More

    ಇನ್ಫೋಸಿಸ್​ ಮುಖ್ಯಸ್ಥೆ ಸುಧಾಮೂರ್ತಿ ಹೆಸರು ಬಳಸಿ ವಂಚನೆ; ಪ್ರಕರಣ ದಾಖಲು

    ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ವಂಚಕರ ಹಾವಳಿ ಹೆಚ್ಚಾಗುತ್ತಿದ್ದು, ಸೆಲೆಬ್ರಿಟಿಗಳ ಹೆಸರೇಳಿ ಮೋಸ ಮಾಡುತ್ತಿರುವ ವಿಚಾರ ಹೊಸದೇನಲ್ಲ. ಇದೀಗ ಪ್ರಕರಣ ಒಂದರಲ್ಲಿ ಇನ್ಫೋಸಿಸ್​ ಅಧ್ಯಕ್ಷೆ ಡಾ. ಸುಧಾಮೂರ್ತಿ ಅವರ ಹೆಸರನ್ನು ಬಳಸಿ ವಂಚನೆ ಎಸಗಿರುವುದು ಬೆಳಕಿಗೆ ಬಂದಿದೆ.

    ಪ್ರಕರಣ ಸಂಬಂಧ ಸುಧಾಮೂರ್ತಿ ಅವರ ಆಪ್ತ ಸಹಾಯಕಿ ಮಮತಾ ಸಂಜಯ್​ ಜಯನಗರ ಪೊಲೀಸ್​ ಠಾಣೆಯಲ್ಲಿ ವಂಚಕರ ವಿರುದ್ಧ ದೂರು ದಾಖಲಿಸಿದ್ದಾರೆ.  ಶೃತಿ ಹಾಗೂ ಲಾವಣ್ಯ ಎಂಬವರ ವಿರುದ್ಧ ದೂರು ದಾಖಲಾಗಿದೆ.

    ಕೆಕೆಎನ್‌ಸಿಯಿಂದ (Kannada koota of northen California) 50ನೇ ವರ್ಷದ ಕಾರ್ಯಕ್ರಮಕ್ಕೆ ಸುಧಾಮೂರ್ತಿಯವರಿಗೆ ಆಹ್ವಾನಿಸಲಾಗಿತ್ತು. ಆದರೆ ಅವರು ಇಮೇಲ್ ಮೂಲಕ ಅಮೆರಿಕದಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಬರಲು ಆಗುವುದಿಲ್ಲ ಎಂದು ಸಂದೇಶ ಕಳುಹಿಸಿದ್ದರು.

    ಇದನ್ನೂ ಓದಿ: ದೇವಮಾನವ ಮೋದಿ ಮಹಿಳೆಯರಿಗೆ ಟೋಪಿ ಹಾಕಿದ್ದಾರೆ: ಸಿಎಂ ಸಿದ್ದರಾಮಯ್ಯ

    ಈ ನಡುವೆ ಸುಧಾಮೂರ್ತಿಯವರ ಫೋಟೋಗಳನ್ನು ಬಳಸಿಕೊಂಡು ಜಾಹೀರಾತುಗಳನ್ನು ನೀಡಲಾಗಿತ್ತು. ಇದನ್ನು ಪ್ರಶ್ನಿಸಿದಾಗ ವಂಚನೆ ಬೆಳಕಿಗೆ ಬಂದಿದೆ. ಮೂರ್ತಿ ಟ್ರಸ್ಟ್ನ ಕಚೇರಿ ಎಂದು ಹೆಸರು ಸೃಷ್ಠಿಸಿ ಸುಧಾಮೂರ್ತಿಯವರ ಅಸಿಸ್ಟೆಂಟ್ ಎಂದು ವಂಚಿಸಿರುವ ಆರೋಪ ಕೇಳಿ ಬಂದಿದೆ. ಆರೋಪಿಗಳಾದ ಶೃತಿ ಹಾಗೂ ಲಾವಣ್ಯ ಕಾರ್ಯಕ್ರಮಕ್ಕೆ ಸುಧಾಮೂರ್ತಿ ಅವರು ಬರುತ್ತಾರೆ ಎಂದು ಹೇಳಿ ವಂಚನೆ ಎಸಗಿದ್ದಾರೆ.

    ಅಮೆರಿಕದಲ್ಲಿ ಮೀಟ್ ಆಡ್ ಗ್ರೀಟ್ ವಿತ್ ಡಾ. ಸುಧಾಮೂರ್ತಿ ಕಾರ್ಯಕ್ರಮ ಆಯೋಜಿಸಿರುವುದಾಗಿ ಟಿಕೆಟ್ ಮಾರಾಟ ಮಾಡಿದ್ದಾರೆ. ಪ್ರತಿ ಟಿಕೆಟ್‌ಗೆ 40 ಡಾಲರ್ ಪಡೆದಿರುವುದಾಗಿ ಸುಧಾಮೂರ್ತಿ ಅವರ ಆಪ್ತ ಸಹಾಯಕಿ ಮಮತಾ ಸಂಜಯ್ ತಾವು ನೀಡಿರುವ​ ದೂರಿನಲ್ಲಿ ಆರೋಪಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts