

ಲವ್ ಕಾ ದಿ ಎಂಡ್ ಸಿನಿಮಾದ ಮೂಲಕ ಮಾಡಿದ ನಟ ತಾಹಾ ಶಾ ಬಾದುಸ್ಷಾ ಬಾಲಿವುಡ್ಗೆ ಪದಾರ್ಪಣೆ ಮಾಡಿದರು, ಸಂಜಯ್ ಲೀಲಾ ಬನ್ಸಾಲಿಯವರ ಹೀರಾಮಂಡಿ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ಪಡೆಯುವ ಮೂಲಕ ಹೆಚ್ಚು ಜನಪ್ರಿಯರಾದರು. ಚಿತ್ರರಂಗದಲ್ಲಿ ಹಲವು ವರ್ಷಗಳ ಹೋರಾಟದ ಜತೆಗೆ ಸತತ ಪ್ರಯತ್ನದ ಬಳಿಕ ಅವರಿಗೆ ಈ ಸ್ಟಾರ್ಡಮ್ ಸಿಕ್ಕಿದೆ. ಹೀರಾಮಂಡಿಯಲ್ಲಿನ ಅವರ ನಟನೆಯನ್ನು ಮೆಚ್ಚಿದ ಅಭಿಮಾನಿಗಳು ತಾಹಾ ಅವರ ಸ್ಟಾರ್ಡಮ್ ಪ್ರಯಾಣವನ್ನು ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಹೋಲಿಸಿದ್ದಾರೆ. ಅಲ್ಲದೆ ತಾಹಾ ಅವರನ್ನು ನ್ಯೂ ಸುಶಾಂತ್ ಸಿಂಗ್ ರಜಪೂತ್ ಎಂದು ಕರೆದಿದ್ದಾರೆ.
ಅಭಿಮಾನಿಗಳು ಅವರನ್ನು ಸುಶಾಂತ್ ಸಿಂಗ್ ರಜಪೂತ್ ಎಂದು ಕರೆದಿರುವುದರ ಬಗ್ಗೆ ಇತ್ತೀಚೆಗೆ ಮಾತನಾಡಿದ ನಟ ತಾಹಾ, ಅಭಿಮಾನಿಗಳು ನನ್ನನ್ನು ಹೊಸ ಸುಶಾಂತ್ ಎಂದು ಕರೆದಿದ್ದಾರೆ. ಅದು ಎಷ್ಟು ಅದ್ಭುತವಾಗಿದೆ? ಯಾಕೆಂದರೆ ಸುಶಾಂತ್ ಅವರಿಗೆ ಅಭಿಮಾನಿಗಳು ಎಷ್ಟು ಪ್ರೀತಿ ಕೊಟ್ಟಿದ್ದರು ಎಂಬುದು ನನಗೆ ಗೊತ್ತು. ಅವರ ನಿರೀಕ್ಷೆಗಳಿಗೆ ತಕ್ಕಂತೆ ಬದುಕಲು ಆಶಿಸುತ್ತೇನೆ ಮತ್ತು ಅದನ್ನು ಮುಂದಕ್ಕೆ ಕೊಂಡೊಯ್ಯಲು ಬಯಸುತ್ತೇನೆ ಎಂದಿದ್ದಾರೆ.
ಸುಶಾಂತ್ ಸಿಂಗ್ ಬಗ್ಗೆ ಮಾತನಾಡಿದ ತಾಹಾ, ನಾನು ಸುಶಾಂತ್ ಅವರನ್ನು ವೈಯಕ್ತಿಕವಾಗಿ ತಿಳಿದಿದ್ದೇನೆ. ಸುಶಾಂತ್ ಸಿಂಗ್ ಅವರು ತುಂಬಾ ತಾತ್ವಿಕ ಮತ್ತು ಬುದ್ಧಿವಂತ ವ್ಯಕ್ತಿ. ಅವರು ಪುಸ್ತಕಗಳ ಬಗ್ಗೆ ಸಾಕಷ್ಟು ಮಾತನಾಡುತ್ತಿದ್ದರು ಎಂದು ನೆನಪಿಸಿಕೊಂಡರು.
ಹೀರಾಮಂಡಿಯಲ್ಲಿನ ಅವರ ಪಾತ್ರಕ್ಕಾಗಿ ತಾಹಾ ಅವರನ್ನು ಅಭಿಮಾನಿಗಳು ನ್ಯಾಷನಲ್ ಕ್ರಶ್ ಎಂದು ಸಹ ಕರೆದಿದ್ದಾರೆ. ಈ ಸರಣಿಯ ಜನಪ್ರಿಯತೆಯಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಅವರ ಫಾಲೋಯಿಂಗ್ ಗಣನೀಯವಾಗಿ ಹೆಚ್ಚಾಗಿದೆ. ವೆಬ್ ಸರಣಿಯು ಬಿಡುಗಡೆಯಾಗುವ ಮೊದಲು ಇನ್ಸ್ಟಾಗ್ರಾಮ್ಲ್ಲಿ ಇದ್ದ 183k ಫಾಲೋವರ್ಸ್ ಸದ್ಯ ಸುಮಾರು 2 ಮಿಲಿಯನ್ಗೆ ಏರಿದೆ. (ಏಜೆನ್ಸೀಸ್)