More

    ಕರೊನಾ ಸೋಂಕಿನಲ್ಲಿ ಮತ್ತಷ್ಟು ಇಳಿಕೆ ತೋರಿದ ಭಾರತ

    ನವದೆಹಲಿ: ಕರೊನಾ ಸೋಂಕಿನ ನಿತ್ಯಪ್ರಕರಣಗಳ ಸಂಖ್ಯೆಯಲ್ಲಿ ಮತ್ತಷ್ಟು ಇಳಿಕೆ ಕಂಡುಬಂದಿದ್ದು, ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 14,306 ಹೊಸ ಕರೊನಾ ಪ್ರಕರಣಗಳು ವರದಿಯಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಇಳಿಮುಖವಾಗಿದ್ದು, ದೇಶಾದ್ಯಂತ ಹಾಲಿ 1,67,695 ಸಕ್ರಿಯ ಕರೊನಾ ಪ್ರಕರಣಗಳಿವೆ.

    ಭಾನುವಾರ ವರದಿಯಾಗಿರುವ ಪ್ರಕರಣಗಳಲ್ಲಿ ಶೇ. 60 ರಷ್ಟು ಅಂದರೆ 8,538 ಹೊಸ ಕೇಸುಗಳು ಕೇರಳ ಒಂದರಿಂದಲೇ ವರದಿಯಾಗಿದ್ದು, ರಾಜ್ಯದಲ್ಲಿ 363 ಕರೊನಾ ಸಾವುಗಳೂ ವರದಿಯಾಗಿವೆ. ಮಹಾರಾಷ್ಟ್ರದಲ್ಲಿ ಭಾನುವಾರ 1,410 ಸೋಂಕು ಪ್ರಕರಣಗಳು ದಾಖಲಾಗಿದ್ದು, 18 ಜನರು ಮೃತಗೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ವರದಿ ತಿಳಿಸಿದೆ.

    ಇದನ್ನೂ ಓದಿ: ಗೆಳೆತಿಯರೊಂದಿಗೆ ಮಡಿಕೇರಿ ಪ್ರವಾಸಕ್ಕೆ ಬಂದಿದ್ದ ಯುವತಿ ಸಾವು! ಹೋಂ ಸ್ಟೇನಲ್ಲಿ ಆಗಿದ್ದೇನು?

    2020ರ ಮಾರ್ಚ್​ನಿಂದ ಇತ್ತೀಚಿನವರೆಗಿನ ಅತ್ಯಂತ ಹೆಚ್ಚು ಕರೊನಾ ಚೇತರಿಕೆ ದರ(ಶೇ. 98.18) ದೇಶದಲ್ಲಿದೆ. ಕಳೆದ 24 ಗಂಟೆಗಳಲ್ಲಿ ಸೋಂಕು ತಗುಲಿದ್ದ 18,762 ರೋಗಿಗಳು ಗುಣಮುಖರಾಗಿದ್ದಾರೆ. ಮತ್ತೊಂದೆಡೆ, 443 ಜನರು ಕರೊನಾದಿಂದಾಗಿ ಮೃತಪಟ್ಟಿದ್ದಾರೆ. (ಏಜೆನ್ಸೀಸ್)

    ಸಿನಿಮಾ ಶೂಟಿಂಗ್​ ವೇಳೆ ಶೂಟಾಯ್ತು ನಿಜವಾದ ಗುಂಡು! ಮುಂದಾದದ್ದು ದುರಂತ

    VIDEO: ಕಿಕ್ಕಿರಿದ ಸಿಟಿ ಬಸ್‌ನಲ್ಲಿ ಸಿಎಂರನ್ನು ಹೋಲುವ ವ್ಯಕ್ತಿ! ಅವ್ರು ಯಾರೆಂದು ತಿಳಿದಾಗ ಜನರು ಶಾಕ್‌

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts