ದೆಹಲಿ ನೀರಿನ ಸಮಸ್ಯೆ : 137 ಕ್ಯೂಸೆಕ್​​ ಹೆಚ್ಚುವರಿ ನೀರು ಬಿಡುವಂತೆ ಹಿಮಾಚಲಪ್ರದೇಶಕ್ಕೆ ಸುಪ್ರೀಂಕೋರ್ಟ್​ ಸೂಚನೆ

1 Min Read
ದೆಹಲಿ ನೀರಿನ ಸಮಸ್ಯೆ : 137 ಕ್ಯೂಸೆಕ್​​ ಹೆಚ್ಚುವರಿ ನೀರು ಬಿಡುವಂತೆ ಹಿಮಾಚಲಪ್ರದೇಶಕ್ಕೆ ಸುಪ್ರೀಂಕೋರ್ಟ್​ ಸೂಚನೆ

ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ಉಂಟಾಗಿರುವ ನೀರಿನ ಕೊರತೆಯನ್ನು ಪರಿಹರಿಸಲು ಸುಪ್ರೀಂಕೋರ್ಟ್​​​ ಹಿಮಾಚಲ ಪ್ರದೇಶ ಸರ್ಕಾರ 137 ಕ್ಯೂಸೆಕ್​ ಹೆಚ್ಚುವರಿ ನೀರನ್ನು ದೆಹಲಿಗೆ ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಿದೆ.

ಇದನ್ನು ಓದಿ: ಮಸಾಲೆ ಪದಾರ್ಥಗಳಲ್ಲಿ ಕಲಬೆರೆಕೆ ಚಿಂತೆಯೇ: ಅಸಲಿಯೋ ಅಥವಾ ನಕಲಿಯೋ ಎಂದು ಗುರುತಿಸುವುದು ಹೀಗೆ

ಹೆಚ್ಚುವರಿ ನೀರನ್ನು ದೆಹಲಿಗೆ ಬಿಡುಗಡೆ ಮಾಡಲು ಹಿಮಾಚಲ ಪ್ರದೇಶ ಸರ್ಕಾರ ಒಪ್ಪಿಗೆ ನೀಡಿದೆ ಎಂದಿರುವ ಸುಪ್ರೀಂಕೋರ್ಟ್​​, ಹತ್ನಿಕುಂಡ್ ಬ್ಯಾರೇಜ್‌ನಿಂದ ಬಿಡುಗಡೆಗೊಂಡ ನೀರನ್ನು ವಜೀರಾಬಾದ್‌ಗೆ ತಲುಪಿಸಲು ಸಹಾಯ ಮಾಡಬೇಕೆಂದು ಹರಿಯಾಣ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ. ಇದರಿಂದ ದೆಹಲಿಯ ಜನರು ಯಾವುದೇ ಅಡೆತಡೆಯಿಲ್ಲದೆ ಕುಡಿಯುವ ನೀರು ಪಡೆಯಬಹುದು. ಅಲ್ಲದೆ ನೀರಿನ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡದಂತೆ ಹಾಗೂ ನೀರು ಪೋಲು ಮಾಡಿದಂತೆ ದೆಹಲಿ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ಎಚ್ಚರಿಕೆ ನೀಡಿದೆ.

ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಕೆವಿ ವಿಶ್ವನಾಥನ್ ಅವರ ರಜಾಕಾಲದ ಪೀಠವು ಜೂನ್​ 7ರಿಂದಲೇ ನೀರು ಬಿಡುಗಡೆ ಮಾಡುವಂತೆ ಸೂಚಿಸಿದೆ. ಜೂನ್ 10ರೊಳಗೆ ಈ ವಿಷಯದ ಬಗ್ಗೆ ವರದಿಗಳನ್ನು ಸಲ್ಲಿಸುವಂತೆ ನ್ಯಾಯಾಲಯವು ಎಲ್ಲ ಪಕ್ಷಗಳನ್ನು ಕೇಳಿದೆ.

ಕಳೆದ ವಾರ ದೆಹಲಿ ಸರ್ಕಾರವು ನೆರೆಯ ರಾಜ್ಯಗಳಾದ ಹರಿಯಾಣ, ಉತ್ತರಪ್ರದೇಶ ಮತ್ತು ಹಿಮಾಚಲ ಪ್ರದೇಶದಿಂದ ಹೆಚ್ಚುವರಿ ನೀರು ಸರಬರಾಜು ಮಾಡುವಂತೆ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿತು. (ಏಜೆನ್ಸೀಸ್​​)

ಹೀಟ್​ವೇವ್​ನಿಂದ ಹೃದಯ ಸಂಬಂಧಿ ಕಾಯಿಲೆ ಹೆಚ್ಚಳ : ಅಪಾಯವನ್ನು ಕಡಿಮೆ ಮಾಡಲು ಇಲ್ಲಿದೆ ಕೆಲವು ಮಾರ್ಗ

See also  ಬಾಲಕಿಯನ್ನು ಕಾಪಾಡಲು ಹೋದವರನ್ನು ಒಬ್ಬರ ಹಿಂದೆ ಒಬ್ಬರಂತೆ ಹೊತ್ತೊಯ್ದ ಜವರಾಯ..!
Share This Article