More

    ಲೈಂಗಿಕ ಕಿರುಕುಳ ಪ್ರಕರಣ; ಯುವ ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷನಿಗೆ ಸುಪ್ರೀಂ ಕೋರ್ಟ್​ನಿಂದ ರಿಲೀಫ್​

    ನವದೆಹಲಿ: ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್​ನ ಅಧ್ಯಕ್ಷ ಬಿ.ವಿ. ಶ್ರೀನಿವಾಸ್​ಗೆ ಸುಪ್ರೀಂ ಕೋರ್ಟ್​ ರಿಲೀಫ್​ ನೀಡಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ವಿಚಾರವಾಗಿ ಸುಪ್ರೀಂ ಕೋರ್ಟ್​ ಮೊರೆ ಹೋಗಿದ್ದ ಶ್ರೀನಿವಅಸ್​ಗೆ ನ್ಯಾಯಾಲಯ ಬಿಗ್​ ರಿಲೀಫ್​ ನೀಡಿದೆ.

    ಎಂದು ಮಾತನಾಡಿಲ್ಲ

    ಅರ್ಜಿ ವಿಚಾರಣೆ ನಡೆಸಿದ ಬಿ.ಆರ್​. ಗವಾಯಿ ಮತ್ತು ಸಂಜಯ್​ ಕರೋಲ್​ ಅವರಿದ್ದ ದ್ವಿಸದಸ್ಯ ಪೀಠವು ವಾದ-ಪ್ರತಿವಾದವನ್ನು ಸುಧೀರ್ಘವಾಗಿ ಆಲಿಸಿ ಶ್ರೀನಿವಾಸ್​ ಅವರಿಗೆ ಜಾಮೀನು ಮಂಜುರು ಮಾಡಿದೆ.

    bvs iyc

    ಇದನ್ನೂ ಓದಿ: ಬಿ.ವಿ. ಶ್ರೀನಿವಾಸ್​ ವಿರುದ್ಧ ಕಿರುಕುಳದ ಆರೋಪ; ಕಾಂಗ್ರೆಸ್​​ನಿಂದ ಮಹಿಳೆ ಉಚ್ಛಾಟನೆ

    2023 ಫೆಬ್ರವರಿ ತಿಂಗಳಲ್ಲಿ ಛತ್ತೀಸ್​ಗಢದ ರಾಯ್​ಪುರದಲ್ಲಿ ಘಟನೆ ನಡೆದಿದೆ ಮತ್ತು ಏಪ್ರಿಲ್​ ತಿಂಗಳಲ್ಲಿ ಅಸ್ಸಾಂನಲ್ಲಿ ದೂರು ದಾಖಲಿಸಲಾಗಿದೆ. ಆದರೆ, ದೂರುದಾರರು ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಆರೋಪಿಸಿಲ್ಲ ಎಂದು ಪೀಠ ಹೇಳಿದೆ.

    ವಿಚಾರಣೆಗೆ ಹಾಜರಾಗಿ

    FIR ದಾಖಲಿಸಲು ಸುಮಾರು ಎರಡು ತಿಂಗಳಉ ಗಲ ವಿಳಂಬವನ್ನು ಪರಿಗಣಿಸಿ ಅರ್ಜಿದಾರರು ಮಧ್ಯಂತರ ಜಾಮೀನಿಗೆ ಅರ್ಹರಾಗಿರುತ್ತಾರೆ. ಒಂದು ವೇಳೆ ಅವರನ್ನು ಬಂಧಿಸಿದ್ದರು 50,000 ಸಾವಿರ ಮೊತ್ತದ ಶ್ಯೂರಿಟಿ ಮೇಲೆ ಜಾಮೀನು ಮಂಜೂರು ಮಾಡಬೇಕು ಎಂದು ನ್ಯಾಯಪೀಠ ತಿಳಿಸಿದೆ.

    ಮೇ₹ 22ರಂದು ಪ್ರಕರಣ ವಿಚಾರಣೆ ನಡೆಸುತ್ತಿರುವ ತನಿಖಾಧಿಕಾರಿಯ ಎದುರು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಜುಲೈನಲ್ಲಿ ಅರ್ಜಿ ವಿಚಾರಣೆ ನಡೆಸುವುದಾಗಿ ಪ್ರಕರಣವನ್ನು ಮುಂದೂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts