ ವಿಮಾ ಯೋಜನೆ ಜಾರಿಗೆ ತರಲಾಗುವುದು ಎಂದು ಅಧ್ಯಕ್ಷ ಎಚ್.ಮಹಮ್ಮದ್ ಆಲಿ ಘೋಷಿಸಿದರು.

ಸಂಪ್ಯದಲ್ಲಿರುವ ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕೇಂದ್ರ ಕಚೇರಿಯ ಸಭಾಭವನದಲ್ಲಿ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಘ 2024-25ನೇ ಸಾಲಿನಲ್ಲಿ 265 ಕೋಟಿ ರೂ. ವ್ಯವಹಾರ ನಡೆಸಿ, 1.15 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಶೇ.12ರಷ್ಟು ಡಿವಿಡೆಂಡ್ ನೀಡಲಾಗುವುದು ಎಂದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಂತಿ ಭಾಸ್ಕರ್ ಹಿಂದಿನ ಸಾಲಿನ ವಾರ್ಷಿಕ ಮಹಾಸಭೆಯ ನಡಾವಳಿ ಮಂಡಿಸಿದರು. ಸಂಘದ ವ್ಯವಸ್ಥಾಪಕ ಅಜಿತ್ ಕುಮಾರ್ ರೈ ವಾರ್ಷಿಕ ವರದಿ ಮಂಡಿಸಿದರು. ಸಂಘದ ಉಪಾಧ್ಯಕ್ಷ ಸುರೇಂದ್ರ ರೈ ಬಳ್ಳಮಜಲು, ನಿರ್ದೇಶಕರಾದ ಸತೀಶ್ ನಾಕ್ ಪರ್ಲಡ್ಕ, ಸದಾನಂದ ಶೆಟ್ಟಿ ಕೂರೇಲು, ಗಣೇಶ್ ರೈ ಬಳ್ಳಮಜಲು, ಗಣೇಶ್ ರೈ ತೊಟ್ಲಮೂಲೆ, ಶೀನಪ್ಪ ಮರಿಕೆ, ಇಸ್ಮಾಯಿಲ್ ಮಲಾರು, ತಿಮ್ಮಪ್ಪ ಜಂಗಮುಗೇರು, ಸಂಶುದ್ದೀನ್ ನೀರ್ಕಜೆ ರಂಜಿತ್ ಬಂಗೇರ ಸಂಪ್ಯ ಉಪಸ್ಥಿತರಿದ್ದರು. ಚಂದ್ರಕಲಾ ಓಟೆತ್ತಿಮಾರು ಸ್ವಾಗತಿಸಿದರು. ತೇರೇಜಾ ಎಂ.ಸಿಕ್ವೇರಾ ವಂದಿಸಿದರು. ಉಮೇಶ್ ಎಸ್.ಕೆ. ನಿರೂಪಿಸಿದರು.

ಸಾಧಕರಿಗೆ ಸನ್ಮಾನ

ಸಹಕಾರಿ ಸಂಘದ ಸದಸ್ಯರ ಸಾಧಕ ಮಕ್ಕಳನ್ನು ಸನ್ಮಾನಿಸಲಾಯಿತು. ಸಿ.ಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕುರಿಯ ಗ್ರಾಮದ ಕೊಡ್ಲಾರಿನ ಅಂಕಿತ್ ಎನ್.ಕೆ. ಹಾಗೂ ವೇಟ್‌ಲಿಫ್ಟರ್ ಮರಿಕೆಯ ದಿಶಾನ್ ಎಂ. ಅವರನ್ನು ಸನ್ಮಾನಿಸಲಾಯಿತು. ಸಂಘದ ಸದಸ್ಯ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ ಹಾಗೂ ನಿರ್ದೇಶಕ ಸದಾನಂದ ಶೆಟ್ಟಿ ಕೂರೇಲು ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net