

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ
ಕ್ರೀಡೆ ಕ್ರೀಡಾಳುಗಳ ಬದುಕಿಗೆ ಹೊಸ ಆಯಾಮ ನೀಡುತ್ತದೆ. ಕ್ರೀಡಾ ಮನೋಭಾವ ಆಟಗಾರರ ಪ್ರಗತಿಗೆ ಅಸ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ದ.ಕ. ಜಿಲ್ಲಾ ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ಮತ್ತು ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ಸೋಮವಾರ ಜಿಲ್ಲಾಮಟ್ಟದ ಬಾಲಕ ಬಾಲಕಿಯರ ತ್ರೋಬಾಲ್ ಟೂರ್ನಿ ಉದ್ಘಾಟಿಸಿ ಮಾತನಾಡಿದರು.
ಸುಬ್ರಹ್ಮಣ್ಯ ಗ್ರಾಪಂ ಅಧ್ಯಕ್ಷೆ ಸುಜಾತಾ ಕಲ್ಲಾಜೆ, ಜಿಲ್ಲಾ ಕ್ರೀಡಾ ಸಂಯೋಜಕ ಪ್ರೇಮನಾಥ ಶೆಟ್ಟಿ, ರಾಜ್ಯಮಟ್ಟದ ಕಬಡ್ಡಿ ತೀರ್ಪುಗಾರ ಶಿವರಾಮ ಯೇನೆಕಲ್ಲು, ಕೆ.ಎಸ್.ಗೌಡ ವಿದ್ಯಾಲಯ ಪ್ರಾಚಾರ್ಯ ಸದಾನಂದ ಮಾವಜಿ, ಮೂಲ್ಕಿ ಮೆಡ್ಲಿನ್ ಪಿ.ಯು ಕಾಲೇಜು ಪ್ರಾಂಶುಪಾಲೆ ಲೀರಿಯಾ ಶಾಂತಿ ಮೆಂಡೋಲ್ಸಾ ಮುಖ್ಯ ಅತಿಥಿಗಳಾಗಿದ್ದರು.
ಎಸ್.ಎಸ್.ಪಿ.ಯು ಕಾಲೇಜು ಪ್ರಾಚಾರ್ಯ ಸೋಮಶೇಖರ ನಾಯಕ್, ದೈಹಿಕ ಶಿಕ್ಷಣ ಉಪನ್ಯಾಸಕ ರಾಧಾಕೃಷ್ಣ ಚಿದ್ಗಲ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಎನ್.ಎಸ್., ಶಿಕ್ಷಕ ರಕ್ಷಕ ಸಂಘ ಅಧ್ಯಕ್ಷೆ ತ್ರಿವೇಣಿ ದಾಮ್ಲೆ, ಸಾಂಸ್ಕೃತಿಕ ತಂಡದ ಸಂಚಾಲಕಿ ರೇಖಾರಾಣಿ ಸೋಮಶೇಖರ್, ವಿದ್ಯಾರ್ಥಿ ಸರ್ಕಾರದ ಸಂಯೋಜಕ ಜಯಪ್ರಕಾಶ್ ಆರ್., ಕ್ರೀಡಾ ಕಾರ್ಯದರ್ಶಿ ಧನುಷ್ ಕಾಶಿಕಟ್ಟೆ ಮೊದಲಾದವರಿದ್ದರು. ಉಪನ್ಯಾಸಕಿ ಶ್ರುತಿ ಅಶ್ವಥ್ ನಿರೂಪಿಸಿದರು.