ಕಾಸರಗೋಡು: ಮೊಗ್ರಾಲ್ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಸ್ಕೂಟರ್ ರಸ್ತೆ ಅಂಚಿನ ದರೆಗೆ ಡಿಕ್ಕಿಯಾಗಿ ಸ್ಕೂಟರ್ ಸವಾರ ಕಲ್ಲಂಗೈ ಬಳ್ಳೂರು ದಿನೇಶ್‌ಚಂದ್ರ(55) ಮೃತಪಟ್ಟಿದ್ದಾರೆ.
ಕಾಸರಗೋಡಿನಿಂದ ಕುಂಬಳೆ ಕಡೆಗೆ ಸಂಚರಿಸುತ್ತಿದ್ದ ಸ್ಕೂಟರ್ ದರೆಗೆ ಡಿಕ್ಕಿಯಾಗಿ ರಸ್ತೆಗೆ ಬಿದ್ದ ದಿನೇಶ್‌ಚಂದ್ರ ಅವರ ಮೇಲೆ ಲಾರಿ ಸಂಚರಿಸಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟರು.
ದಿನೇಶ್‌ಚಂದ್ರ ಎರಿಯಾಕೋಟ ಶ್ರೀ ಭಗವತೀ ಕ್ಷೇತ್ರ ಆಡಳಿತ ಸಮಿತಿ ಕೋಶಾಧಿಕಾರಿಯಾಗಿದ್ದರು. ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.