ಮಸಾಲೆ ಪದಾರ್ಥಗಳಲ್ಲಿ ಕಲಬೆರೆಕೆ ಚಿಂತೆಯೇ: ಅಸಲಿಯೋ ಅಥವಾ ನಕಲಿಯೋ ಎಂದು ಗುರುತಿಸುವುದು ಹೀಗೆ

Untitled-design-16-2
Published on

ಭಾರತೀಯ ಆಹಾರದಲ್ಲಿ ಮಸಾಲೆಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ನಾವು ವಿಶ್ವದ ಅತಿದೊಡ್ಡ ಮಸಾಲೆ ತಯಾರಕರಾಗಿದ್ದೇವೆ, ಆದರೆ ಇತ್ತೀಚೆಗೆ ದೇಶದ ಎರಡು ದೊಡ್ಡ ಮಸಾಲೆ ಬ್ರಾಂಡ್‌ಗಳ ಬಗ್ಗೆ ಅನೇಕ ಪ್ರಶ್ನೆಗಳು ಉದ್ಭವಿಸಿವೆ. ಇಂತಹ ಪರಿಸ್ಥಿತಿಯಲ್ಲಿ ಅಭಿರುಚಿಯ ಜತೆಗೆ ಪದಾರ್ಥಗಳ ಶುದ್ಧತೆ ಬಗ್ಗೆಯೂ ಕಾಳಜಿ ವಹಿಸುವುದು ಮುಖ್ಯವಾಗುತ್ತದೆ. ಮಸಾಲೆಗಳಲ್ಲಿ ಮಾಡಿದ ಕಲಬೆರಕೆಯನ್ನು ಪರಿಶೀಲಿಸಬಹುದು ಹೇಗೆ ಎಂದು ಚಿಂತಿಸುತಿದ್ದೀರಾ.. ಇಲ್ಲಿ ಕೆಲವು ಸುಲಭ ಟಿಪ್ಸ್​​​ ನೀಡಲಾಗಿದೆ.

  • ಧನಿಯಾ ಪುಡಿ (ಕೊತ್ತಂಬರಿ ಪುಡಿ): ಧನಿಯ ಪುಡಿಗೆ ಹಿಟ್ಟಿನ ಸಿಪ್ಪೆ ಮತ್ತು ಕಾಡು ಹುಲ್ಲು ಮುಂತಾದ ವಸ್ತುಗಳನ್ನು ಸೇರಿಸಲಾಗುತ್ತದೆ. ಒಂದು ಲೋಟದಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ಒಂದು ಚಮಚ ಕೊತ್ತಂಬರಿ ಪುಡಿಯನ್ನು ಸೇರಿಸಿ. ಇದಾದ ನಂತರ ಈ ನೀರನ್ನು 30 ನಿಮಿಷ ಬಿಡಿ, ಮೇಲೆ ಕೊತ್ತಂಬರಿ ಸೊಪ್ಪು ತೇಲುತ್ತಿರುವುದು ಕಂಡು ಬಂದರೆ ಅದರಲ್ಲಿ ಹೊಟ್ಟು ಬೆರೆತಿರುವುದು ಖಚಿತವಾಗಿದ್ದು, ಲೋಟದ ಕೆಳಭಾಗಕ್ಕೆ ಹೋದರೆ ಧನಿಯಾ ಪುಡಿ ಕಲಬೆರಕೆ ಆಗಲ್ಲ ಎಂದು ಅರ್ಥ.
  • ಅರಿಶಿನ ಪುಡಿ: ಮನೆಯಲ್ಲಿ ಅರಿಶಿನ ಪುಡಿಯ ಶುದ್ಧತೆಯನ್ನು ಪರೀಕ್ಷಿಸಲು ಅದಕ್ಕೆ ಸ್ವಲ್ಪ ಹೈಡ್ರೋಕ್ಲೋರಿಕ್ ಆಮ್ಲವನ್ನು ಸೇರಿಸಿ. ಇದಾದ ನಂತರ ಅದರ ಬಣ್ಣ ಹಳದಿ ಬಣ್ಣದಿಂದ ಗುಲಾಬಿ, ನೇರಳೆ ಅಥವಾ ನೀಲಿ ಬಣ್ಣಕ್ಕೆ ಬದಲಾದರೆ ಅರಿಶಿನ ಪುಡಿ ಕಲಬೆರಕೆ ಎಂದರ್ಥ. ಅರಿಶೀನ ಪುಡಿಗೆ ಮೆಟಾನಿಲ್ ಹಳದಿ ರಾಸಾಯನಿಕವನ್ನು ಅದರಲ್ಲಿ ಕಲಬೆರಕೆ ಮಾಡಲಾಗಿದೆ ಎಂದು ಅರ್ಥಮಾಡಿಕೊಳ್ಳಿ. ನಿಜವಾದ ಅರಿಶಿನ ಪುಡಿ ನೀರಿಗೆ ಸೇರಿಸಿದಾಗ, ಅದರ ಬಣ್ಣವು ತಿಳಿ ಹಳದಿಯಾಗಿ ಕಾಣುತ್ತದೆ. ಕಲಬೆರಕೆ ಇದ್ದರೆ ನೀರು ಪ್ರಕಾಶಮಾನವಾದ ಹಳದಿ ಬಣ್ಣಕ್ಕೆ ಬದಲಾಗುತ್ತದೆ.
  • ಮೆಣಸಿನ ಪುಡಿ (ಚಿಲ್ಲ ಪೌಡರ್​​): ಮೆಣಸಿನ ಪುಡಿ ಅಸಲಿಯೋ ನಕಲಿಯೋ ಎಂದು ಪರೀಕ್ಷಿಸಲು, ಒಂದು ಲೋಟ ನೀರಿನಲ್ಲಿ ಒಂದು ಚಮಚ ಮೆಣಸಿನ ಪುಡಿಯನ್ನು ಹಾಕಿ, ನಂತರ ಅದು ಕರಗಿದರೆ ನಿಜವೆಂದು ಅರ್ಥಮಾಡಿಕೊಳ್ಳಿ. ಮೆಣಸಿನ ಪುಡಿಗೆ ರಾಸಾಯನಿಕ ಬಣ್ಣ, ಸೀಮೆಸುಣ್ಣ ಅಥವಾ ಕೆಂಪು ಇಟ್ಟಿಗೆಯಂತಹ ವಸ್ತುಗಳನ್ನು ಕಲಬೆರಕೆ ಮಾಡಲಾಗುತ್ತದೆ.
  • ಕಲ್ಲುಪ್ಪು : ಕಲ್ಲುಪ್ಪಿನ ಶುದ್ಧತೆಯನ್ನು ಪರೀಕ್ಷಿಸಲು, ಮೊದಲು ಆಲೂಗಡ್ಡೆಯನ್ನು ತೆಗೆದುಕೊಂಡು ಅದನ್ನು ಎರಡು ಭಾಗವಾಗಿ ಕತ್ತರಿಸಿ. ನಂತರ ಎರಡು ಭಾಗಮಾಡಿದ ಆಲೂಗಡ್ಡೆ ಮಧ್ಯದಲ್ಲಿ ಕಲ್ಲು ಉಪ್ಪು ಸೇರಿಸಿ ಹನಿ ನಿಂಬೆ ರಸವನ್ನು ಸೇರಿಸಿ. ಕಲ್ಲು ಉಪ್ಪು ಅಸಲಿಯಾಗಿದ್ದರೆ ಏನೂ ಆಗುವುದಿಲ್ಲ, ಆದೆ ಕಲಬೆರಕೆ ಮಾಡಿದರೆ ಅದರ ಬಣ್ಣ ಬದಲಾಗುತ್ತದೆ.
  • ಕರಿಮೆಣಸು : ಪೋಷಕಾಂಶಗಳ ಖಜಾನೆ ಎಂದು ಪರಿಗಣಿಸಲಾಗುವ ಕರಿ ಮೆಣಸಿಗೆ ಒಣಗಿದ ಪಪ್ಪಾಯಿ ಕಾಳುಗಳನ್ನು ಬೆರೆಸಲಾಗುತ್ತದೆ. ಒಂದು ಲೋಟ ನೀರು ತೆಗೆದುಕೊಂಡು ಅದರಲ್ಲಿ ಒಂದು ಚಮಚ ಕರಿಮೆಣಸನ್ನು ಹಾಕಿ ನೋಡಿ, ಅದು ನೀರಿನ ಮೇಲೆ ತೇಲಲು ಪ್ರಾರಂಭಿಸಿದರೆ ಅದು ಕಲಬೆರಕೆಯಾಗಿದೆ ಎಂದು ಅರ್ಥಮಾಡಿಕೊಳ್ಳಿ. ಆದರೆ ಅದು ಮುಳುಗಿದರೆ ಅದು ಕಲಬೆರಕೆ ಆಗಿಲ್ಲ ಎಂದು ಅರ್ಥ ಮಾಡಿಕೊಳ್ಳಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net