ಶಾಲೆಯ ಕೊಠಡಿಯಲ್ಲಿ ಶಿಕ್ಷಕನ ವಿವಾಹ ವಾರ್ಷಿಕೋತ್ಸವ!

school
Published on

ಕೊಪ್ಪಳ: ರಾಜ್ಯಾದ್ಯಂತ ಶಾಲೆಗಳ ಪುನರಾರಂಭದೊಂದಿಗೆ ಮಕ್ಕಳಿಗೆ ಮತ್ತೆ ಮುಕ್ತ ಕಲಿಕೆಯ ಭಾಗ್ಯ ಲಭಿಸುವುದೆಂಬ ಸಂಭ್ರಮ ಹರಡಿದೆ. ಈ ಸಂದರ್ಭದಲ್ಲೇ ಶಾಲಾ ಮುಖ್ಯ ಶಿಕ್ಷಕರೊಬ್ಬರು ಶಾಲೆಯಲ್ಲಿ ತಮ್ಮ ವಿವಾಹ ವಾರ್ಷಿಕೋತ್ಸವ ಆಚರಣೆ ಮಾಡಿಕೊಂಡಿರುವ ಪ್ರಸಂಗ ವರದಿಯಾಗಿದೆ.

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ದಾಸನಾಳ ಗ್ರಾಮದ ಕಸ್ತೂರ ಬಾ ಶಾಲೆಯ ಮುಖ್ಯ ಶಿಕ್ಷಕ ಟಿ.ಶ್ರೀಧರ್, ತಮ್ಮ ಹತ್ತನೇ ವಿವಾಹ ವಾರ್ಷಿಕೋತ್ಸವವನ್ನು ಇತ್ತೀಚೆಗೆ ಶಾಲೆಯ ಕೊಠಡಿಯೊಂದರಲ್ಲಿ ಆಚರಿಸಿಕೊಂಡಿದ್ದಾರೆ. ಬಂಧುಬಳಗದೊಂದಿಗೆ ದಂಪತಿಯು ಕೇಕ್​ ಕಟ್​ ಮಾಡಿ ಸಂಭ್ರಮ ಪಡುತ್ತಿರುವ ಫೋಟೋ-ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ಶಾಲಾ ಆವರಣದಲ್ಲಿ ವೈಯಕ್ತಿಕ ಕಾರ್ಯಕ್ರಮಗಳನ್ನು ನಡೆಸಬಾರದು ಅನ್ನುವ ನಿಯಮವಿದೆ. ಆದರೂ ಕಸ್ತೂರ ಬಾ ಶಾಲೆಯ ಪ್ರಭಾರ ಮುಖ್ಯಸ್ಥರಾಗಿರುವ ಶ್ರೀಧರ್, ಶಾಲೆಯಲ್ಲಿ ಸಮಾರಂಭ ಮಾಡಿ ನಿಯಮ ಉಲ್ಲಂಘಿಸಿದ್ದಾರೆ ಎಂಬ ಅಸಮಾಧಾನ ಕೇಳಿಬಂದಿದೆ. (ದಿಗ್ವಿಜಯ ನ್ಯೂಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net