ನಾಗಚೈತನ್ಯ ಜತೆಗಿನ ಶೋಭಿತಾ ಫೋಟೋ ವೈರಲ್​ : ಅಸಮಾಧಾನ ಹೊರಹಾಕಿದ ನೆಟ್ಟಿಗರು

Untitled-design-12-1
Published on

ದಕ್ಷಿಣ ಭಾರತದ ಸ್ಟಾರ್ ನಟ ನಾಗಚೈತನ್ಯ ಮತ್ತು ನಟಿ ಸಮಂತಾ ರುತ್ ಪ್ರಭು 2017ರಲ್ಲಿ ವಿವಾಹವಾದರು. ಆದರೆ ಅವರ ಸಂಬಂಧವು ಹೆಚ್ಚು ಕಾಲ ಉಳಿಯಲಿಲ್ಲ. 2021ರಲ್ಲಿ ನಾಲ್ಕು ವರ್ಷಗಳ ನಂತರ ಇಬ್ಬರು ಬೇರ್ಪಟ್ಟರು. ಇದಾದ ಕೆಲವೇ ದಿನಗಳಲ್ಲಿ ಚೈತನ್ಯ ನಟಿ ಶೋಭಿತಾ ಧೂಳಿಪಾಲ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿದ್ದವು. ಆದರೆ, ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದೀಗ ಈ ಜೋಡಿ ಮತ್ತೊಮ್ಮೆ ಸುದ್ದಿಯಲ್ಲಿದೆ.

ತಮ್ಮ ಸಂಬಂಧದ ಬಗ್ಗೆ ಶೋಭಿತಾ ಧೂಳಿಪಾಲ ಅಥವಾ ನಾಗ ಚೈತನ್ಯ ಅಧಿಕೃತವಾಗಿ ಏನನ್ನೂ ಹೇಳದಿದ್ದರೂ, ಅವರು ವಿದೇಶ ಪ್ರವಾಸದಲ್ಲಿರುವ ಫೋಟೊ ವೈರಲ್​ ಆಗುತ್ತಿದ್ದು, ಡೇಟಿಂಗ್​ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದಂತಿದೆ. ಫೋಟೋದಲ್ಲಿ ಚೈತನ್ಯ ಮತ್ತು ಶೋಭಿತಾ ವೈನ್ ರುಚಿಯನ್ನು ಆನಂದಿಸುತ್ತಿರುವುದನ್ನು ಕಾಣಬಹುದಾಗಿದೆ. ಶೋಭಿತಾ ಅವರ 32ನೇ ಹುಟ್ಟುಹಬ್ಬವನ್ನು ಆಚರಿಸಲು ಇಬ್ಬರೂ ಯುರೋಪ್​​ ಹೋಗಿದ್ದಾರೆ ಎನ್ನಲಾಗಿದೆ. ಈ ಹಿಂದೆ ನಾಗಚೈತನ್ಯ ಮತ್ತು ಶೋಭಿತಾ ಜಂಗಲ್ ಸಫಾರಿಯ ಫೋಟೋಗಳನ್ನು ಪ್ರತ್ಯೇಕವಾಗಿ ಹಂಚಿಕೊಂಡಿದ್ದರು.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ಚೈತನ್ಯ ಮತ್ತು ಶೋಭಿತಾ ಫೋಟೋಗಳಿಗೆ ನೆಟಿಜನ್‌ಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಫೋಟೋಗಳನ್ನು ನೋಡಿ ಕೆಲವರು ಅವರನ್ನು ಸಮಂತಾ-ನಾಗ ಚೈತನ್ಯ ಸಂಸಾರ ಒಡೆದಿದ್ದೀ ಶೋಭಿತಾ ಎಂದು ಆರೋಪಿಸಿದ್ದಾರೆ. ಸಮಂತಾ-ನಾಗ ಚೈತನ್ಯ ಡಿವೋರ್ಸ್ ಆದ ನಂತರ ಶೋಭಿತಾ ಸೀನ್​ಗೆ ಎಂಟ್ರಿಯಾಗಿದ್ದರೂ ಸಹ ಯುವ ನಟಿಯನ್ನು ಸಂಸಾರ ಒಡೆದಾಕೆ ಎಂದಿದ್ದಾರೆ ನೆಟ್ಟಿಗರು. ಈ ವಿಚಾರವಾಗಿ ಶೋಭಿತಾ ಧೂಳಿಪಾಲ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ. ಇನ್ನು ಕೆಲವರು ಸುಮ್ನನೆ ಬೇರೆಯವರ ಸಂಸಾರ ಕೆಡಿಸುವುದನ್ನು ಬಿಟ್ಟು ಸ್ವಲ್ಪ ಸಿನಿಮಾ ಕಡೆ ಗಮನ ಕೊಡಿ ಎಂದಿದ್ದಾರೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net