More

    ಬಿ.ವಿ. ಶ್ರೀನಿವಾಸ್​ ವಿರುದ್ಧ ಕಿರುಕುಳದ ಆರೋಪ; ಕಾಂಗ್ರೆಸ್​​ನಿಂದ ಮಹಿಳೆ ಉಚ್ಛಾಟನೆ

    ನವದೆಹಲಿ: ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್​ನ ಅಧ್ಯಕ್ಷ ಬಿ.ವಿ. ಶ್ರೀನಿವಾಸ್​ ವಿರುದ್ಧ ಕಿರುಕುಳದ ಆರೋಪ ಮಾಡಿದ್ದ ಮಹಿಳೆಯನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟಿಸಲಾಗಿದೆ.

    ಅಸ್ಸಾಂ ಯುವ ಕಾಂಗ್ರೆಸ್​ ರಾಜ್ಯ ಘಟಕದ ಅಧ್ಯಕ್ಷೆ ಅಂಗ್ಕಿತಾ ದತ್ತಾ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಆಗಿರುವವರು.

    ಮಾನಸಿಕ ಹಿಂಸೆ

    ಇತ್ತೀಚಿಗೆ ಅಂಗ್ಕಿತಾ ದತ್ತಾ ಯುವ ಕಾಂಗ್ರೆಸ್​ನ ಹಾಲಿ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಹಾಗೂ ಮಾಜಿ ಅಧ್ಯಕ್ಷ ಕೇಶವ್​ ಕುಮಾರ್​ ತಮ್ಮಗೆ ಲೈಂಗಿಕ ಕಿರುಕುಳ ಹಾಗೂ ಮಾನಸಿಕವಾಗಿ ಹಿಂಸೆಯನ್ನು ನೀಡಿದ್ಧಾರೆ ಎಂದು ಆರೋಪಿಸಿದ್ದರು.

    ಬಿ.ವಿ. ಶ್ರೀನಿವಾಸ್​ ಒಬ್ಬಮಹಿಳಾ ವಿರೋಧಿಯಾಗಿದ್ದು ಪ್ರತಿಯೊಂದರಲ್ಲು ಲಿಂಗ ಭೇದ ಮಾಡುತ್ತಾರೆ. ಈ ವಿಚಾರವಾಗಿ ನಾಣು ಕಾಂಗ್ರೆಸ್​ ನಾಯಕರ ಗಮನ್ಕಕೂ ತಂದಿದ್ಧೇನೆ. ಆದರೆ, ಯಾರು ವಿಚಾರಣೆ ನಡೆಸುವ ಗೋಜಿಗೆ ಹೋಗಲಿಲ್ಲ ಎಂದು ದೂರಿದ್ದರು.

    ಬಿ.ವಿ. ಶ್ರೀನಿವಾಸ್​ ವಿರುದ್ಧ ಕಿರುಕುಳದ ಆರೋಪ; ಕಾಂಗ್ರೆಸ್​​ನಿಂದ ಮಹಿಳೆ ಉಚ್ಛಾಟನೆ

    ಇದನ್ನೂ ಓದಿ: ಬಿ.ವಿ. ಶ್ರೀನಿವಾಸ್ ವಿರುದ್ಧ ಗಂಭೀರ ಆರೋಪ ಹೊರಿಸಿದ ಯುವಕಾಂಗ್ರೆಸ್ ಕಾರ್ಯಕರ್ತೆ!

    ಉಚ್ಛಾಟನೆ

    ಅಂಗ್ಕಿತಾ ದತ್ತಾ ಆರೋಫದ ಬೆನ್ನಲ್ಲೇ ಕಾಂಗ್ರೆಸ್​ ಶಿಸ್ತುಪಾಲನಾ ಸಮಿತಿ ತನಿಖೆ ನಡೆಸಿದ್ದು ಮಹಿಳೆ ಮಾಡಿರುವ ಆರೋಪಗಳು ಆಧಾರರಹಿತವಾಗಿದ್ದು ರಾಜಕೀಯ ದುರುದ್ದೇಶದಿಂದ ಹೇಳಲಾಗಿದೆ.

    ಪಕ್ಷದ ನಾಯಕರ ಮೇಲೆ ಸುಖಾ ಸುಮ್ಮನೆ ಆರೋಪ ಮಾಡಿರುವ ಮಹಿಳೆಯನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ಕಾಂಗ್ರೆಸ್​ ಪಕ್ಷ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

    ಇದು ಮಹಿಳಾ ಸಬಲೀಕರಣ

    ಪಕ್ಷ ವಿರೋಧಿ ಹೇಳಿಕೆಯನ್ನು ನೀಡಿದ್ದ ಮಹಿಳೆಯನ್ನು ಉಚ್ಛಾಟಿಸಿರುವ ಕಾಂಗ್ರೆಸ್​ ನಡೆಯನ್ನು ಖಂಡಿಸಿ ಬಿಜೆಪಿ ರಾಷ್ಟ್ರೀಯ ವಕ್ತಾರ ಅಮಿತ್​ ಮಾಳವಿಯಾ ಟ್ವೀಟ್​ ಮಾಡಿದ್ದು ಇದು ಮಹಿಳಾ ಸಬಲೀಕರಣದ ಮಾದರಿ ಎಂದು ಟೀಕಿಸಿದ್ದಾರೆ.

    ಮಹಿಳೆಯರಿಗೆ ಸಮಾನವಾದ ವೇದಿಕೆ ಒದಗಿಸುವ ಬದಲು ಕಿರುಕುಳ ಆರೋಪ ಮಾಡಿದವರನ್ನು ಪಕ್ಷದಿಂದ ಉಚ್ಛಾಟಿಸಿರುವುದು ಸ್ಪೂರ್ತಿದಾಯಕ ಅಲ್ಲ ಎಂದು ಟ್ವೀಟ್​ ಮಾಡಿ ಪ್ರತಿಕ್ರಿಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts