VIDEO| ಗಣಪತಿ ವಿಸರ್ಜನೆ ಕಾರ್ಯಕ್ರದಲ್ಲಿ ಬಾಯ್​ಫ್ರೆಂಡ್ ಜೊತೆ ಭರ್ಜರಿ ಸ್ಟೆಪ್ಸ್​ ಹಾಕಿದ ಜಾಹ್ನವಿ ಕಪೂರ್

Jahnvi Kapoor
Published on

ಮುಂಬೈ: ಗಣೇಶ ಚತುರ್ಥಿಯ ಸಂಭ್ರಮ-ಸಡಗರ ಬಾಲಿವುಡ್​ ಮಂದಿಯನ್ನು ಆವರಿಸಿದ್ದು, ಹಿರಿಯ ನಟಿ ಶ್ರೀದೇವಿ ಅವರ ಪುತ್ರಿ ಜಾಹ್ನವಿ ಕಪೂರ್​​ ಗಣಪತಿ ವಿಸರ್ಜನೆ ಕಾರ್ಯಕ್ರಮದಲ್ಲಿ ಭರ್ಜರಿ ಸ್ಟೆಪ್ಸ್​ ಹಾಕುವ ಮೂಲಕ ಸುದ್ದಿಯಲ್ಲಿದ್ದಾರೆ.

ಉದ್ಯಮಿ ಮುಖೇಶ್​ ಅಂಬಾನಿ ಅವರ ಮನೆಯಲ್ಲಿ ಕೂರಿಸಿದ್ದ ಗಣೇಶನ ವಿಸರ್ಜನೆ ಮೆರವಣಿಗೆಯಲ್ಲಿ ಜಾಹ್ನವಿ ಸ್ಟೆಪ್ಸ್​ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇವರ ಜೊತೆಗೆ ಗೆಳೆಯ ಶಿಖರ್ ಪಹಾರಿಯಾ ಕೂಡ ಸಾಥ್​ ನೀಡಿದ್ದಾರೆ.

ವೈರಲ್​ ಆಗಿರುವ ವಿಡಿಯೋದಲ್ಲಿ ತಮ್ಮ ಬಾಯ್​ಫ್ರೆಂಡ್​ ಶಿಖರ್​ ಪಹಾರಿಯಾ ಗೆಳತಿ ಜಾಹ್ನವಿಗೆ ನೃತ್ಯ ಮಾಡುವುದನ್ನು ತೋರಿಸಿಕೊಡುವುದು ಕಂಡು ಬರುತ್ತದೆ. ಇದಲ್ಲದೆ ಗಣಪತಿ ವಿಸರ್ಜನೆ ಕಾರ್ಯಕ್ರಮದಲ್ಲಿ ಬಾಲಿವುಡ್​ನ ಹಲವಾರು ಸೆಲೆಬ್ರಿಟಿಗಳು ಭಾಗಿಯಾಗಿ ಸಂಭ್ರಮಿಸಿದ್ದಾರೆ.

ಸೆಪ್ಟೆಂಬರ್​ 19ರಂದು ಉದ್ಯಮಿ ಮುಖೇಶ್​ ಅಂಬಾನಿಯವರ ಮನೆಯಲ್ಲಿ ಏರ್ಪಡಿಸಲಾಗಿದ್ದ ಗಣೇಶನ ಪೂಜಾ ಕಾರ್ಯಕ್ರಮದಲ್ಲಿ ಬಾಲಿವುಡ್​ನ ಹಲವಾರು ಸೆಲೆಬ್ರಿಟಿಗಳು ಭಾಗಿಯಾಗಿ ದೇವರ ಆಶೀರ್ವಾದ ಪಡೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net