

ಕಾರ್ಕಳ: ಶಾಲಾ ಶಿಕ್ಷಣ ಇಲಾಖೆ, ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಆಶ್ರಯದಲ್ಲಿ ಪೆರ್ವಾಜೆ ಸುಂದರ ಪುರಾಣಿಕ್ ಸ್ಮಾರಕ ಪ್ರೌಢಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಟೇಬಲ್ ಟೆನ್ನಿಸ್ ಪಂದ್ಯಾಟದಲ್ಲಿ ಕಾರ್ಕಳ ಕ್ರೈಸ್ಟ್ಕಿಂಗ್ ಆಂಗ್ಲ ವಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಒಟ್ಟು ಏಳು ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರಾಥಮಿಕ ವಿಭಾಗದ ಬಾಲಕರ ತಂಡವನ್ನು ಪ್ರತಿನಿಧಿಸಿದ್ದ ಅದ್ವಿತ್ ಡಿ.ವಿ., ಮೊಹಮ್ಮದ್ ಅಯಾನ್, ಶೇಖ್ ಮೊಹಮ್ಮದ್ ಶಿಫಾನ್ ಪ್ರಥಮ ಸ್ಥಾನ ಪಡೆದುಕೊಂಡರು.
ಬಾಲಕಿಯರ ತಂಡವನ್ನು ಪ್ರತಿನಿಧಿಸಿದ್ದ ಐಶ್ವರ್ಯಾ, ಡೆಲ್ಸಿಯಾ ಡಿಸೋಜ ದ್ವಿತೀಯ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾದರು. ಪ್ರೌಢಶಾಲಾ ವಿಭಾಗದ ಬಾಲಕರ ತಂಡವನ್ನು ಪ್ರತಿನಿಧಿಸಿದ್ದ ಅಮೃತ್ ಶೆಟ್ಟಿಗಾರ್, ತನ್ಮಯ್ ಶೆಟ್ಟಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅನ್ವಿಶ್ ಪೂಜಾರಿ ಹಾಗೂ ಮಿಲನ್ ಡಿಸೋಜ ತಾಲೂಕುಮಟ್ಟದಲ್ಲಿ ಪ್ರಥಮ ಸ್ಥಾನ, ರಿಯಾ ಸಿಕ್ವೇರಾ, ಸಾಚಿ ಸುವರ್ಣ, ಸೃಷ್ಟಿ, ಅನುಷ್ ಶೆಟ್ಟಿ ಹಾಗೂ ಶಾನ್ ಡಿಸೋಜ, ಅಶ್ವಿನ್ ತಾಲೂಕುಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.