ನಾಯಕತ್ವ ಗುಣ ಪ್ರದರ್ಶನಕ್ಕೆ ಶಾಲಾ ಸಂಸತ್ತು ಸೂಕ್ತ ವೇದಿಕೆ

UBS Samsattu
UBS Samsattu
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

ಸಂಸತ್ತು ಎನ್ನುವುದು ಪವಿತ್ರ ಸ್ಥಳವಾಗಿದ್ದು, ಇಲ್ಲಿ ಸಾಂವಿಧಾನಿಕವಾಗಿ ಕಾರ್ಯನಿರ್ವಹಿಸಬೇಕು. ಶಾಲಾ ಸಂಸತ್ತು ಕೂಡ ಕೇವಲ ಬಿರುದು ಅಥವಾ ಪವರ್ ನೀಡುವುದಲ್ಲ. ಇದು ವಿದ್ಯಾರ್ಥಿಗಳ ಸಾಮರ್ಥ್ಯ ಗುರುತಿಸುವಿಕೆ, ಬೆಳವಣಿಗೆ ಮತ್ತು ಶ್ರೇಷ್ಠತೆಯ ಪ್ರಯಾಣಕ್ಕೆ ಬದ್ಧತೆಯಾಗಿದೆ. ಅಲ್ಲದೆ ನಾಯಕತ್ವ ಮತ್ತು ಜವಾಬ್ದಾರಿಯ ಸಾರವನ್ನು ಪ್ರದರ್ಶಿಸುವ ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಯುಬಿಎಸ್ ಸಮೂಹ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಯಶಶ್ರೀ ಬಿ.ಶೆಟ್ಟಿ ಹೇಳಿದರು.

ಬೈಂದೂರಿನ ಯು.ಬಿ.ಶೆಟ್ಟಿ ಆಂಗ್ಲ ವಾಧ್ಯಮ ಶಾಲಾ ಸಂಸತ್ತಿನ ಪದಗ್ರಹಣ ಸವಾರಂಭ ಉದ್ಘಾಟಿಸಿ ಮಾತನಾಡಿದರು.

ಚುನಾಯಿತ ನಾಯಕ ಶ್ರೀವತ್ಸ ನಾಯಕ್ ಮತ್ತು ನಾಯಕಿ ಬಿಂದ್ಯಾ ತಮ್ಮನ್ನು ಪರಿಚಯಿಸಿಕೊಂಡರು. ಸಂಸತ್ತಿಗೆ ಆಯ್ಕೆಯಾದ ಸದಸ್ಯರಿಗೆ ಮುಖ್ಯಶಿಕ್ಷಕಿ ಅಮಿತಾ ಶೆಟ್ಟಿ ಬ್ಯಾಡ್ಜ್‌ಗಳನ್ನು ನೀಡಿದರು. ವಿದ್ಯಾರ್ಥಿ ಪರಿಷತ್ ಸದಸ್ಯರು ಪ್ರತಿಜ್ಞೆ ಸ್ವೀಕರಿಸಿದರು. ಸಹಶಿಕ್ಷಕಿಯರಾದ ಪೂರ್ಣಿವಾ ಪ್ರಶಾಂತ್ ಸ್ವಾಗತಿಸಿದರು. ಭಾರ್ಗವಿ ಭಟ್ ವಂದಿಸಿದರು. ಅನಿತಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net