

ಕೋಲಾರ: ಇಂದಿನಿಂದ ರಾಜ್ಯಾದ್ಯಂತ 1ರಿಂದ 5ನೇ ತರಗತಿ ಶಾಲೆಗಳು ಆಂಭವಾಗಿದ್ದು, ಒಂದೂವರೆ ವರ್ಷದ ಬಳಿಕ ಶಾಲೆಯತ್ತ ಮುಖ ಮಾಡಿದ ಮಕ್ಕಳಿಗೆ ಶಿಕ್ಷಕರು ವಿಭಿನ್ನ ರೀತಿಯಲ್ಲಿ ಸ್ವಾಗತ ಕೋರಿ ಖುಷಿಯ ಹೂರಣ ಉಣಬಡಿಸಿದ್ದಾರೆ.
ಕೋಲಾರದ ಮಹಿಳಾ ಸಮಾಜ ಶಾಲೆಗೆ ಬಂದ ಮಕ್ಕಳು ಅರೆಕ್ಷಣ ಆಶ್ಚರ್ಯದಿಂದ ಶಾಲೆಯ ಪ್ರವೇಶ ದ್ವಾರದಲ್ಲೇ ನಿಂತಿದ್ದರು. ಕಾರಣ ಗೇಟ್ ಬಳಿ ಮಕ್ಕಳ ನೆಚ್ಚಿನ ಪಾಂಡ, ಮೋಟು, ಪೊಟ್ಲು... ಬೊಂಬೆಗಲ ಧರಿಸಿದ್ದವರ ಜತೆಗೆ ಕರೊನಾ ವ್ಯಾಕ್ಸಿನ್, ಕರೊನಾ ಸೋಂಕಿನ ವೇಷಧಾರಿಗಳೂ ಇದ್ದರೂ. ಸ್ವತಃ ಶಿಕ್ಷಕರು, ವಿದ್ಯಾರ್ಥಿಗಳು ಈ ವೇಷ ಧರಿಸಿ ಮಕ್ಕಳನ್ನು ಸ್ವಾಗತಿಸಿದರು.