More

    ಸೊಮಾಲಿಯಾದಲ್ಲಿ ಆತ್ಮಾಹುತಿ ಬಾಂಬ್​ ದಾಳಿ; 13 ಮಂದಿ ಮೃತ್ಯು

    ಸೊಮಾಲಿಯಾ: ಭದ್ರತಾ ಚೆಕ್​ಪಾಯಿಂಟ್​ ಅನ್ನು ಗುರಿಯಾಗಿಸಿಕೊಂಡು ಆತ್ಮಾಹುತಿ ಬಾಂಬ್​ ದಾಳಿ ನಡೆಸಿದ ಪರಿಣಾಮ 13 ಮಂದಿ ಮೃತಪಟ್ಟು, 45ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೇಂದ್ರ ಸೊಮಾಲಿಯಾದಲ್ಲಿ ನಡೆದಿದೆ.

    ಸೊಮಾಲಿಯಾದ ಹಿರಾನ್ ಪ್ರದೇಶದ ಬೇಲೆಡ್ವೆನ್ ನಗರದಲ್ಲಿ ಘಟನೆ ನಡೆದಿದ್ದು, ಕಟ್ಟಡದ ಅವಶೇಷಗಳಡಿ ಸಿಲುಕಿರುವ ಮೃತದೇಹ ಹಾಗೂ ಗಾಯಾಳುಗಳನ್ನು ರಕ್ಷಣಾ ಇಲಾಖೆಯ ಅಧಿಕಾರಿಗಳು ಹೊರತೆಗೆಯುತ್ತಿದ್ದಾರೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ.

    ದಾಳಿಯಲ್ಲಿ 13 ಮಂದಿ ಮೃತಪಟ್ಟಿದ್ದು, ಇನ್ನಷ್ಟು ಜನರು ಸಾವಿಗೀಡಾಗಿರುವ ಶಂಕೆ ವ್ಯಕ್ತವಾಗುತ್ತಿದೆ. ಬಾಂಬ್​ ಸ್ಪೋಟಕ್ಕೆ ಕಟ್ಟಡಗಳು ನೆಲಸಮಗೊಂಡಿದ್ದು, ಅವಶೇಷಗಳಡಿ ಹಲವರು ಸಿಲುಕಿದ್ದಾರೆ. ಕಾರ್ಯಾಚರಣೆ ಭರದಿಂದ ಸಾಗಿದ್ದು, ಈಗಲೇ ಏನು ಹೇಳಲು ಸಾಧ್ಯವಿಲ್ಲ ಎಂದು ರಕ್ಷಣಾ ಇಲಾಖೆಯು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಇದನ್ನೂ ಓದಿ: ವಿಪಕ್ಷಗಳು ಮಹಿಳೆಯರಿಗೆ ಹೆದರಿ ಮಸೂದೆಯನ್ನು ಬೆಂಬಲಿಸಿವೆ: ಪ್ರಧಾನಿ ಮೋದಿ

    ಇದೊಂದು ಹೇಯ ಕೃತ್ಯವಾಗಿದ್ದು, ದೊಡ್ಡ ದುರಂತ. ಸ್ಪೋಟದ ತೀವ್ರತೆ ಇಡೀ ಬೇಲೆಡ್ವೆನ್​ ನಗರವನ್ನು ನಾಶಪಡಿಸಿದ್ದು, ಹಲವರು ಮೃತಪಟ್ಟಿದ್ಧಾರೆ. ಘಟನೆ ಗೆ ಕಾರಣರಾದವರನ್ನು ಸುಮ್ಮನೆ ಬಿಡುವ ಮಾತಿಲ್ಲ ಎಂದು ಹಿರಾನ್​ ಪ್ರದೇಶದ ರಾಜ್ಯಪಾಲರು ತಿಳಿಸಿದ್ದಾರೆ.

    ಅಲ್​-ಶಬಾಬ್ ಉಗ್ರ ಸಂಘಟನೆ ಈ ದಾಳಿಯ ಹಿಂದಿರಬಹುದು ಎಂದು ಶಂಕಿಸಲಾಗಿದ್ದು, ಭದ್ರತಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ರಕ್ಷಣಾ ಕಾರ್ಯಾಚರಣೆ ಮತ್ತಷ್ಟು ಚುರುಕುಗೊಂಡಿದ್ದು, ಗಾಯಾಳುಗಳನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts