ವಿಪಕ್ಷಗಳು ಮಹಿಳೆಯರಿಗೆ ಹೆದರಿ ಮಸೂದೆಯನ್ನು ಬೆಂಬಲಿಸಿವೆ: ಪ್ರಧಾನಿ ಮೋದಿ

Narendra Modi
Published on

ವಾರಾಣಸಿ: ಈ ಹಿಂದೆ ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸಿದ್ದವರು ಇಂದು ಬಲವಂತವಾಗಿ ಅದನ್ನು ಬೆಂಬಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳುವ ಮೂಲಕ ಪ್ರಧಾನಿ ಮೋದಿ ವಿಪಕ್ಷಗಳ ಒಕ್ಕೂಟ ಇಂಡಿಯಾ ಹೆಸರೇಳದೆ ಚಾಟಿ ಬೀಸಿದ್ದಾರೆ.

ತಮ್ಮ ಸ್ವಕ್ಷೇತ್ರವಾದ ವಾರಾಣಸಿಯಲ್ಲಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಸಂಸತ್ತಿನ ಉಭಯ ಸದನದಲ್ಲಿ ಮಸೂದೆ ದಾಖಲೆ ಮತಗಳ ಅಂತರದೊಂದಿಗೆ ಅಂಗೀಕಾರವಾಗಿದೆ. ವಿರೋಧ ಪಕ್ಷಗಳು ಭಯದಿಂದಾಗಿ ಈ ಮಸೂದೆಗೆ ಬೆಂಬಲ ಸೂಚಿಸಿವೆ ಎಂದು ಟೀಕಿಸಿದ್ಧಾರೆ.

ಎಲ್ಲಾ ಪಕ್ಷಗಳ ಸದಸ್ಯರು ನಿಮ್ಮನ್ನು (ಮಹಿಳೆಯರು) ಕಂಡರೆ ಭಯದಿಂದ ನಡಗುತ್ತಾರೆ. ಅದಕ್ಕಾಗಿಯೇ ಮಸೂದೆಯನ್ನು ಬೆಂಬಲಿಸಿದ್ದಾರೆ. ಅದರಲ್ಲಿ ಕೆಲವು ಪಕ್ಷಗಳ ಸದಸ್ಯರು ಮಸೂದೆಯಲ್ಲಿ ಬಳಸಲಾಗಿರುವ ವಂದನ್​ ಎಂಬ ಪದದ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ್ಧಾರೆ. ಅವರಿಗೆ ಮಹಿಳೆಯರಿಗೆ ಕಿಂಚಿತ್ತೂ ಗೌರವ ಕೊಡಬೇಕು ಎಂಬ ಅರಿವಿಲ್ಲದಿರುವುದಕ್ಕೆ ಆ ರೀತಿ ಮಾತನಾಡಿದ್ದಾರೆ.

ಚಂದ್ರಯಾನ-3 ಯಶಸ್ಸಿನಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸಿದ್ದಾರೆ. ಅನೇಕ ಕ್ಷೇತ್ರಗಳಲ್ಲಿ ಪುರುಷರಿಗಿಂತ ತಾವೇನು ಕಡಿಮೆ ಇಲ್ಲವೆಂದು ಮಹಿಳೆಯರು ನಿರೂಪಿಸಿದ್ದಾರೆ ಎಂದು ಪ್ರಧಾನಿ ಮೋದಿ ವಾರಾಣಸಿಯ ಕಾರ್ಯಕ್ರಮದಲ್ಲಿ ವಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net