More

    1 ರಿಂದ 5ನೇ ತರಗತಿ ಆರಂಭ: ಸಂತಸದಿಂದಲೇ ಶಾಲೆಗೆ ಬಂದ ಮಕ್ಕಳು

    ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದ ಪ್ರಾಥಮಿಕ ಪಾಠ ಶಾಲೆಗಳು ಆರಂಭವಾಗಿದ್ದು, 1 ರಿಂದ 5ನೇ ತರಗತಿ ಮಕ್ಕಳು ಸಂತಸದಿಂದಲೇ ಶಾಲೆಯತ್ತ ಹೆಜ್ಜೆ ಹಾಕುತ್ತಿದ್ದ ಹಲವೆಡೆ ಕಂಡು ಬಂತು.

    ಬಹುತೇಕ ಶಾಲೆಗಳನ್ನ ತಳಿರುತೋರಣದಿಂದ ಸಿಂಗರಿಸಿದ್ದ ಶಿಕ್ಷಕರು, ಮಕ್ಕಳನ್ನ ನಗುಮುಖದಲ್ಲೇ ಸ್ವಾಗತಿಸಿದ್ದಾರೆ. ಕೆಲವೆಡೆ ಮೊದಲ ದಿನವೇ ಶಾಲೆಗೆ ಮಕ್ಕಳ ಗೈರುಹಾಜರಿ ಹೆಚ್ಚಿನ ಪ್ರಮಾಣದಲ್ಲಿ ಇದೆಯಾದರೂ ಹಲವೆಡೆ ನಿರೀಕ್ಷಿತ ಹಾಜರಾತಿ ದಾಖಲಾಗಿದೆ.

    ಕರೊನಾ ಮೂರನೇ ಅಲೆ ಆತಂಕದ ನಡುವೆಯೂ ಮಾಸ್ಕ್ ಧರಿಸಿ ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದ ದೃಶ್ಯವನ್ನ ಸ್ಥಳೀಯ ನಿವಾಸಿಗಳು ಕಣ್ತುಂಬಿಕೊಳ್ಳುತ್ತಾ, ಆಲ್​ ದಿ ಬೆಸ್ಟ್​ ಮಕ್ಕಳೇ, ಸೋಂಕಿನ ಬಗ್ಗೆ ಜಾಗ್ರತೆ, ಮಾಸ್ಕ್​ ತೆಗೆಯಬೇಡಿ, ಸ್ವಲ್ಪ ದೂರ ಕುಳಿತುಕೊಳ್ಳಿ… ಎಂದು ಸಲಹೆ ನೀಡುತ್ತಿದ್ದರು.

    ಇನ್ನು ಕೆಲ ಶಾಲೆಗಳ ಆವರಣದಲ್ಲಿ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ರಂಗೋಲಿ ಬಿಡಿಸಿ, ಬಣ್ಣ ಹಚ್ಚಿ ಮಕ್ಕಳಿಗೆ ಸ್ವಾಗತ ಎಂದು ಬರೆದು ಸಂಭ್ರಮಿಸಿದ್ದಾರೆ. ಆನೇಕಲ್​ ಗಡಿಯ ಬಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲೂ ಇಂತಹ ದೃಶ್ಯ ಕಂಡು ಬಂತು.

    1 ರಿಂದ 5ನೇ ತರಗತಿ ಆರಂಭ: ಸಂತಸದಿಂದಲೇ ಶಾಲೆಗೆ ಬಂದ ಮಕ್ಕಳು

    ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಪ್ರಾಥಮಿಕ ಪಾಠಶಾಲೆಯಲ್ಲಿ ಮಕ್ಕಳಿಗೆ ಬಿಸಿಬಿಸಿ ಹಾಲು ವಿತರಿಸುವ ಮೂಲಕ ಶಿಕ್ಷಕರು ಸ್ವಾಗತ ಕೋರಿದರು.

    1 ರಿಂದ 5ನೇ ತರಗತಿ ಆರಂಭ: ಸಂತಸದಿಂದಲೇ ಶಾಲೆಗೆ ಬಂದ ಮಕ್ಕಳು

    ವಿಜಯಪುರದ ಹೊಸಪೇಟೆ ಸರ್ಕಾರಿ ಬಾಪೂಜಿ ಶಾಲೆಯಲ್ಲಿ ಮಕ್ಕಳಿಗೆ ಹೂ ಮಳೆ ಸುರಿಸಿ, ಗುಲಾಬಿ ಹೂವು, ಬಿಸ್ಕತ್, ಚಾಕೋಲೆಟ್​ ಕೊಟ್ಟು ಶಿಕ್ಷಕರು ಮತ್ತು ಎಸ್​ಡಿಎಂಸಿ ಸದಸ್ಯರು ಸ್ವಾಗತಿಸಿದರು.

    ಸರ್ಕಾರಿ ಆಸ್ಪತ್ರೆಯಲ್ಲಿ ಮೇಣದಬತ್ತಿ ಬತ್ತಿ ಹಚ್ಚಿಕೊಂಡು ಹೆರಿಗೆ ಮಾಡಿದ ದಾದಿಯರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts