ಕಾಸರಗೋಡು ಜಿಲ್ಲೆಯಲ್ಲಿ ಸರಣಿ ಕಳವು

blank

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಜಿಲ್ಲೆಯ ವಿವಿಧೆಡೆ ಆರಾಧನಾಲಯ, ಆಸ್ಪತ್ರೆ, ವ್ಯಾಪಾರಿ ಸಂಸ್ಥೆಗಳಿಂದ ಸರಣಿ ಕಳವು ನಡೆದಿದ್ದು, ಪೊಲೀಸ್ ಇಲಾಖೆಯ ಕಾರ್ಯವೈಖರಿ ಜನರಲ್ಲಿ ಸಂಶಯ ಮೂಡಿಸಿದೆ. ಕಾಸರಗೋಡು, ಮೇಲ್ಪರಂಬ, ವಿದ್ಯಾನಗರ, ಬದಿಯಡ್ಕ, ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಎರಡು ದಿವಸಗಳಿಂದ ಅವ್ಯಾಹತವಾಗಿ ಕಳವು ನಡೆದಿದೆ.

ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಮಾನ್ಯ ಶ್ರೀ ಅಯ್ಯಪ್ಪ ಭಜನಾ ಮಂದಿರದ ಬೀಗ ಒಡೆದು ನುಗ್ಗಿದ ಕಳ್ಳರು 6 ಲಕ್ಷ ರೂ. ಮೌಲ್ಯದ ಶ್ರೀ ಅಯ್ಯಪ್ಪ ದೇವರ ಬೆಳ್ಳಿಯ ಛಾಯಾಚಿತ್ರ ಹಾಗೂ ಎರಡು ಕಾಣಿಕೆ ಹುಂಡಿಗಳಿಂದ ನಗದು ದೋಚಿದ್ದಾರೆ. ಬದಿಯಡ್ಕ ಸನಿಹದ ನೆಲ್ಲಿಕಟ್ಟೆ ಶ್ರೀನಾರಾಯಣ ಗುರು ಮಂದಿರದ ಗರ್ಭಗುಡಿ ಹಾಗೂ ಕಚೇರಿ ಬಾಗಿಲು ಒಡೆದು ನುಗ್ಗಿದ ಕಳ್ಳರು 25 ಸಾವಿರ ರೂ. ನಗದು ಹಾಗೂ ಎರಡು ಕಾಣಿಕೆ ಹುಂಡಿಗಳಿಂದ ನಗದು ದೋಚಿದ್ದಾರೆ.

ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯ ಪೊಯಿನಾಚಿ ಶ್ರೀ ಅಯ್ಯಪ್ಪ ಕ್ಷೇತ್ರಕ್ಕೆ ನುಗ್ಗಿದ ಕಳ್ಳರು 8 ಗ್ರಾಂ ತೂಕದ ಚಿನ್ನ ಹಾಗೂ ಸಿಸಿ ಕ್ಯಾಮರಾದ ಹಾರ್ಡ್ ಡಿಸ್ಕ್ ಕಳವುಗೈದಿದ್ದಾರೆ.

ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಎಡನೀರು ವಿಷ್ಣುಮಂಗಲ ದೇವಸ್ಥಾನದ ಬಾಗಿಲು ಒಡೆದು ನುಗ್ಗಿದ ಕಳ್ಳರು ಕಾಣಿಕೆ ಹುಂಡಿಯಲ್ಲಿದ್ದ ಏಳೂವರೆ ಸಾವಿರ ರೂ. ದೋಚಿದ್ದಾರೆ. ಬೆಳಗ್ಗೆ ಅರ್ಚಕರು ಪೂಜೆಗಾಗಿ ಆಗಮಿಸಿದಾಗ ಕಳವು ಬೆಳಕಿಗೆ ಬಂದಿದ್ದು, ದೇಗುಲ ಸಮಿತಿ ಸಹಾಯಕ ಪ್ರಬಂಧಕ ವೇಣುಗೋಪಾಲ್ ಅವರ ದೂರಿನ ಮೇರೆಗೆ ವಿದ್ಯಾನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಇನ್ಸ್‌ಪೆಕ್ಟರ್ ವಿ.ಪಿ.ವಿಪಿನ್ ನೇತೃತ್ವದ ಪೊಲೀಸರ ತಂಡ, ಶ್ವಾನದಳ, ಬೆರಳಚ್ಚು ತಜ್ಞರು ತಪಾಸಣೆ ನಡೆಸಿದರು. ಜಿಲ್ಲೆಯಲ್ಲಿ ವಿವಿಧೆಡೆ ಕಳವು ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಪೊಲೀಸರಿಂದ ವಿಶೇಷ ಕೂಂಬಿಂಗ್ ನಡೆಯುತ್ತಿದ್ದಂತೆ ಸರಣಿ ಕಳವು ನಡೆದಿದೆ.

ಕಾಸರಗೋಡು ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿಯ ಮೂರೂವರೆ ಪವನಿನ ಚಿನ್ನದ ಸರ ಕಳವುಗೈದಿರುವ ಬಗ್ಗೆ ಕಾಞಂಗಾಡು ಕಾಟ್ಟಾಡಿ ಕೊಳವಯಲ್ ನಿವಾಸಿ ಎಂ.ಕೆ ಖಾಲಿದ್ ಅವರ ದೂರಿನ ಮೇರೆಗೆ ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ವರ್ಕಾಡಿಯ ಮುಡಿಪು ರಸ್ತೆಯ ಬಜಿಲಕರಿಯ ಬಾಲಯೇಸು ಪ್ರಾರ್ಥನಾ ಮಂದಿರ, ಪಾವಳದ ಕೊರಗಜ್ಜ ಕಟ್ಟೆಯ ಕಾಣಿಕೆ ಹುಂಡಿ, ಮೂರುಗೋಳಿ ಪಾಡಿ ನಿವಾಸಿ ಬಶೀರ್ ಎಂಬುವರ ಜನರಲ್ ಸ್ಟೋರ್‌ನಿಂದ ಕಳ್ಳರು ಹಣ ದೋಚಿದ್ದಾರೆ.

ದೇವಸ್ಥಾನದಿಂದ ಕಳವು

 

Share This Article

Kurukshetra | ಕುರುಕ್ಷೇತ್ರ ಯುದ್ಧದ ಕೊನೆಯಲ್ಲಿ ರಣಭೂಮಿಗೆ ದ್ರೌಪದಿಯನ್ನು ಶ್ರೀಕೃಷ್ಣ ಕರೆತಂದಿದ್ದೇಕೆ; ಪರಮಾತ್ಮ ಹೇಳಿದ್ದೇನು?

ಕುರುಕ್ಷೇತ್ರ(Kurukshetra) ಯುದ್ಧದಲ್ಲಿ ಎಲ್ಲಾರೂ ಮರಣ ಹೊಂದಲು ಕಾರಣ ಪಾಂಡವರಲ್ಲ ದ್ರೌಪದಿಯ ಕಣ್ಣೀರು. ಕುರುಕ್ಷೇತ್ರ ಯುದ್ಧ ಮುಗಿದ…

ನಿಮ್ಮ ಮಕ್ಕಳಿಗೆ ಪ್ರತಿನಿತ್ಯ ಟೀ ಕೊಡ್ತಿದ್ದೀರಾ? ಹೌದು ಎಂದಾದರೆ ಈ ವಿಚಾರಗಳು ನಿಮಗೆ ತಿಳಿದಿರಲೇಬೇಕು! Tea

Tea : ಜಗತ್ತಿನ ಬಹುತೇಕ ಜನರ ದಿನ ಆರಂಭವಾಗುವುದೇ ಟೀ ಅಥವಾ ಕಾಫಿಯಿಂದ. ದಿನಕ್ಕೆ ಒಂದು…

ನಿಮಗೆ ದೃಷ್ಟಿ ದೋಷವಾಗಿದ್ರೆ..ನಿಂಬೆ ಹಣ್ಣಿನಿಂದ ಹೀಗೆ ಮಾಡಿದರೆ ಸಾಕು! Drishti Dosha

Drishti Dosha: ಸಾಮಾನ್ಯವಾಗಿ ಕೆಟ್ಟ ದೃಷ್ಟಿ ಬಿದ್ದಿದೆ ಎಂಬ ಪದವನ್ನು ನಾವು ಸಾಮಾನ್ಯವಾಗಿ ಕೇಳುತ್ತಿರುತ್ತೇವೆ. ಮನೆ ವ್ಯವಹಾರ,…