

ಬೈಂದೂರು: ಮೆಟ್ಟಿನಹೊಳೆ ಸರ್ಕಾರಿ ಪ್ರೌಢಶಾಲೆಯ 2025-26ನೇ ಸಾಲಿನ ವಿದ್ಯಾರ್ಥಿ ಸಂಸತ್ ಹಾಗೂ ವಿವಿಧ ಸಂಘಗಳ ಉದ್ಘಾಟನೆ ಹಾಗೂ ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ ವತಿಯಿಂದ ಸ್ಕೂಲ್ ಬ್ಯಾಗ್ ವಿತರಣೆ ಕಾರ್ಯಕ್ರಮ ಜರುಗಿತು. ಖಂಬದಕೋಣೆ ರೈತ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಸಮಾರಂಭ ಉದ್ಘಾಟಿಸಿ, ಶಾಲಾ ಕಚೇರಿಗೆ ಪೀಠೋಪಕರಣ ಖರೀದಿಸಲು ಸಹಕಾರಿ ಸಂಘದ ವತಿಯಿಂದ ಧನಸಹಾಯದ ಚೆಕ್ ಹಸ್ತಾಂತರಿಸಿದರು.
ಲಯನ್ಸ್ ಕ್ಲಬ್ ಕುಂದಾಪುರ ಕೋಸ್ಟಲ್ಸ್ ಅಧ್ಯಕ್ಷ ಡಾ.ನಿತ್ಯಾನಂದ ಶೆಟ್ಟಿ ಅಂಪಾರು, ಪ್ರಧಾನ ಕಾರ್ಯದರ್ಶಿ ಭುಜಂಗ ಶೆಟ್ಟಿ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ವಿತರಿಸಿದರು. ಲಯನ್ಸ್ ಕ್ಲಬ್ ನಿತಿನ್ ಶೆಟ್ಟಿ, ಸ್ಕೂಲ್ ಬ್ಯಾಗ್‌ನ ಪ್ರಾಯೋಜಕ ಉದ್ಯಮಿ ಮಹಮ್ಮದ್ ಅಶ್ರಫ್, ವಿಶೇಷ ಆಹ್ವಾನಿತ ಸಂಪನ್ಮೂಲ ಶಿಕ್ಷಕರಾದ ಸೂಲಿಯಣ್ಣ ಶೆಟ್ಟಿ, ಗೋವಿಂದ ಬಿಲ್ಲವ, ಗ್ರಾಪಂ ಸದಸ್ಯೆ ಶಾರದಾ ಕುಲಾಲ್, ಎಸ್‌ಡಿಎಂಸಿ ಅಧ್ಯಕ್ಷ ಭಾಸ್ಕರ ದೇವಾಡಿಗ, ಮುಖ್ಯಶಿಕ್ಷಕಿ ಉಮಾ ಬಿ., ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸುರೇಶ್ ಕುಲಾಲ್ ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯಶಿಕ್ಷಕ ಕರುಣಾಕರ ಶೆಟ್ಟಿ ಸ್ವಾಗತಿಸಿದರು. ಸಹಶಿಕ್ಷಕ ತಾಜುದ್ದೀನ್ ನಿರೂಪಿಸಿದರು. ಗೌರವ ಶಿಕ್ಷಕಿ ಅನುಶ್ರೀ ವಂದಿಸಿದರು. ಶಿಕ್ಷಕಿಯರಾದ ಸುನಂದ, ನಮೃತಾ, ಬೀನಾ ಪಡಿಯಾರ್ ಸಹಕರಿಸಿದರು.